»   » 'ಉದಯ ಟಿವಿ'ಯಲ್ಲಿ ದಸರಾ ದರ್ಬಾರ್: ಶುಕ್ರವಾರ, ಶನಿವಾರ ಮಹಾರಂಜನೆ

'ಉದಯ ಟಿವಿ'ಯಲ್ಲಿ ದಸರಾ ದರ್ಬಾರ್: ಶುಕ್ರವಾರ, ಶನಿವಾರ ಮಹಾರಂಜನೆ

Posted By:
Subscribe to Filmibeat Kannada

ದಸರಾ ಹಬ್ಬದ ಪ್ರಯುಕ್ತ ನಿಮ್ಮ ನೆಚ್ಚಿನ ಉದಯ ಟಿವಿ ಕರುನಾಡ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಹರಿಸಲಿದೆ. ಎರಡು ಹೊಚ್ಚ ಹೊಸ ಚಲನಚಿತ್ರಗಳು, ಸೀರಿಯಲ್ ಹಬ್ಬ ಮತ್ತು ಕೈರುಚಿ ಸೇರಿದಂತೆ ವಿಶೇಷ ಕಾರ್ಯಕ್ರಮಗಳು ಪ್ರಸಾರ ಆಗಲಿವೆ.

ನವರಾತ್ರಿಯ ಒಂಬತ್ತನೆಯ ದಿನವಾದ 'ಆಯುಧ ಪೂಜೆ'ಯಂದು ಕೈರುಚಿ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳು ತಮ್ಮ ಕೈರುಚಿಯನ್ನು ಉಣಬಡಿಸಲಿದ್ದಾರೆ. ಮುಂದೆ ಓದಿರಿ...

ವೈಶಾಲಿ 'ಕೈರುಚಿ'

'ಚಾರ್ಲಿ' ಹಾಗೂ 'ಭರ್ಜರಿ' ಸಿನಿಮಾಗಳಲ್ಲಿ ಅಭಿನಯಿಸಿರುವ ವೈಶಾಲಿ ತಮ್ಮ ಚಿತ್ರಗಳ ಅನುಭವವನ್ನು ಹಂಚಿಕೊಳ್ಳುತ್ತಾ, ಹಬ್ಬದ ಸ್ಪೆಷಲ್ ಗೆ ರುಚಿಕರವಾದ ಅಡುಗೆಯನ್ನು ತಿಳಿಸಿಕೊಡಲಿದ್ದಾರೆ.

ದೊಡ್ಮನೆ ಸೊಸೆ ಗಗನ

'ದೊಡ್ಮನೆ ಸೊಸೆ' ಧಾರಾವಾಹಿ ಖ್ಯಾತಿಯ ಗಗನ ಅವರು ದಸರಾ ಹಬ್ಬದ ಪ್ರಯುಕ್ತ ವಿಶೇಷ ಅಡುಗೆ ಹೇಳಿಕೊಡಲಿದ್ದಾರೆ. ಸೆಪ್ಟೆಂಬರ್ 29 ರಂದು ಮಧ್ಯಾಹ್ನ 12ಕ್ಕೆ 'ಕೈರುಚಿ' ಕಾರ್ಯಕ್ರಮ ಪ್ರಸಾರ ಆಗಲಿದೆ.

ಸಿನಿಮಾ ಪ್ರೀಮಿಯರ್ - ಕಥೆ, ಚಿತ್ರಕಥೆ, ನಿರ್ದೇಶನ ಪುಟ್ಟಣ್ಣ

'ಕಥೆ, ಚಿತ್ರಕಥೆ, ನಿರ್ದೇಶನ ಪುಟ್ಟಣ್ಣ' ಸಿನಿಮಾ ಮಧ್ಯಾಹ್ನ 1ಕ್ಕೆ ಪ್ರಸಾರ ಆಗಲಿದೆ. ನಟ ಕೋಮಲ್ ಕುಮಾರ್ ಹಾಗೂ ಪ್ರಿಯಾಮಣಿ ಅಭಿನಯದ ಈ ಸಿನಿಮಾದಲ್ಲಿ ಹಾರರ್ ಹಾಗೂ ಹಾಸ್ಯ ಮಿಶ್ರಿತ ಅಂಶಗಳಿವೆ. 2016ರ ಯಶಸ್ವಿ ಚಿತ್ರಗಳಲ್ಲಿ ಒಂದಾಗಿರುವ ಈ ಚಿತ್ರ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಉದಯ ಟಿವಿಯಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗಲಿದೆ.

ಸೀರಿಯಲ್ ಹಬ್ಬ

ದಸರಾ ಹಬ್ಬದ ವಿಶೇಷವಾಗಿ ಉದಯ ಟಿವಿ ಆಯೋಜಿಸಿದ್ದ 'ಸೀರಿಯಲ್ ಹಬ್ಬ' ಶುಕ್ರವಾರ ಸಂಜೆ 4.30ಕ್ಕೆ ಪ್ರಸಾರಗೊಳ್ಳಲಿದೆ. ನವರಾತ್ರಿಯ ವಿಶೇಷವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಉದಯ ಟಿವಿಯ ಪ್ರಸಿದ್ಧ ಧಾರಾವಾಹಿಗಳಾದ 'ಜೋ ಜೋ ಲಾಲಿ', 'ಸರಯೂ' ಮತ್ತು 'ಕಾವೇರಿ' ತಂಡದ ತಾರೆಯರು ಕುಣಿದು ಕುಪ್ಪಳಿಸಿ, ಹಬ್ಬಕ್ಕೆ ಹೊಸ ಕಳೆ ತಂದಿದ್ದಾರೆ. '

ಸಿನಿಮಾ ಪ್ರೀಮಿಯರ್ - ರಾಜ್ ವಿಷ್ಣು

ಸೆಪ್ಟೆಂಬರ್ 30 ರಂದು ಸಂಜೆ 6ಕ್ಕೆ ಶರಣ್ ಹಾಗೂ ಚಿಕ್ಕಣ್ಣ ಅಭಿನಯದ ಈ ವರ್ಷದ ಯಶಸ್ವಿ ಚಿತ್ರಗಳಲ್ಲಿ ಒಂದಾದ ‘ರಾಜ್ ವಿಷ್ಣು' ಚಲನಚಿತ್ರ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

English summary
Watch special programs in Udaya TV on September 29th and September 30th on the occasion of Dasara.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada