Don't Miss!
- News
World Cancer Day 2023: ವಿಶ್ವ ಕ್ಯಾನ್ಸರ್ ದಿನ- ನಿಮ್ಮ ಜೀವನಶೈಲಿಯಲ್ಲಿರಲಿ ಈ ಬದಲಾವಣೆಗಳು
- Technology
ನಿಮ್ಮ ಮೊಬೈಲ್ನಲ್ಲಿ ಹೀಗೆ ಮಾಡಿ, ಸುಲಭವಾಗಿ ತಿಂಗಳ ಆದಾಯ ಗಳಿಸಿ!
- Sports
ಭಾರತ vs ಆಸ್ಟ್ರೇಲಿಯಾ: ಸುಂದರ್ ಸೇರಿ ನಾಲ್ವರು ಸ್ಪಿನ್ನರ್ಗಳು ನೆಟ್ ಬೌಲರ್ಗಳಾಗಿ ತಂಡಕ್ಕೆ ಸೇರ್ಪಡೆ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Automobiles
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕೊರೊನಾ ಸಂಕಷ್ಟ ದಾಟಿ ಮುಂದೆ ಸಾಗುತ್ತಿರುವ 'ಸ್ಮೈಲ್ ಗುರು' ರಕ್ಷಿತ್
'ಸ್ಮೈಲ್ ಗುರು' ಕಿರುಚಿತ್ರದ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ ನಟ, ನೃತ್ಯಪಟು ಸ್ಮೈಲ್ ಗುರು ರಕ್ಷಿತ್ ಖುಷಿಯ ದಿನಗಳನ್ನು ನೋಡುತ್ತಿದ್ದಾರೆ.
ಕೆಲವು ಧಾರಾವಾಹಿಗಳಲ್ಲಿಯೂ ನಟಿಸುತ್ತಿರುವ ರಕ್ಷಿತ್‌ರ ಮೊದಲ ಪ್ರೀತಿ ನೃತ್ಯ. 'ಥಕಧಿಮಿ ತಾ', 'ಡ್ಯಾನ್ಸ್ ಡ್ಯಾನ್ಸ್' ರಿಯಾಲಿಟಿ ಶೋಗಳಲ್ಲಿ ತಮ್ಮ ನೃತ್ಯ ಪ್ರತಿಭೆಯನ್ನು ಪ್ರದರ್ಶಿಸಿರುವ ರಕ್ಷಿತ್ ಬಳಿಕ ನಟನೆ, ಕಿರುಚಿತ್ರದ ಕಡೆಗೆ ಬಂದವರು. ನೃತ್ಯದ ಮೇಲಿನ ಪ್ರೀತಿಯಿಂದಾಗಿಯೇ 'ಸ್ಮೈಲ್ ಗುರು ಡ್ಯಾನ್ಸ್ ಗರಾಜ್' ಹೆಸರಲ್ಲಿ ನೃತ್ಯ ಶಾಲೆಯನ್ನು ತೆರೆದಿದ್ದಾರೆ ರಕ್ಷಿತ್.
'ಕರಿಯ'
ಮಾಡಿದ
ಕೆಲೆಕ್ಷನ್
ಎಷ್ಟು?
ಹಿಟ್
ಆಗಿದ್ದು
ಹೇಗೆ?
ಪ್ರೇಮ್
ಬಿಚ್ಚಿಟ್ಟ
ಮಾಹಿತಿ
ಜ್ಞಾನ
ಭಾರತಿಯ
ಭುವನೇಶ್ವರ
ನಗರದಲ್ಲಿ
'ಸ್ಮೈಲ್
ಗುರು
ಡ್ಯಾನ್ಸ್
ಗರಾಜ್'
ಪ್ರಾರಂಭ
ಮಾಡಿದ್ದ
ರಕ್ಷಿತ್
ಮಕ್ಕಳಿಗೆ
ಮಾತ್ರವೇ
ಅಲ್ಲದೆ
ಎಲ್ಲ
ವಯೋಮಾನದವರಿಗೂ
ನೃತ್ಯ
ತರಬೇತಿ
ನೀಡುತ್ತಿದ್ದರು.
ಕಲೆಯಾಗಿ
ಮಾತ್ರವೇ
ಅಲ್ಲದೆ
ದೈಹಿಕ
ವ್ಯಾಯಾಮವಾಗಿಯೂ
ನೃತ್ಯವನ್ನು
ಹೇಳಿಕೊಡುತ್ತಿದ್ದರು.
ಆದರೆ
ಕೊರೊನಾ
ಹೊಡೆತಕ್ಕೆ
ಸಿಲುಕಿ
ನೃತ್ಯ
ಶಾಲೆ
ತತ್ತರಿಸಿ
ಹೋಯಿತು.
'ಭೀಮ್ಲಾ
ನಾಯಕ್'
ಬಿಡುಗಡೆಗೆ
ಮುನ್ನಾ
ಭಾವುಕರಾದ
ಪವನ್
ಕಲ್ಯಾಣ್

ತೀವ್ರ ಸಂಕಷ್ಟದಲ್ಲಿದ್ದ ನೃತ್ಯ ಶಾಲೆ
ಕಷ್ಟದ ದಿನಗಳ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದ ಜೊತೆ ಮಾತನಾಡಿರುವ ಸ್ಮೈಲ್ ಗುರು ರಕ್ಷಿತ್, ''ಕೊರೊನಾದಿಂದಾಗಿ ನಮ್ಮ ನೃತ್ಯ ಶಾಲೆ ತೀವ್ರ ಸಂಕಷ್ಟ ಅನುಭವಿಸಿತು. ಕಲಿಯಲು ವಿದ್ಯಾರ್ಥಿಗಳೇ ಇಲ್ಲವಾದರು. ಶಾಲೆ ನಿರ್ವಹಣೆಗೆ ತೀವ್ರ ಹಣಕಾಸಿನ ಮುಗ್ಗಟ್ಟು ಸಹ ಎದುರಿಸಿದ್ದೆ'' ಎಂದರು.

ಸಾವಿರಾರು ಲೈಕ್ಸ್‌ಗಳು
''ಕೊರೊನಾ ಮುಗಿದ ಬಳಿಕ ನಿಧಾನಕ್ಕೆ ಮಕ್ಕಳು ಬರಲು ಆರಂಭಿಸಿದರು. ಅವರೊಟ್ಟಿಗೆ ನಾನೂ ಸೇರಿಕೊಂಡು ಕೆಲವು ಹಾಡುಗಳಿಗೆ ನೃತ್ಯ ಸಂಯೋಜಿಸಿ ಡ್ಯಾನ್ಸ್ ಮಾಡಿ ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್‌ಗಳಾಗಿ ಹಂಚಿಕೊಂಡೆವು. ಕೆಲವೇ ದಿನಗಳಲ್ಲಿ ನಮ್ಮ ರೀಲ್ಸ್‌ಗಳು 50 ಸಾವಿರ, ಲಕ್ಷ ವೀವ್ಸ್ ಗಳಿಸಲು ಆರಂಭವಾದವು. ಹಾಗೆಯೇ ಇನ್ನಷ್ಟು ಜನರಿಗೆ ಆಸಕ್ತಿ ಕೆರಳಿ ಶಾಲೆಗೆ ಬರಲು ಆರಂಭಿಸಿದರು'' ಎಂದಿದ್ದಾರೆ ರಕ್ಷಿತ್. ''ಧಾರಾವಾಹಿ ನನ್ನ ಸಹನಟರನ್ನು ಶಾಲೆಗೆ ಕರೆದು ಕೊಂಡು ಬಂದು ಕಾರ್ಯಕ್ರಮಗಳನ್ನು ಮಾಡಿದ್ದೆ'' ಎಂದು ನೆನಪಿಸಿಕೊಂಡಿದ್ದಾರೆ.

ದಾಖಲಾತಿ ಹೆಚ್ಚಳವಾಯ್ತು: ರಕ್ಷಿತ್
ಕೊರೊನಾ ಕಡಿಮೆಯಾದಂತೆ ಶಾಲೆಯ ದಾಖಲಾತಿ ಹೆಚ್ಚಳವಾಗಿದ್ದು ಈಗ ಸುಮಾರು 120 ಮಂದಿ ವಿದ್ಯಾರ್ಥಿಗಳು ನೃತ್ಯ ಕಲಿಯುತ್ತಿದ್ದಾರೆ. ಎಲ್ಲ ವಯೋಮಾನದವರು ನಮ್ಮ ಶಾಲೆಯಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ನಿಧಾನಕ್ಕೆ ಶಾಲೆ ಬೆಳೆಯುತ್ತಿದೆ. ನೃತ್ಯ ನನಗೆ ಫ್ಯಾಷನ್, ಈ ಕಲಾ ಮಾದರಿ ಹೆಚ್ಚು ಜನರಿಗೆ ತಲುಪಬೇಕು, ನೃತ್ಯ ನೀಡುವ ಆನಂದ ಹೆಚ್ಚಿನ ಜನರಿಗೆ ಧಕ್ಕಬೇಕು ಎಂಬುದು ನನ್ನ ಆಸೆ'' ಎಂದರು ರಕ್ಷಿತ್.

ಪ್ರಚಾರ ಬೇಡ ಎಂದ ಸ್ಮೈಲ್ ಗುರು ರಕ್ಷಿತ್
ವಾರಾಂತ್ಯದಲ್ಲಿ ಅನಾಥ ಮಕ್ಕಳಿಗೆ ಉಚಿತವಾಗಿ ನೃತ್ಯ ತರಬೇತಿಯನ್ನು ಸ್ಮೈಲ್ ಗುರು ರಕ್ಷಿತ್ ಅವರ ತಂಡ ನೀಡುತ್ತಿದೆಯಂತೆ. ಆದರೆ ಈ ಬಗ್ಗೆ ಪ್ರಚಾರ ಬೇಡ ಎಂಬುದು ರಕ್ಷಿತ್‌ರ ವಿನಮ್ರ ಕೋರಿಕೆ. ಜನಪ್ರಿಯ ಧಾರಾವಾಹಿಯೊಂದರಲ್ಲಿ ನಟಿಸುತ್ತಿರುವ ಸ್ಮೈಲ್ ಗುರು ರಕ್ಷಿತ್, ಇದೀಗ ಸುವರ್ಣ ಚಾನೆಲ್‌ನಲ್ಲಿ ಪ್ರಸಾರವಾಗುವ 'ಮರಳಿ ಮನಸಾಗಿದೆ' ಧಾರಾವಾಹಿಯಲ್ಲಿಯೂ ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಅವರದ್ದು ಅತಿಥಿ ಪಾತ್ರವಂತೆ. ರಿಯಾಲಿಟಿ ಶೋ ವಿನ್ನರ್ ಪಾತ್ರದಲ್ಲಿ ರಕ್ಷಿತ್ ನಟಿಸುತ್ತಿದ್ದು, ಅವರ ಎಪಿಸೋಡ್‌ನ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ.