For Quick Alerts
  ALLOW NOTIFICATIONS  
  For Daily Alerts

  ಸುವರ್ಣದಲ್ಲಿ ಮೀರಾ ಮಾಧವರ ಲವ್ ಸ್ಟೋರಿ

  By Rajendra
  |

  ಇದು ಶ್ರೀಮಂತ ಹುಡುಗಿ ಹಾಗೂ ಮಧ್ಯಮ ವರ್ಗದ ಹುಡುನ ನಡುವಿನ ಲವ್ ಸ್ಟೋರಿ. ಶ್ರೀಮಂತ ಕುಟುಂಬದ ಹುಡುಗಿ ಹೆಸರು ಮೀರಾ. ಆಕೆ ಸಹೃದಯಿ. ಮಧ್ಯಮ ವರ್ಗದ ಮಾಧವ ಎಂಬ ಹುಡುಗನನ್ನು ಪ್ರೀತಿಸುತ್ತಾಳೆ. ಅವನ ಮನಸ್ಸು ಗೆಲ್ಲಲು ಪ್ರಯತ್ನಿಸುತ್ತಾಳೆ.

  ಮಾಧವನಿಗೆ ಎಲ್ಲವೂ ಗೊತ್ತು. ಆದರೆ ಯಾವುದರಲ್ಲೂ ಪರಿಣಿತನಲ್ಲ. ಅವನಿಗೆ ಪ್ರೀತಿಯಲ್ಲಿ ಆಸಕ್ತಿ ಇಲ್ಲವೇ ಇಲ್ಲ. ಆದರೆ ಕಾಲಚಕ್ರ ಉರುಳಿದಂತೆ ಮೀರಾ ಅವನ ಮನಸ್ಸನ್ನು ಗೆಲ್ಲುತ್ತಾಳೆ. ಇಬ್ಬರು ಮದುವೆಯಾಗುತ್ತಾರೆ. ಇವರಿಬ್ಬರ ಬದುಕಿನ ಪಯಣ ಮತ್ತು ಬರುವ ಕಷ್ಟಗಳನ್ನು ಎದುರಿಸುವ ರೀತಿಯ ಸುತ್ತ ಹೆಣೆದಿರುವ ಕಥೆ ಇದಾಗಿದೆ.

  ಸ್ಟಾರ್ ನೆಟ್ ವರ್ಕ್ಸ್ ನ ಕನ್ನಡ ಮನರಂಜನಾ ಸುವರ್ಣದಲ್ಲಿ ಮತ್ತೊಂದು ಹೊಸ ಧಾರಾವಾಹಿ 'ಮೀರಾ ಮಾಧವ' ಇದೇ ಡಿಸೆಂಬರ್ 9, 2013 ರಿಂದ ಆರಂಭವಾಗುತ್ತಿದೆ. ಪ್ರತಿ ಸೋಮವಾರದಿಂದ ಶನಿವಾರ ರಾತ್ರಿ 10 ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ.

  ರಿಯಾಲಿಟಿ ಶೋನ ಸ್ಪರ್ಧಿ ಕಾವ್ಯ ಗೌಡ ನಾಯಕಿ

  ರಿಯಾಲಿಟಿ ಶೋನ ಸ್ಪರ್ಧಿ ಕಾವ್ಯ ಗೌಡ ನಾಯಕಿ

  ಪ್ರೀತಮ್ ಶೆಟ್ಟಿ ಈ ಧಾರಾವಾಹಿ ನಿರ್ದೇಶಕರು. 'ಪ್ಯಾಟೆ ಮಂದಿ ಕಾಡಿಗೆ ಬಂದ್ರು' ರಿಯಾಲಿಟಿ ಶೋನ ಸ್ಪರ್ಧಿ ಕಾವ್ಯ ಗೌಡ ಮತ್ತು ಶೈನ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ವಾಹಿನಿಯ ಬಿಜಿನೆಸ್ ಹೆಡ್ ಅನುಪ್ ಚಂದ್ರಶೇಖರ್ ಧಾರಾವಾಹಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಒಂದೆರಡು ಮಾತನ್ನೂ ಹೇಳಿದ್ದಾರೆ.

  ಇದೊಂದು ವಿಭಿನ್ನ ಪ್ರೇಮಕಥೆಯಾಗಿದೆ

  ಇದೊಂದು ವಿಭಿನ್ನ ಪ್ರೇಮಕಥೆಯಾಗಿದೆ

  "ಇದೊಂದು ವಿಭಿನ್ನ ಪ್ರೇಮಕಥೆಯಾಗಿದೆ. ನಾವು ಈ ಕಥೆಯ ಥೀಮ್ ಗಾಗಿ ಸಾಕಷ್ಟು ಕೆಲಸ ಮಾಡಿದ್ದು, ಇಲ್ಲಿರುವ ಎರಡೂ ಮುಖ್ಯ ಪಾತ್ರಗಳಿಗೂ ನ್ಯಾಯ ಒದಗಿಸಲಾಗಿದೆ.

  ಕುಟುಂಬಸಮೇತ ನೋಡಬಹುದಾದ ಸೀರಿಯಲ್

  ಕುಟುಂಬಸಮೇತ ನೋಡಬಹುದಾದ ಸೀರಿಯಲ್

  ನಮ್ಮ ವೀಕ್ಷಕರು ಖಂಡಿತ ನೋಡಿ ಆನಂದಿಸ್ತಾರೆ ಅನ್ನೋ ನಂಬಿಕೆ ನನ್ನದು ಹಾಗೂ ಈ ಧಾರಾವಾಹಿಯನ್ನು ಕುಟುಂಬಸಮೇತರಾಗಿ ಕುಳಿತು ಮನೆಮಂದಿಯೆಲ್ಲಾ ನೋಡಬಹುದು" ಎಂದಿದ್ದಾರೆ.

  ಮೀರಾ ಮಾಧವ ಹೊಸ ಸೇರ್ಪಡೆ

  ಮೀರಾ ಮಾಧವ ಹೊಸ ಸೇರ್ಪಡೆ

  "ಮೀರಾ ಮಾಧವ" ಸುವರ್ಣವಾಹಿನಿಯು ಪ್ರಸಾರ ಮಾಡುತ್ತಿರುವ ಜನಪ್ರಿಯ ಕಾರ್ಯಕ್ರಮಗಳಾದ ಅಮೃತವರ್ಷಿಣಿ, ಪ್ರಿಯದರ್ಶಿನಿ, ಮಿಲನ, ಅರಗಿಣಿ, ಪಂಚರಂಗಿ ಪೋಂ ಪೋಂ, ಪಲ್ಲವಿ ಅನುಪಲ್ಲವಿ, ಆಕಾಶದೀಪ, ಸರಸ್ವತಿ ಮತ್ತು ಕರ್ಪೂರದಗೊಂಬೆ ಮೊದಲಾದವುಗಳ ಸಾಲಿಗೆ ಈಗ ಹೊಸ ಸೇರ್ಪಡೆಯಾಗುತ್ತದೆ.

  ಕನ್ನಡ ಕುಟುಂಗಳ ಮನೆಮಾತಾದ ಸುವರ್ಣ ವಾಹಿನಿ

  ಕನ್ನಡ ಕುಟುಂಗಳ ಮನೆಮಾತಾದ ಸುವರ್ಣ ವಾಹಿನಿ

  ಸುವರ್ಣವಾಹಿನಿಯು ವಿಭಿನ್ನ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ವೈವಿಧ್ಯತೆಯನ್ನು ಸೃಷ್ಟಿಸಿ ಕನ್ನಡ ಕುಟುಂಗಳ ಮನೆಮಾತಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.

  English summary
  Star Network's Kannada offering, Suvarna TV, will start airing a new daily soap 'Meera Madhava' December 9 th Monday 10:00pm onwards. The show will run Monday to Friday at the 10 pm slot.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X