»   » ಸುವರ್ಣ ಸಮಾಗಮದಲ್ಲಿ 'ಅವನು ಮತ್ತೆ ಶ್ರಾವಣಿ'

ಸುವರ್ಣ ಸಮಾಗಮದಲ್ಲಿ 'ಅವನು ಮತ್ತೆ ಶ್ರಾವಣಿ'

Posted By:
Subscribe to Filmibeat Kannada

ಸ್ಟಾರ್ ನೆಟ್ ವರ್ಕ್ ನ ಸುವರ್ಣ ವಾಹಿನಿಯು ಸಾಕಷ್ಟು ತರಹೇವಾರಿ ಕಾರ್ಯಕ್ರಮ ಹಾಗೂ ಧಾರಾವಾಹಿಗಳನ್ನು ಕಿರುತೆರೆಗೆ ನೀಡಿ ವೀಕ್ಷಕರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ.

ವಿಶೇಷವಾಗಿ ಧಾರಾವಾಹಿಗಳ ಕಥೆ ಸಾಗುತ್ತಿರುವಾಗ ವೀಕ್ಷಕರೊಂದಿಗೆ ನೇರ ಸಮಾಗಮ, ಸಂಭಾಷಣೆ -ಚರ್ಚೆಗಳನ್ನು ನಡೆಸುತ್ತಾ ವೀಕ್ಷಕರ ಅಭಿರುಚಿಯನ್ನು ಗಮನದಲ್ಲಿರಿಸಿಕೊಂಡು ಕಥೆಯನ್ನು ಮುಂದುವರೆಸುವ ಹೊಣೆಯನ್ನು ಹೊತ್ತಿದೆ ವಾಹಿನಿ.

ಇದೇ ನಿಟ್ಟಿನಲ್ಲಿ ಇತ್ತೀಚೆಗೆ ನಗರದಲ್ಲಿ ನಡೆಸಿದ 'ಅವನು ಮತ್ತೆ ಶ್ರಾವಣಿ' ಧಾರಾವಾಹಿಯ ಸುವರ್ಣ ಸಮಾಗಮ ಕಾರ್ಯಕ್ರಮ ಬಹು ವಿಜೃಂಭಣೆಯಿಂದ ಸಾಗಿ ಪ್ರೇಕ್ಷಕರ ಕಣ್ಮನ ಸೆಳೆಯಿತು. ಈ ಭರ್ಜರಿ ಇವೆಂಟ್ ನ ಪ್ರಸಾರವನ್ನು ವಾಹಿನಿಯು ಇದೇ ಮಾರ್ಚ್ 8ರ ಭಾನುವಾರ ಮಹಿಳಾ ದಿನಾಚರಣೆಯ ಅಂಗವಾಗಿ ಸಂಜೆ 6 ಗಂಟೆಗೆ ಪ್ರಸಾರ ಮಾಡಲಿದೆ.

225 ಕಂತುಗಳನ್ನು ಪೂರೈಸಿದ ಧಾರಾವಾಹಿ

ಸುವರ್ಣ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶನಿವಾರದವರೆಗೆ ಪ್ರತಿ ರಾತ್ರಿ 9 ಗಂಟೆಗೆ ಮೂಡಿಬರುತ್ತಿರುವ 'ಅವನು ಮತ್ತೆ ಶ್ರಾವಣಿ' ಧಾರಾವಾಹಿಯು 225 ಕಂತುಗಳನ್ನು ಪೂರೈಸಿ ಸಾರ್ವಜನಿಕರ ಮುಂದೆ ನಿಂತಿತ್ತು. ನೆರೆದ ಪ್ರೇಕ್ಷಕರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳುವುದರೊಂದಿಗೆ ಮನರಂಜನೆಯನ್ನು ನೀಡಲು ಸಾಕ್ಷಿಯಾಯಿತು.

ಜಯಕ್ಕ ಆಟವಾಡುತ್ತಲೆ ಕುಸಿದುಬಿದ್ದರು

ಧಾರಾವಾಹಿಯ ಮುಖ್ಯ ಪಾತ್ರಧಾರಿಗಳಿಂದ ಡಾನ್ಸ್, ಮಗು ದೀಕ್ಷಾ ಸ್ಟೆಪ್ ಹಾಕಿದ್ದು ಜಯಕ್ಕ ಆಟವಾಡುತ್ತಲೆ ಕುಸಿದು ಬಿದ್ದದ್ದು, ಮಗುವೊಂದು ಮುಂದೆ ಹೀರೋ ಆಗಲಿಚ್ಚಿಸಿದ್ದಲ್ಲದೇ ದೀಕ್ಷಾಳೊಂದಿಗೆ ನಟನೆ ಮಾಡುವ ಆಕಾಂಕ್ಷೆ ತೋರಿದರು.

ಪಾತ್ರಧಾರಿಗೆ ಮಹಿಳೆ ಹಿಗ್ಗಾಮುಗ್ಗ ಬೈಗುಳ

ಹಾಗೇಯೇ ಕಥೆಗೆ ತಕ್ಕಂತೆ ಅಭಿನಯಿಸುವ ಪಾತ್ರಧಾರಿಯಾದ ಉದಯ್ ರನ್ನು ಮಹಿಳೆಯೊಬ್ಬಳು ಹಿಗ್ಗಾಮುಗ್ಗಾ ಬೈದದ್ದು. ಹೀಗೆ ಇವೆಂಟ್ ನಲ್ಲಿ ನಡೆದ ನೈಜ ಘಟನೆಗಳು ವೀಕ್ಷಕರು ಕಥೆಯನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆಂದು ತಿಳಿದುಕೊಳ್ಳುವಂತೆ ಮಾಡಿತು.

'ಬಿಜಾಪುರ ಬಿಜ್ಲಿ' ನಿರೂಪಣೆ

ಅದರೊಂದಿಗೆ ಬಿಜಾಪುರ ಬಿಜ್ಲಿ ಎಂದೇ ಎಲ್ಲರ ಮನಗೆದ್ದ ಅರಗಿಣಿ ಧಾರಾವಾಹಿಯ ಖುಷಿ ಮತ್ತು ಸಿದ್ಧಾರ್ಥ್ ಪಾಟೀಲ್ ಜೋಡಿಯಾಗಿ ಕಾರ್ಯಕ್ರಮವನ್ನು ನಿರೂಪಿಸಿದರು. ಅಮೃತವರ್ಷಿಣಿಯ ಅಮೃತಾಳಿಂದ ಡಾನ್ಸ್ ಪರ್ಫಾರ್ಮನ್ಸ್ ಅದ್ಭುತವಾಗಿ ಮೂಡಿಬಂದಿದೆ.

ಮಾರ್ಚ್ 8ರ ಭಾನುವಾರ ಸಂಜೆ 6 ಗಂಟೆಗೆ

ಅಲ್ಲದೇ ಕೆಲವೊಂದು ಆಟ ತುಂಟಾಟಗಳೊಂದಿಗೆ ಸಂಪೂರ್ಣ ಇವೆಂಟ್ ವಿಜೃಂಭಣೆಯಿಂದ ಮೂಡಿಬಂತು ಎಂದರೂ ಅತಿಶಯೋಕ್ತಿಯಾಗಲಾರದು.

ನೀವು ಮೆಚ್ಚಿದ, ನಿಮ್ಮ ನೆಚ್ಚಿನ ಶ್ರಾವಣಿ ಸೂರ್ಯ ಮೊದಲಾದ ಪಾತ್ರಧಾರಿಗಳೆಲ್ಲರು ಕುಣಿದು ಕುಪ್ಪಳಿಸಿದ ಕ್ಷಣಗಳನ್ನು ನೀವು ನೋಡಿ ಸಂಭ್ರಮಿಸಲು ಮಾರ್ಚ್ 8ರ ಭಾನುವಾರ ಸಂಜೆ 6 ಗಂಟೆಗೆ ತಪ್ಪದೇ ಸುವರ್ಣ ವಾಹಿನಿಗೆ ಟ್ಯೂನ್ ಮಾಡಿ ಸುವರ್ಣ ಸಮಾಗಮದಲ್ಲಿ ಅವನು ಮತ್ತೆ ಶ್ರಾವಣಿ ಧಾರಾವಾಹಿಯನ್ನು ನೋಡಿ.

English summary
Starnetworks Suvarna channel's 'Avanu Matte Shravani' daily soap completes 225 episodes, Suvarna Samagama Avanu Matte Shravani Event will telecast on women`s day March 8 th 2015 6pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada