»   » ಸುವರ್ಣದಲ್ಲಿ ಮೂರು ಹೊಸ ಮೆಗಾ ಧಾರಾವಾಹಿಗಳು

ಸುವರ್ಣದಲ್ಲಿ ಮೂರು ಹೊಸ ಮೆಗಾ ಧಾರಾವಾಹಿಗಳು

Posted By:
Subscribe to Filmibeat Kannada

ಈಗಾಗಲೆ ಸುವರ್ಣ ವಾಹಿನಿ ಎಲ್ಲಾ ಮನರಂಜನಾ ವಾಹಿನಿಗಳನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನಕ್ಕೆ ಜಿಗಿದಿರುವುದು ಗೊತ್ತೇ ಇದೆ. ಈಗ ಸ್ಟಾರ್ ನೆಟ್‍ವರ್ಕ್ ನ ಸುವರ್ಣ ವಾಹಿನಿಯು 'ಪ್ರಿಯದರ್ಶಿನಿ', 'ಮಿಲನ' ಮತ್ತು 'ಅರಗಿಣಿ' ಎಂಬ 3 ಹೊಚ್ಚ ಹೊಸ ಮೆಗಾ ಧಾರಾವಾಹಿಗಳನ್ನು ಇದೇ ಆಗಸ್ಟ್ 05ರಂದು ಪ್ರಾರಂಭಿಸುತ್ತಿದೆ.

'ಪ್ರಿಯದರ್ಶಿನಿ' ಒಂದು ಕೌಟುಂಬಿಕ ಕಥೆಯಾಗಿದ್ದು ನೈಜ ಸಂಭಾಷಣೆಯನ್ನು ಹೊಂದಿದೆ. ಸಹೋದರಿಯರಿಬ್ಬರು ಒಂದೇ ಕುಟುಂಬದವರನ್ನು ಮದುವೆಯಾಗಿ ಎದುರಿಸುವ ಪರಿಸ್ಥಿತಿ ಏನು? ಎಂಬುದರ ಸುತ್ತ ಕಥೆ ಸಾಗುತ್ತದೆ.

'ಪ್ರಿಯದರ್ಶಿನಿ' ಧಾರಾವಾಹಿಯನ್ನು ರವಿ ಆರ್ ಗರಣಿಯವರು ನಿರ್ದೇಶಿಸಿ ನಿರ್ಮಿಸಿದ್ದಾರೆ. ಈ ಧಾರವಾಹಿಯು ಪ್ರತಿ ಸೋಮವಾರದಿಂದ ಶನಿವಾರ ರಾತ್ರಿ 8:00 ಗಂಟೆಗೆ ಪ್ರಸಾರವಾಗಲಿದೆ.

ಇನ್ನು 'ಮಿಲನ', ಇದೊಂದು ಮೂವರು ಭಿನ್ನವಾದ ಹಿನ್ನೆಲೆಯುಳ್ಳ ಮುಖ್ಯ ಪಾತ್ರಧಾರಿಗಳ ತ್ರಿಕೋನ ಪ್ರೇಮಕಥೆಯಾಗಿದೆ. 'ಮಿಲನ' ಧಾರಾವಾಹಿಯನ್ನು ಮಧುಸೂಧನ್ ನಿರ್ದೇಶಿಸುತ್ತಿದ್ದಾರೆ. ಧಾರಾವಾಹಿಯು ಪ್ರತಿ ಸೋಮವಾರದಿಂದ ಶನಿವಾರದ ರಾತ್ರಿ 8:30 ಕ್ಕೆ ಪ್ರಸಾರವಾಗಲಿದೆ.

ಪ್ರೀತಿ, ದ್ವೇಷಗಳ ಸುತ್ತ ಹೆಣೆದಿರುವ ಕಥೆ ಅರಗಿಣಿ

'ಅರಗಿಣಿ' ಧಾರಾವಾಹಿಯು ಪ್ರೀತಿ, ದ್ವೇಷಗಳ ಸುತ್ತ ಹೆಣೆದಿರುವ ಒಂದು ಭಾವನಾತ್ಮಕ ಕಥೆಯಾಗಿದೆ. ಸಿದ್ಧಾರ್ಥ್ ಮತ್ತು ಖುಷಿ ಎಂಬ ಎರಡು ಮುಖ್ಯ ಪಾತ್ರಧಾರಿಗಳು ಒಟ್ಟಿಗೆ ಸಹಬಾಳ್ವೆ ನಡೆಸಲು ತಾವಿಬ್ಬರು ಸರಿಯೋ ತಪ್ಪೋ ಎಂದು ತೊಳಲಾಡುತ್ತಿರುತ್ತಾರೆ.

ರವಿ ಆರ್ ಗರಣಿ ನಿರ್ದೇಶನದ ಧಾರಾವಾಹಿ

ಆದರೆ ಮುಂದೆ ಅವರಿಬ್ಬರು ಒಬ್ಬರಿಗೊಬ್ಬರು ಅರಿತು ನಡೆಯಬಲ್ಲರೇ? ಎಂದು ಪ್ರಶ್ನೆ ಹುಟ್ಟುಹಾಕುತ್ತಲೇ ಸಾಗುವ ಕಥೆ 'ಅರಗಿಣಿ'. ಈ ಧಾರಾವಾಹಿಯನ್ನು ರವಿ ಆರ್ ಗರಣಿಯವರು ನಿರ್ದೇಶಿಸಿ ನಿರ್ಮಿಸಿದ್ದಾರೆ. ಈ ಧಾರವಾಹಿಯು ಪ್ರತಿ ಸೋಮವಾರದಿಂದ ಶನಿವಾರ ರಾತ್ರಿ 9:00 ಗಂಟೆಗೆ ಪ್ರಸಾರವಾಗಲಿದೆ.

ಈ ಧಾರಾವಾಹಿಗಳಿಗೆ ಉತ್ತಮ ಪ್ರತಿಕ್ರಿಯೆ ನಿರೀಕ್ಷೆ

ವಾಹಿನಿಯ ಬಿಸಿನೆಸ್ ಹೆಡ್ ಆದ ಅನುಪ್ ಚಂದ್ರಶೇಖರನ್ ಹೇಳುವ ಹಾಗೆ, "ಈ 3 ಧಾರಾವಾಹಿಗಳು ವಿಭಿನ್ನವಾದ ಮತ್ತು ಅತ್ಯುತ್ತಮ ಕಥಾವಸ್ತುವನ್ನು ಹೊಂದಿದ್ದು ವೀಕ್ಷಕರ ಮನದಾಳಕ್ಕಿಳಿಯುವುದರಲ್ಲಿ ಯಾವುದೇ ಸಂದೇಹವಿಲ್ಲ" ಎಂಬ ವಿಶ್ವಾಸ ಅವರದು.

ಧಾರಾವಾಹಿಗಳು ವೀಕ್ ಡೇ ಪ್ರೈಮ್ ಟೈಮ್ ಲೀಡರ್

ಪ್ರಸ್ತುತವಿರುವ ಧಾರಾವಾಹಿಗಳು ವೀಕ್ ಡೇ ಪ್ರೈಮ್ ಟೈಮ್ ಲೀಡರ್ ಆಗಿದ್ದು ಈಗ ಪ್ರಾರಂಭಿಸುತ್ತಿರುವ ಧಾರಾವಾಹಿಗಳಿಂದ ಇನ್ನಷ್ಟು ಉತ್ತಮ ಸ್ಥಾನವನ್ನು ಪಡೆಯಲಿದ್ದೇವೆ ಎಂಬ ವಿಶ್ವಾಸ ನಮ್ಮದು" ಎಂದಿದ್ದಾರೆ ಅನೂಪ್.

ಜನಪ್ರಿಯ ಕಾರ್ಯಕ್ರಮಗಳ ಪಟ್ಟಿಗೆ ಧಾರಾವಾಹಿಗಳು

ಈಗ 'ಪ್ರಿಯದರ್ಶಿನಿ', 'ಮಿಲನ' ಮತ್ತು 'ಅರಗಿಣಿ' ಸುವರ್ಣವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಾದ ಕನ್ನಡದ ಕೋಟ್ಯಾಧಿಪತಿ, ಕೃಷ್ಣ ರುಕ್ಮಿಣಿ, ಪ್ರೀತಿಯಿಂದ, ಅಮೃತವರ್ಷಿಣಿ, ಚುಕ್ಕಿ, ಆಕಾಶದೀಪ, ಪಲ್ಲವಿ ಅನುಪಲ್ಲವಿ, ಪಂಚರಂಗಿ ಪೊಂ,ಪೊಂ, ಸರಸ್ವತಿ, ಕರ್ಪೂರದ ಗೊಂಬೆ ಮೊದಲಾದವುಗಳ ಸಾಲಿಗೆ ಸೇರುತ್ತಿವೆ.

English summary
Star Network’s Kannada General Entertainment channel Suvarna announces the launch of 3 mega fiction shows 'Priyadarshini, 'Milana' & 'Aragini. All the three shows will go on air from August 5th 2013. “Priyadarshini” is a family drama mixed with lively narration.
Please Wait while comments are loading...