»   » ಗೃಹಿಣಿಯರಿಗಾಗಿ 'ಈಟಿವಿ ಕನ್ನಡ' ಬಂಪರ್ ಆಫರ್

ಗೃಹಿಣಿಯರಿಗಾಗಿ 'ಈಟಿವಿ ಕನ್ನಡ' ಬಂಪರ್ ಆಫರ್

Posted By:
Subscribe to Filmibeat Kannada

ಮಧ್ಯಾಹ್ನದ ಕಾರ್ಯಕ್ರಮಗಳಲ್ಲಿ ತಾಜಾತನ ತರುತ್ತಿರುವ ಈಟಿವಿ ಕನ್ನಡ ವಾಹಿನಿ, ಇದೀಗ 'ಸೌಭಾಗ್ಯವತಿ' ಮತ್ತು 'ದೇವತೆ' ಎಂಬ ಎರಡು ಹೊಸ ಮನಸೆಳೆಯುವ ಧಾರಾವಾಹಿಗಳನ್ನು ಆರಂಭಿಸುತ್ತಿದೆ.

ಫೆಬ್ರವರಿ 16 ರಿಂದ ಆರಂಭಗೊಂಡು ಪ್ರತಿ ಸೋಮವಾರದಿಂದ ಶುಕ್ರವಾರ 1.30 ರಿಂದ 2.30 ರವರೆಗೆ ಈಟಿವಿ ಕನ್ನಡ ವಾಹಿನಿ ಮನರಂಜನೆಯ ಮಹಾಪೂರವನ್ನೇ ಹರಿಸಲಿದೆ.

two-new-serials-in-etv-kannada-channel

'ದೇವತೆ' ಧಾರಾವಾಹಿ - ಶ್ರವಣ ಸಮಸ್ಯೆ ಇರುವ ಹುಡುಗಿ ಶ್ರಾವ್ಯಳ ತೊಳಲಾಟ ಪ್ರತಿಬಿಂಬಿಸುತ್ತದೆ. ತನ್ನ ವಿವಾಹಿತೆ ತಂಗಿ ಲಾಸ್ಯಳ ಜೀವನ ಹಸನುಗೊಳಿಸಲು ತನ್ನ ಜೀವನ ಸುಖವನ್ನೇ ತ್ಯಾಗಮಾಡಲು ಸಿದ್ಧಳಾಗುವ ಶ್ರಾವ್ಯಳ ಕಥೆ ಈ 'ದೇವತೆ'.

ಶ್ರಾವ್ಯ ಪಾತ್ರದಲ್ಲಿ ದಿವ್ಯಶ್ರೀ ಮತ್ತು ಲಾಸ್ಯ ಪಾತ್ರದಲ್ಲಿ ದಿವ್ಯಾ ಕಾರಂತ್ ನಟಿಸುತ್ತಿದ್ದಾರೆ. ಎಸ್.ವೆಂಕಟೇಶ್ ಕೊಟ್ಟೂರ್ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದು, ಚಿತ್ರಪಟ ಬ್ಯಾನರ್ ಅಡಿಯಲ್ಲಿ ಟಿ.ಎಸ್.ಸತ್ಯಜಿತ್ ನಿರ್ಮಾಣ ಮಾಡುತ್ತಿದ್ದಾರೆ. ಪ್ರತಿ ಸೋಮವಾರದಿಂದ ಶನಿವಾರ ಮಧ್ಯಾಹ್ನ 1.30 ಕ್ಕೆ 'ದೇವತೆ' ಧಾರಾವಾಹಿ ಪ್ರಸಾರವಾಗಲಿದೆ.

two-new-serials-in-etv-kannada-channel

'ಸೌಭಾಗ್ಯವತಿ' ಧಾರಾವಾಹಿ - ಬುದ್ಧಿವಂತ ಹಳ್ಳಿ ಹುಡುಗಿ ಅರುಂಧತಿಯ ಕಥೆ. ತಾನು ನಂಬಿ ಪ್ರೀತಿಸಿದ ಹುಡುಗನೇ ತನ್ನ ಪ್ರೀತಿಯ ನಂಬಿಕೆಯನ್ನು ಪ್ರಶ್ನಿಸುವ ಕಥಾಹಂದರ ಇರುವ ಧಾರಾವಾಹಿ 'ಸೌಭಾಗ್ಯವತಿ'. ಆರ್.ಕೆ.ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ರವಿಕಿರಣ್ ಈ ಧಾರಾವಹಿಯನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.

ಹೊಸ ಮುಖ ತೇಜಸ್ವಿನಿ ನಾಯಕಿ ಅರುಂಧತಿ ಪಾತ್ರದಲ್ಲಿದ್ದಾರೆ. ಪ್ರತಿ ಸೋಮವಾರದಿಂದ ಶನಿವಾರ ಮಧ್ಯಾಹ್ನ 2 ಗಂಟೆಗೆ 'ಸೌಭಾಗ್ಯವತಿ' ಪ್ರಸಾರವಾಗಲಿದೆ. [ಜೀ ಕನ್ನಡದಲ್ಲಿ ಎರಡು ಹೊಸ ಅಲೆಯ ಧಾರಾವಾಹಿ]

ಪ್ರೈಮ್ ಟೈಮ್ ಅಂದ್ರೆ ಸಂಜೆ ಹೊತ್ತಲ್ಲಿ ಮಾತ್ರ ಮನರಂಜನಾ ಕಾರ್ಯಕ್ರಮಗಳು ತುಂಬಿ ತುಳುಕುತ್ತಿರುವ ಈಗಿನ ಟ್ರೆಂಡ್ ನಲ್ಲಿ ಗೃಹಿಣಿಯರನ್ನ ಸೆಳೆಯುವುದಕ್ಕೆ ಈಟಿವಿ ಕನ್ನಡ ಎರಡು ಹೊಸ ಧಾರಾವಾಹಿಗಳ ಮೂಲಕ ಬಂಪರ್ ಕೊಡುಗೆ ನೀಡಿದೆ. ಅಲ್ಲಿಗೆ, ಇನ್ಮುಂದೆ ಮಧ್ಯಾಹ್ನದ ಹೊತ್ತು ಗೃಹಿಣಿಯರು ಟಿವಿ ಮುಂದೆ ತಪ್ಪದೆ ಹಾಜರಾಗುವುದು ಪಕ್ಕಾ.

English summary
Family Entertainment Channel ETV Kannada has come up with two new serials 'Devate' and 'Sowbhagyavathi', which will go on air from Feb 16th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada