»   » ಉಪೇಂದ್ರ ಅವರ ಪ್ರಜಾಕೀಯಕ್ಕೆ ಜೈ ಎಂದ ಗೆಳೆಯ ಶಿವಣ್ಣ

ಉಪೇಂದ್ರ ಅವರ ಪ್ರಜಾಕೀಯಕ್ಕೆ ಜೈ ಎಂದ ಗೆಳೆಯ ಶಿವಣ್ಣ

Posted By:
Subscribe to Filmibeat Kannada

ನಟ ಶಿವರಾಜ್ ಕುಮಾರ್ ಅವರ ಸಾರಥ್ಯದಲ್ಲಿ ಬರುತ್ತಿರುವ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಬಂದಿದ್ದ ಉಪೇಂದ್ರ ಅನೇಕ ವಿಷಯಗಳನ್ನು ಮುಕ್ತವಾಗಿ ಮಾತನಾಡಿದರು. ಅದರಲ್ಲಿಯೂ ಶಿವಣ್ಣ ಉಪೇಂದ್ರ ಅವರ ಪ್ರಜಾಕೀಯ ಕುರಿತು ತಮ್ಮ ಅಭಿಪ್ರಾಯ ತಿಳಿಸಿದರು.

''ನೀವು ಸಿಎಂ ಆದರೆ ಮೊದಲು ಮಾಡುವ ಕೆಲಸ ಏನು?'' ಎಂದು ಶಿವಣ್ಣ ಕೇಳಿದರು. ಆಗ ಉಪೇಂದ್ರ ''ಮೊದಲು ನಾನು ವಿಧಾನಸೌಧಕ್ಕೆ ಬೀಗ ಹಾಕುತ್ತೇನೆ. ಯಾಕೆಂದರೆ, ಅಲ್ಲಿ ಎಲ್ಲರೂ ರಾಜರ ರೀತಿ ಅರಮನೆ ಕಟ್ಟಿಕೊಂಡಿದ್ದಾರೆ. ಆದರೆ ನಾನು ಹೇಳುತ್ತಿರುವ ಪ್ರಜಾಕೀಯದಲ್ಲಿ ಅವರು ತಮ್ಮ ತಮ್ಮ ಕ್ಷೇತ್ರದಲ್ಲಿ ಪ್ರಜೆಗಳ ಜೊತೆಗೆ ಕೆಲಸ ಮಾಡಬೇಕಾಗುತ್ತದೆ.'' ಎಂದು ಉತ್ತರಿಸಿದರು.

ಉಪ್ಪಿ ಮಾತನ್ನು ಮುಂದುವರೆಸಿದ ಶಿವಣ್ಣ ''ನೀವು ವ್ಯವಸ್ಥೆ ಸರಿ ಮಾಡಲು ಸಿನಿಮಾದ ರೀತಿ ಯೋಚನೆ ಮಾಡಿದ್ದು ನನಗೆ ತುಂಬ ಇಷ್ಟ ಆಯ್ತು. ಬೇರೆ ಯಾರು ಯಾರೋ ರಾಜಕೀಯಕ್ಕೆ ಬಂದರು.'' ಎಂದು ಹಿಂದಿಯಲ್ಲಿ ''ಆಕೇ ಜೀವನ್ ಮೇ ಕುಚ್ ನಾಹಿ ಕಿಯಾ, ತೂ ಆಕೇ ಪ್ರಜಾಕೀಯ.'. ನೀವು ಜನರಿಗೆ ಏನನ್ನು ಹೇಳುತ್ತಿದ್ದೀರಾ ಅದನ್ನು ಜನ ಸರಿಯಾರಿ ಅರ್ಥ ಮಾಡಿಕೊಂಡರೆ ಇದು ನಿಜಕ್ಕೂ ಬೆಸ್ಟ್ ವಿಷಯ. ತುಂಬ ಸುಂದರ ಕಾನ್ಸೆಪ್ಟ್ ನೀವು ಮಾಡಿದ್ದೀರಾ. ನಿಮಗೆ ದೇವರು ಆಶೀರ್ವಾದ ಮಾಡುತ್ತಾನೆ.'' ಎಂದು ಉಪ್ಪಿಗೆ ಶುಭ ಕೋರಿದರು.

Shivaraj kumar supports Upendra's prajakeeya

ಶಿವಣ್ಣ ಮಾತುಗಳನ್ನು ಕೇಳಿ ಉಪೇಂದ್ರ ಸಖತ್ ಖುಷಿ ಆದರು. ಉಪ್ಪಿ ಆನಂದ ಅವರ ಕಣ್ಣುಗಳಲ್ಲಿ ಕಾಣುತ್ತಿತ್ತು. ಅದರ ಜೊತೆಗೆ ಗುರುಕಿರಣ್ ಕೂಡ ಉಪ್ಪಿ ಗೆಲ್ಲುತ್ತಾರೆ ಎಂದು ಒಬ್ಬ ಗೆಳೆಯನಾಗಿ ವಿಶ್ ಮಾಡಿದರು.

English summary
Kannada actor Shivaraj kumar supports Real star Upendra's Prajakeeya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada