»   » ಇದೇ ಸೋಮವಾರದಿಂದ ಉದಯ ಟಿವಿಯಲ್ಲಿ ಸೀರಿಯಲ್ ಮಹಾಸಂಚಿಕೆಗಳ ಮಹಾಪೂರ

ಇದೇ ಸೋಮವಾರದಿಂದ ಉದಯ ಟಿವಿಯಲ್ಲಿ ಸೀರಿಯಲ್ ಮಹಾಸಂಚಿಕೆಗಳ ಮಹಾಪೂರ

Posted By:
Subscribe to Filmibeat Kannada

ಮನರಂಜನಾ ವಾಹಿನಿಗಳ ಹಿರಿಯಣ್ಣನಂತಿರುವ ಉದಯ ವಾಹಿನಿ ಈಗ ಮಹಾಸಂಚಿಕೆಗಳ ಮಹಾಪೂರವನ್ನೇ ಹೊತ್ತು ತರುತ್ತಿದೆ. ಒಂದು ವಾರ ಪೂರಾ ಪ್ರಮುಖ ಘಟ್ಟದಲ್ಲಿರುವ ಧಾರಾವಾಹಿಗಳ ಒಂದು ಗಂಟೆ ಅವಧಿಯ ಮಹಾ ಸಂಚಿಕೆಗಳು ಪ್ರಸಾರವಾಗಲಿವೆ.

ಮಾರ್ಚ್ 12 ಕ್ಕೆ ಸಂಜೆ ಏಳು ಗಂಟೆಯಿಂದ 'ಕಾವೇರಿ' ಧಾರಾವಾಹಿಯ ಮಹಾಸಂಚಿಕೆ ಪ್ರಸಾರವಾಗಲಿದೆ. ಕಾವೇರಿ ಬಗ್ಗೆ ಮನಸು ತುಂಬಾ ಪ್ರೀತಿಯಿದ್ದರೂ ಹೇಳಿಕೊಳ್ಳಲಾಗದೆ ಒದ್ದಾಡುತ್ತಿರುವ ಸಂತೋಷ್. ತಾನು ಈಗ ಇರುವ ಸ್ಥಿತಿ ಅಷ್ಟೇ ಸತ್ಯ ಅಂದ್ಕೊಂಡು ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗ್ತಿರೋ ಕಾವೇರಿ. ಹಾಸಿನಿಗೆ ತಾಳಿ ಕಟ್ಟಿದ್ರೂ ಕಾವೇರಿಯ ಪ್ರೇಮದ ಗುಂಗಿನಲ್ಲೇ ವಿಚ್ಛೇದನದ ದಾರಿ ಹುಡುಕಿಕೊಂಡಿರುವ ಮಿಥುನ್. ಇವರೆಲ್ಲರ ಬದುಕಿನ ಮುಂದಿನ ದಿಕ್ಕೇನು? ಎಂಬ ಕುತೂಹಲ ಈ ಮಹಾಸಂಚಿಕೆಯಲ್ಲಿದೆ.

Udaya TV Serials Mahasanchike from March 12th

ಮಾರ್ಚ್ 13 ರ ಸಂಜೆ 7.30 ರಿಂದ 8.30 ರ ವರೆಗೆ 'ಅವಳು' ಮಹಾಸಂಚಿಕೆ ಪ್ರಸಾರವಾಗಲಿದೆ. ಸೋನಿಯಾಳ ಬಲೆಯಲ್ಲಿ ಸಿಕ್ಕಿ ಬಿದ್ದು ತನ್ನ ನೆನಪಿನ ಶಕ್ತಿಯನ್ನ ಕಳ್ಕೊಂಡಿರುವ ಶ್ವೇತಾ ಈಗ ತಾನೇ ಗುಣಮುಖಳಾಗಿ ಮನೆಗೆ ಬಂದಿರುತ್ತಾಳೆ.

ತನ್ನ ಪ್ರಾಣವಾಗಿರುವ ತಂಗಿ ಶ್ವೇತಾಳನ್ನ ಮಾನಸಾ ಈ ಎಲ್ಲಾ ಗೋಜಲುಗಳಿಂದ ಹೊರ ಬಂದು ಅವಳಿಗೆ ಖುಷಿ ಪಡಿಸಲು ವಿಶೇಷವಾಗಿರುವ ಜಗತ್ತನ್ನೇ ಸೃಷ್ಟಿಮಾಡುತ್ತಾಳೆ. ಇಲ್ಲಿಗೆ ವಿಶೇಷ ಅತಿಥಿಯಾಗಿ ಹೊಸತಾಗಿ ಆರಂಭವಾಗಲಿರುವ 'ಕಣ್ಮಣಿ' ಧಾರಾವಾಹಿಯ ಅಂಜಲಿ ಮತ್ತು ಡಿ.ಕೆ ಬರುತ್ತಾರೆ.

Udaya TV Serials Mahasanchike from March 12th

ಯುಗಾದಿ ಹಬ್ಬದ ಉಡುಗೊರೆ: ಉದಯ ಟಿವಿಯಲ್ಲಿ 'ಅಂಜನಿಪುತ್ರ' ಪ್ರೀಮಿಯರ್ 

ಮಾರ್ಚ್ 14 ರಂದು 'ಬ್ರಹ್ಮಾಸ್ತ್ರ' ಧಾರಾವಾಹಿಯ ವಿಶೇಷ ಸಂಚಿಕೆ ಪ್ರಸಾರವಾಗಲಿದೆ. ಮಾರ್ಚ್ 15 ರಂದು 'ನಂದಿನಿ' ಮಹಾಸಂಚಿಕೆ ರಾತ್ರಿ 8.30 ರಿಂದ 9.30 ರವರೆಗೂ ಪ್ರಸಾರವಾಗಲಿದೆ.

ಮಾರ್ಚ್ 16 ರಂದು ಇತ್ತೀಚೆಗಷ್ಟೇ ಆರಂಭವಾಗಿ ಜನಮನಸೂರೆಗೊಂಡ ಕನ್ನಡ ಕಿರುತೆರೆ ಇತಿಹಾಸದಲ್ಲಿಯೇ ವಿನೂತನ ಪ್ರಯತ್ನವಾದ 'ಮಾನಸ ಸರೋವರ' ವಿಶೇಷ ಸಂಚಿಕೆ ಪ್ರಸಾರವಾಗಲಿದೆ.

Udaya TV Serials Mahasanchike from March 12th

ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿರುವ 'ದೇವಯಾನಿ' ಧಾರಾವಾಹಿಯ ಮುಖ್ಯ ಭೂಮಿಕೆಯಲ್ಲಿರುವ ಆಶಿತಾ ಚಂದ್ರಪ್ಪ ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹೋಳಿ ಹಬ್ಬವನ್ನು ಆನಂದ್ ಹೇಗೆ ಆಚರಿಸುತ್ತಾನೆ? ತನ್ನನ್ನು ದೂರ ಮಾಡಿದವಳ ನೆನಪು ಆನಂದ್ ನನ್ನು ಯಾವ ಸ್ಥಿತಿಗೆ ಕೊಂಡೊಯ್ಯುತ್ತದೆ ಇತ್ಯಾದಿಗಳು ಮಹಾ ಎಪಿಸೋಡ್ ನಲ್ಲಿ ವೀಕ್ಷಿಸಬಹುದಾಗಿದೆ.

Udaya TV Serials Mahasanchike from March 12th

ಒಟ್ಟಿನಲ್ಲಿ ಒಂದಿಡೀ ವಾರ ಕನ್ನಡ ಧಾರಾವಾಹಿ ವೀಕ್ಷಕರಿಗೆ ಉದಯ ವಾಹಿನಿಯಲ್ಲಿ ರಸದೌತಣವೇ ಸಿಗಲಿದೆ. ಇಷ್ಟೇ ಅಲ್ಲದೇ ಗೋಲ್ಡನ್ ಮಂಥ್ ಕಾಂಟೆಸ್ಟ್ ಕೂಡ ನಡೆಯುತ್ತಿದ್ದು, ಅದೃಷ್ಟಶಾಲಿ ವೀಕ್ಷಕರು ಚಿನ್ನವನ್ನು ಗೆಲ್ಲುವುದಕ್ಕೂ ಅವಕಾಶವಿದೆ.

English summary
Udaya TV's popular Serials such as 'Kaveri', 'Avalu', 'Brahmastra', 'Manasa Sarovara' Mahasanchike to telecast from March 12th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada