For Quick Alerts
  ALLOW NOTIFICATIONS  
  For Daily Alerts

  ಕಿರುತೆರೆ ನಟ ಸಮೀರ್ ಶರ್ಮಾ ಆತ್ಮಹತ್ಯೆ

  |

  ಹಿಂದಿ ಕಿರುತೆರೆ ನಟ ಮತ್ತು ರೂಪದರ್ಶಿ ಸಮೀರ್ ಶರ್ಮಾ (44) ಮುಂಬೈನ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಲಾಡ್ ಪೂರ್ವ ಭಾಗದ ಅಹಿಂಸಾ ಮಾರ್ಗ್‌ನಲ್ಲಿನ ನೇಹಾ ಸಿಎಚ್ಎಸ್ ಕಟ್ಟಡದಲ್ಲಿನ ಮನೆಯಲ್ಲಿ ಬುಧವಾರ ರಾತ್ರಿ ನೇಣು ಬಿಗಿದ ಸ್ಥಿತಿಯಲ್ಲಿ ದೇಹ ಕಂಡುಬಂದಿದೆ.

  ಈ ವರ್ಷದ ಫೆಬ್ರವರಿಯಲ್ಲಿ ಈ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆ ಮನೆಯನ್ನು ಸಮೀರ್ ಪಡೆದುಕೊಂಡಿದ್ದರು. ಅಪಾರ್ಟ್‌ಮೆಂಟ್ ಒಳಗೆ ಕರ್ತವ್ಯ ಮಾಡುತ್ತಿದ್ದ ಭದ್ರತಾ ಸಿಬ್ಬಂದಿ ರಾತ್ರಿ ಪರಿಶೀಲನೆ ವೇಳೆ ಸಮೀರ್ ಅವರು ಮನೆಯ ಅಡುಗೆ ಮನೆಯ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ. ಕೂಡಲೇ ಅಪಾರ್ಟ್‌ಮೆಂಟ್‌ನ ಸದಸ್ಯರಿಗೆ ಮಾಹಿತಿ ನೀಡಿದರು.

  ಉದಯೋನ್ಮುಖ ಮರಾಠಿ ನಟ ಅಶುತೋಷ್ ಭಾಕ್ರೆ ಆತ್ಮಹತ್ಯೆಉದಯೋನ್ಮುಖ ಮರಾಠಿ ನಟ ಅಶುತೋಷ್ ಭಾಕ್ರೆ ಆತ್ಮಹತ್ಯೆ

  ಮಾಹಿತಿ ತಿಳಿದು ಬಂದ ಪೊಲೀಸರು ಒಳಗೆ ಪ್ರವೇಶಿಸಿ ದೇಹವನ್ನು ಕೆಳಕ್ಕಿಳಿಸಿದ್ದಾರೆ. ದೇಹದ ಸ್ಥಿತಿಯನ್ನು ನೋಡಿದರೆ ಎರಡು ದಿನಗಳ ಹಿಂದೆಯೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನಿಸುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ. ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  ಜನಪ್ರಿಯ ಧಾರಾವಾಹಿ 'ಯೆ ರಿಷ್ತೆ ಹೈ ಪ್ಯಾರ್ ಕೆ' ಧಾರಾವಾಹಿಯಲ್ಲಿ ಅವರು ಕುಹು ಪಾತ್ರಧಾರಿಯ ತಂದೆಯಾಗಿ ನಟಿಸಿದ್ದರು. ಕಹಾನಿ ಘರ್ ಘರ್ ಕಿ ಮತ್ತು ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ, ಜ್ಯೋತಿ, ಇಸ್ ಪ್ಯಾರ್ ಕೋ ಕ್ಯಾ ನಾಮ್ ದು ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು.

  English summary
  TV Actor and modle Sameer Sharma (44) allegedly committed suicide at his home in Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X