»   » ನಿಮ್ಮ ಉದಯ ಟಿವಿಯಲ್ಲಿ 'ಅವಳು' ಮಹಾ ಸಂಚಿಕೆ

ನಿಮ್ಮ ಉದಯ ಟಿವಿಯಲ್ಲಿ 'ಅವಳು' ಮಹಾ ಸಂಚಿಕೆ

Posted By:
Subscribe to Filmibeat Kannada

ಕನ್ನಡದ ಟಿವಿ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿರುವ ಉದಯ ಟಿವಿ, ಕಾಲಕಾಲಕ್ಕೆ ಬದಲಾಗುವ ವೀಕ್ಷಕರ ಮನಃಸ್ಥಿತಿಗೆ ತಕ್ಕಂತೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ ಜನಮಾನಸದಲ್ಲಿ ನೆಲೆಯೂರಿದೆ. ಈ ನಿಟ್ಟಿನಲ್ಲಿ ಉದಯ ಟಿವಿ ತನ್ನ ಧಾರಾವಾಹಿಗಳ ವಿಶೇಷ ಸಂಚಿಕೆಗಳನ್ನು ಪ್ರಸಾರ ಮಾಡುತ್ತಿದೆ.

ಮಹತ್ವದ ತಿರುವು: ಕಥೆ ಮಹತ್ವದ ಘಟ್ಟದಲ್ಲಿರುವಾಗ ಪ್ರಸಾರವಾಗುವ ಈ ವಿಶೇಷ ಸಂಚಿಕೆಗಳು ವೀಕ್ಷಕರಿಗೆ ರಸದೌತಣ ನೀಡುತ್ತವೆ. 'ಸರಯೂ', 'ಜೋಜೋಲಾಲಿ', 'ಕಾವೇರಿ', 'ನಂದಿನಿ', 'ದೊಡ್ಮನೆ ಸೊಸೆ' ಮಹಾಸಂಚಿಕೆಗಳ ಯಶಸ್ಸಿನ ನಂತರ 'ಅವಳು' ಧಾರಾವಾಹಿಯ ಮಹಾಸಂಚಿಕೆ ಜನವರಿ 8 ರಿಂದ ರಾತ್ರಿ 7.30 ರಿಂದ 8.30 ರವರೆಗೆ ಪ್ರಸಾರವಾಗಲಿದೆ.

ಅವಳು ಕಥೆಯಾದವಳು..: ತಂಗಿಯ ಒಳಿತಿಗಾಗಿ ವಯಸ್ಸಿನಲ್ಲಿ ಅಂತರವಿರುವ ಮಧುಸೂದನನನ್ನು ಮದುವೆಯಾಗುತ್ತಾಳೆ ಮಾನಸಾ. ಆದರೆ ಈಕೆಯ ಗಂಡನ ಮಗನೇ ತನ್ನ ತಂಗಿಯ ಗಂಡ ಅನ್ನೋ ಸತ್ಯ ಗೊತ್ತೇ ಇರಲ್ಲ..!

Udaya TV's 'Avalu'- Mahasanchike from Jan 8th

ಹೀಗಾಗಿ ಮಧುಸೂದನನಿಗೆ 20 ವರ್ಷದ ಹಿಂದೆ ಕಳೆದ ಹೋದ ಮಗನೇ ಸಿದ್ದಾರ್ಥ ಅನ್ನೋ ಸತ್ಯವನ್ನ ಹೇಳಬೇಕಾದ ಪರಿಸ್ಥಿತಿ ಬರುತ್ತದೆ. ಕೊನೆಗೂ ಅಪ್ಪ ಮಗ ಒಂದಾದ್ರು ಅನ್ನೋ ಖುಷಿಯಲ್ಲಿರಬೇಕಾದ ಸಂದರ್ಭದಲ್ಲೇ ಇತ್ತ ತಂಗಿಗೇ ತನ್ನ ಅಕ್ಕನೇ ಅತ್ತೆಯಾಗಿದ್ದಾಳೆ.

ಮಾನಸಾಳೇ ತನ್ನ ಗಂಡನನ್ನ ಜೈಲಿಗೆ ಕಳುಹಿಸೋದಕ್ಕೆ ಕಾರಣವೆಂಬ ಕೋಪಕ್ಕೆ ತಂಗಿ ಶ್ವೇತಾ ಅವಳನ್ನ ದ್ವೇಷಿಸಲು ಶುರುಮಾಡುತ್ತಾಳೆ. ಹಾಗೂ ಅಕ್ಕನ ಹೊಟ್ಟೆಯಲ್ಲಿರುವ ಮಗುವನ್ನ ಸಾಯಿಸಿ, ತನ್ನ ಗಂಡನೇ ಇಡೀ ಆಸ್ತಿಗೆ ವಾರಸ್ದಾರನಾಗಬೇಕೆಂಬ ದುರಾಸೆಯನ್ನ ಹೊಂದುತ್ತಾಳೆ ಶ್ವೇತಾ!

Udaya TV's 'Avalu'- Mahasanchike from Jan 8th

ಅಕ್ಕ-ತಂಗಿ ಅತ್ತೆ-ಸೊಸೆಯಾಗಿ ಒಂದೇ ಮನೆಯಲ್ಲಿ ಸಂಬಂಧಗಳ ಗೋಜಲಿನ ಸುಳಿಯಲ್ಲಿ ಸಿಲುಕಿದ್ದಾರೆ. ಮುಂದೆ ತಂಗಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿರೋ ಮಾನಸಾ ಈಗಲೂ ಆಕೆಯ ಖುಷಿಗಾಗಿ ಹೊಟ್ಟೆಯಲ್ಲಿರೋ ತನ್ನ ಮಗುನ ಕೊಲ್ತಾಳೋ ಅಥವಾ ಈ ಪರಿಸ್ಥಿತಿಯನ್ನ ಹೇಗೆ ಎದುರಿಸ್ತಾಳೆ ಮಾನಸಾ?

ವೀಕ್ಷಿಸಿ 'ಅವಳು' ಮಹಾಸಂಚಿಕೆ ಇದೇ ಸೋಮವಾರ ದಿಂದ ಶುಕ್ರವಾರ ರಾತ್ರಿ 7:30 ರಿಂದ 8:30 ರವರೆಗೆ...

ಇದರ ಜೊತೆ ಉದಯ ಟಿವಿಯಲ್ಲಿ ಇದುವೆರೆಗೆ ಮಹಾಸಂಚಿಕೆಯಾಗಿ ಪ್ರಸಾರವಾಗುತ್ತಿದ್ದ ನಂದಿನಿ 8 ಗಂಟೆಯ ಬದಲಿಗೆ 8:30 ಕ್ಕೆ ಪ್ರಸಾರವಾಗಲಿದೆ.

English summary
Kannada Serial 'Avalu' Mahasanchike is aired in Udaya TV from Jan 8th, 7.30 to 8.30 PM.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X