»   » ಟಿವಿಯಲ್ಲಿನ ಐಟಂ ಸಾಂಗ್‌ಗಳಿಗೆ ಬಿತ್ತು ಕತ್ತರಿ

ಟಿವಿಯಲ್ಲಿನ ಐಟಂ ಸಾಂಗ್‌ಗಳಿಗೆ ಬಿತ್ತು ಕತ್ತರಿ

Posted By:
Subscribe to Filmibeat Kannada

ಐಟಂ ಸಾಂಗ್‌ಗಳ ಯುಗ ಮುಗಿಯಿತೇ? ಗೊತ್ತಿಲ್ಲ. ಆದರೆ, ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಐಟಂ ಸಾಂಗ್ ಮತ್ತು ಇತರೆ ಹಾಡುಗಳಲ್ಲಿನ ಅಶ್ಲೀಲ ದೃಶ್ಯಗಳ ಪ್ರಸಾರಕ್ಕೆ ಮಾತ್ರ ಕತ್ತರಿ ಬಿದ್ದಿದೆ.

ಅರೆಬರೆ ಬಟ್ಟೆ ಧರಿಸಿಕೊಂಡು ಅಶ್ಲೀಲವಾಗಿ ಕಾಣುವ ಬಾಲಿವುಡ್ ಹಾಡುಗಳು ಹಾಗೂ ಐಟಂ ನಂಬರ್ ಡಾನ್ಸ್ ಗಳನ್ನು ಟಿವಿಯಲ್ಲಿ ಇನ್ನು ಮುಂದೆ ಮುಸುಕಾಗಿ ಕಾಣುವಂತೆ ಮಾಡಬೇಕು ಎಂದು ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಷನ್ (ಸಿಬಿಎಫ್‌ಸಿ) ಆದೇಶನೀಡಿದೆ.

item song

ಈ ಮಹತ್ವದ ಆದೇಶವು ತೆರೆಕಾಣಬೇಕಾಗಿರುವ 'ತೂ ಭೀ ಮೂಡ್ ಮೇಂ' ಚಿತ್ರದೊಂದಿಗೆ ಆರಂಭವಾಗಲಿದೆ. ಇಂದ್ರ ಕುಮಾರ್ ಅವರ ವಯಸ್ಕರ ಕಾಮಿಡಿ ಚಿತ್ರ 'ಗ್ರ್ಯಾಂಡ್ ಮಸ್ತಿ'ಯಲ್ಲಿ ಮಳೆಯಲ್ಲಿ ಕುಣಿಯುವ 'ತೂ ಭೀ ಮೂಡ್ ಮೇಂ' ಎಂಬ ಹಾಡಿನಲ್ಲಿ ಅಶ್ಲೀಲ ದೃಶ್ಯಗಳನ್ನು ಮುಸುಕಾಗಿ ತೋರಿಸುವಂತೆ ಸಿಬಿಎಫ್‌ಸಿ ಸೂಚಿಸಿದೆ.

ಇದೇ ವೇಳೆ, 'ಎ' ಸರ್ಟಿಫಿಕೇಟ್ ಪಡೆದಿರುವ ವಯಸ್ಕರ ಚಿತ್ರಗಳನ್ನು ಟಿವಿಯಲ್ಲಿ ಪ್ರಸಾರ ಮಾಡಲು, ಸೆನ್ಸಾರ್ ಬೋರ್ಡ್‌ನಿಂದ ಪ್ರತ್ಯೇಕ ಪ್ರಮಾಣ ಪತ್ರ ಪಡೆಯಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿರ್ದೇಶನ ನೀಡಿದೆ.

ಸಾಧಾರಣ ಅಶ್ಲೀಲತೆ ಇದ್ದರೆ ಒಪ್ಪಿಕೊಳ್ಳಬಹುದು. ಆದರೆ ಮಿತಿಮೀರಿದ ಅಶ್ಲೀಲತೆ ಇರುವ ದೃಶ್ಯಗಳು ಟಿವಿಯಲ್ಲಿ ಪ್ರಸಾರವಾದರೆ, ಕುಟುಂದವರೊಂದಿಗೆ ಕುಳಿತು ಟಿವಿ ವೀಕ್ಷಿಸುವ ಜನರು ಮುಜುಗರಕ್ಕೆ ಒಳಗಾಗುತ್ತಾರೆ. ಆದ್ದರಿಂದ ಈ ನಿಯಮ ಅನಿವಾರ್ಯವಾಗಿತ್ತು ಎಂದು ಸಿಬಿಎಫ್‌ಸಿ ಮುಖ್ಯಸ್ಥೆ ಪಂಕಜಾ ಠಾಕೂರ್ ಹೇಳಿದ್ದಾರೆ.

English summary
It's the death of the item song as we know it, but thankfully only on TV and only by pixels. Bollywood songs and dance numbers featuring semi-clad women displaying 'vulgar' moves have been semi-banned from television channels. Central Board of Film Certification (CBFC) says that scenes objectifying women or displaying them suggestively will have to be blurred or pixellated.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada