Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಧಾರಾವಾಹಿಯ ಮದ್ವೆಯಲ್ಲಿ ಸ್ಟೆಪ್ಸ್ ಹಾಕಿದ ಡಾಲಿ ಧನಂಜಯ್, ರವಿಚಂದ್ರನ್
ಕಿರುತೆರೆಯಲ್ಲಿ ಧಾರಾವಾಹಿ ಹಾಗೂ ರಿಯಾಲಿಟಿ ಶೋ ಪ್ರಚಾರಕ್ಕಾಗಿ ಆಗಾಗ ಸಿನಿಮಾದ ಕಲಾವಿದರು, ಹೀರೊ ಹೀರೋಯಿನ್ಸ್ ಅತಿಥಿ ಪಾತ್ರಗಳಲ್ಲಿ ಮಾಡಿಸೋದು ಸರ್ವೇ ಸಾಮಾನ್ಯ. ಹೀಗೆ ಧಾರಾವಾಹಿಗಳಲ್ಲಿ ಸ್ಟಾರ್ ಸೆಲೆಬ್ರೆಟಿಗಳನ್ನು ಕರೆತಂದರೆ ಹೆಚ್ಚು ಮಂದಿ ಸೀರಿಯಲ್ ವೀಕ್ಷಣೆ ಮಾಡುತ್ತಾರೆ. ಸಾಕಷ್ಟು ಗೃಹಿಣಿಯರು ಸೀರಿಯಲ್‌ಗೆ ಅಡಿಕ್ಟ್ ಆಗಿದ್ದಾರೆ. ಸಂಜೆ ಆದ್ರೆ ಸಾಕು ಬೇಗ ಬೇಗ ಅಡುಗೆ ಕೆಲಸಗಳನ್ನು ಮುಗಿಸಿ ಧಾರಾವಾಹಿ ನೋಡಲು ಮುಂದಾಗುತ್ತಾರೆ. ಯಾರ ಮದುವೆಗೆ ಯಾರು ಅಡ್ಡಿ ಮಾಡುತ್ತಾರೆ, ಯಾರು ಯಾರನ್ನು ಪ್ರೀತಿಸುತ್ತಾರೆ, ಅತ್ತೆ ಸೋಸೆಯ ಕಣ್ಣೀರ ಕಥೆ ಹೀಗೆ ಸಾಕಷ್ಟು ಕಥೆಗಳನ್ನು ಹೊತ್ತು ಅದೆಷ್ಟೋ ಸೀರಿಯಲ್‌ಗಳು ಈಗಾಗಲೇ ಮನೆಮಾತಾಗಿದೆ. ಅದರಲ್ಲಿ ಒಂದು ಝೀ ವಾಹಿನಿಯ ಗಟ್ಟಿಮೇಳ ಸೀರಿಯಲ್.
ಝೀ ಕನ್ನಡದಲ್ಲಿ ಈಗಾಗಲೇ ಮೇಗಾ ಸೀರಿಯಲ್ ಎಪಿಸೋಡ್‌ಗಳು ನಡೆಯುತ್ತಿವೆ. ಈ ಒಂದು ವಾರಗಳವರೆಗೂ ಪ್ರೇಕ್ಷಕರಿಗೆ ರಸದೌತಣ ನೀಡಲು ಸಜ್ಜಾಗಿರುವ ವಾಹಿನಿ ಪ್ರತೀ ಧಾರಾವಾಹಿಯಲ್ಲೂ ಒಂದೊಂದು ಪ್ರಮುಖ ಘಟ್ಟವನ್ನು ತಲುಪಿದೆ. ಸೀರಿಯಲ್ ಪ್ರಿಯರಿಗೆ ಇದು ಸಾಕಷ್ಟು ಖುಷಿ ತಂದಿದ್ದು, ಗಟ್ಟಿಮೇಳ ಧಾರಾವಾಹಿಯಲ್ಲಿ ಸದ್ಯ ವೇದಾಂತ್ ಮತ್ತು ಅಮೂಲ್ಯ ಆರತಕ್ಷತೆ ಎಪಿಸೋಡ್‌ಗಳು ಒಂದು ವಾರದಿಂದ ನಡೆಯುತ್ತಿದ್ದು, ಆರತಕ್ಷತೆ ಎಪಿಸೋಡ್‌ಗೆ ಸ್ಯಾಂಡಲ್‌ವುಡ್‌ನ ಡಾಲಿ ಧನಂಜಯ್ ಮತ್ತು ರವಿಚಂದ್ರನ್ ಎಂಟ್ರಿ ಕೊಟ್ಟಿದ್ದಾರೆ.
ಅಮ್ಮು ಮತ್ತು ವೇದಾಂತ್ ಮದುವೆ ಹಲವು ಅಡೆತಡೆಗಳ ನಡುವೆಯೂ ಯಶಸ್ವಿಯಾಗಿದೆ. ಇದು ಸಾಕಷ್ಟು ಸೀರಿಯಲ್ ಪ್ರೀಯರಿಗೂ ಈ ತಿರುವು ಇಷ್ಟವಾಗಿದೆ. ವೇದಾಂತ್ ಮತ್ತು ಅಮೂಲ್ಯ ಜೋಡಿಗೆ ಸಾಕಷ್ಟು ಅಭಿಮಾನಿಗಳಿದ್ದು, ಸೀರಿಯಲ್‌ನ ಈ ಒಂದು ಸನ್ನಿವೇಶಕ್ಕಾಗಿ ಅದೆಷ್ಟೋ ದಿನದಿಂದ ಕಾದು ಕುಳಿತಿದ್ರು. ಸೀರಿಯಲ್‌ನ ಸುಹಾಸಿನಿ ಪಾತ್ರಧಾರಿ ಆರತಿಯನ್ನು ದಾಳವಾಗಿ ಬಳಸಿಕೊಂಡು ಈ ಮದುವೆಯನ್ನು ನಿಲ್ಲಿಸಲು ಪ್ರಯತ್ನ ಮಾಡಿದರು ಅದು ಸಾಧ್ಯವಾಗೋದಿಲ್ಲ. ಕೊನೆಗೂ ಅಮೂಲ್ಯಗೆ ತಾಳಿ ಕಟ್ಟಿದ್ದಾರೆ ವೇದಾಂತ್.

ಈ ಆರತಕ್ಷತೆ ಎಪ್ಪಿಸೋಡ್‌ಗೆ ವಿಶೇಷ ಅತಿಥಿಗಳಾಗಿ ಆಗಮಿಸಿದ ರವಿಚಂದ್ರನ್ ಸ್ಟೆಪ್ಸ್ ಕೂಡ ಹಾಕಿದ್ದಾರೆ. ಸಾಮಾನ್ಯವಾಗಿ ರವಿಚಂದ್ರನ್ ಈ ರೀತಿಯಾಗಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳೋದು ತುಂಬಾ ಕಮ್ಮಿ ಹೀಗಿದ್ದರು ಗಟ್ಟಿಮೇಳ ಸೀರಿಯಲ್‌ನಲ್ಲಿ ರವಿಚಂದ್ರನ್ ತುಂಬಾನೇ ಎಂಜಾಯ್ ಮಾಡಿದ್ದಾರೆ. ಕೆಲ ವಾರಗಳಿಂದ ಗಟ್ಟಿಮೇಳ ಸೀರಿಯಲ್ ಟಿಆರ್‌ಪಿ ಕುಸಿತವಾಗಿತ್ತು. ಇದೀಗ ಈ ಸೀರಿಯಲ್ ಟಿಆರ್‌ಪಿ ಕೂಡ ಹೆಚ್ಚಾಗಿದ್ದು, ಸೀರಿಯಲ್ ತಂಡಕ್ಕೆ ಮತ್ತಷ್ಟು ಖುಷಿ ತಂದಿದೆ. ಇದೇ ಖುಷಿಯಲ್ಲಿ ಮದುವೆ ಸೆಟ್ ಕೂಡ ಭರ್ಜರಿಯಾಗಿ ಸಿದ್ಧವಾಗಿತ್ತು.
ಈ ಧಾರಾವಾಹಿಯಲ್ಲಿ ಸಾಕಷ್ಟು ತಿರುವುಗಳು ಇನ್ನು ರಿವೀಲ್ ಆಗಬೇಕಿದೆ. ಇಷ್ಟು ದಿನ ಗಟ್ಟಿಮೇಳ ಸೀರಿಯಲ್‌ನಲ್ಲಿ ವೇದಾಂತ್ ಅಮೂಲ್ಯ ಮದುವೆಗಾಗಿ ಕಾದಿದ್ದ ಜನಕ್ಕೆ ಈಗ ಖುಷಿಯಾಗಿದೆ. ಮುಂದೆ ಗಟ್ಟಿಮೇಳ ಸೀರಿಯಲ್‌ನಲ್ಲಿ ಸುಹಾಸಿನಿ ಬಗ್ಗೆ ವೇದಾಂತ್‌ಗೆ ಸತ್ಯ ಅರಿವಾಗಬೇಕಿದೆ. ಹಾಗೇ ವೇದಾಂತ್ ನಿಜವಾದ ತಾಯಿ ಯಾರು? ಅವರು ಎಲ್ಲಿದ್ದಾರೆ? ಯಾವ ಸ್ಥಿತಿಯಲ್ಲಿ ಇದ್ದಾರೆ ಎಂಬುವ ಸತ್ಯ ಅರಿವಾಗಬೇಕಾಗಿದೆ. ಮುಂದಿನ ದಿನಗಳಲ್ಲಿ ಈ ಸತ್ಯ ಕೂಡ ರಿವೀಲ್ ಆಗಲಿದೆ. ಹೀಗೆ ಸೀರಿಯಲ್‌ನಲ್ಲಿ ಸಾಕಷ್ಟು ತಿರುವುಗಳಿದ್ದು, ಪ್ರೇಕ್ಷಕರು ಕೂಡ ಗಟ್ಟಿಮೇಳವನ್ನು ಇಷ್ಟಪಡುತ್ತಿದ್ದಾರೆ.