For Quick Alerts
  ALLOW NOTIFICATIONS  
  For Daily Alerts

  ಸುವರ್ಣ ವಾಹಿನಿಯಲ್ಲಿ ಉಪೇಂದ್ರ ವಯಸ್ಕರ ಚಿತ್ರ

  By Rajendra
  |

  ಇದು ರೀಲ್ ನಲ್ಲಿ ರಿಯಲ್ ದಂಪತಿಗಳ ಜುಗಲ್ ಬಂದಿ. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅವರ ಶ್ರೀಮತಿ ಪ್ರಿಯಾಂಕಾ ಒಟ್ಟಿಗೆ ಅಭಿನಯದ ಶ್ರೀಮತಿ ಚಿತ್ರ ಇದೇ ಭಾನುವಾರ (ಡಿ.16) ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಸಂಜೆ 6ಕ್ಕೆ ಶ್ರೀಮತಿ ಚಿತ್ರವನ್ನು ವೀಕ್ಷಿಸಬಹುದು.

  ಸುದೀಪ್ ನಾಯಕತ್ವದಲ್ಲಿ 'ಕೆಂಪೇಗೌಡ' ಚಿತ್ರವನ್ನು ನಿರ್ಮಿಸಿದ್ದ ಶಂಕರ್ ಗೌಡ ಈ ಚಿತ್ರದ ನಿರ್ಮಾಪಕರು. ಹಿಂದಿಯಲ್ಲಿ ಯಶಸ್ವಿಯಾಗಿದ್ದ 'ಐತ್ ರಾಜ್ ಚಿತ್ರವನ್ನು 'ಶ್ರೀಮತಿ'ಯಾಗಿ ಕನ್ನಡಕ್ಕೆ ರೀಮೇಕ್ ಆಗಿದೆ.

  ಚಿತ್ರದ ಪಾತ್ರವರ್ಗದಲ್ಲಿ ಪ್ರಿಯಾಂಕಾ, ಸೆಲಿನಾ ಜೇಟ್ಲಿ, ಪ್ರೇಮ್ ಚೋಪ್ರಾ, ಕೋಟ, ಸಯ್ಯಾಜಿ ಶಿಂಧೆ ಮುಂತಾದವರಿದ್ದಾರೆ. ಈ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ 'ಎ' ಸರ್ಟಿಫಿಕೇಟ್ ನೀಡಿದೆ. ಅಂದರೆ ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ. ಚಿತ್ರದಲ್ಲಿ ಪಡ್ಡೆಗಳ ಮೈ ಬೆಚ್ಚಗೆ ಮಾಡುವ ಕೆಲವು ಸನ್ನಿವೇಶಗಳು ಇರುವುದೇ 'ಎ' ಸರ್ಟಿಫಿಕೇಟ್ ಗೆ ಕಾರಣ.

  ಪ್ರಿಯಾಂಕಾ ಅವರನ್ನು ಉಪೇಂದ್ರ ಕೈಹಿಡಿದ ಬಳಿಕ ಇಬ್ಬರೂ ಜೊತೆಯಾಗಿ ಅಭಿನಯಿಸಿದ ಮೊದಲ ಚಿತ್ರವಿದು. ಇದಕ್ಕೂ ಮುನ್ನ ಎಚ್ ಟುಓ ಚಿತ್ರದಲ್ಲಿ ಅಭಿನಯಿಸಿದ್ದರಾದರೂ ಆಗಿನ್ನೂ ಪ್ರಿಯಾಂಕಾ ಅವರ ಕೈಹಿಡಿದಿರಲಿಲ್ಲ ಉಪ್ಪಿ.

  ಜಾನಿಲಾಲ್ ಛಾಯಾಗ್ರಹಣ, ಚಿನ್ನಿಪ್ರಕಾಶ್ ನೃತ್ಯನಿರ್ದೇಶನ, ರಾಜೇಶ್ ರಾಮನಾಥ್ ಸಂಗೀತ ಚಿತ್ರಕ್ಕಿದೆ. ಎಂ ರವಿ ಆಕ್ಷನ್ ಕಟ್ ಹೇಳಿರುವ ಚಿತ್ರ. ಚಿತ್ರದಲ್ಲಿ ಪ್ರಿಯಾಂಕಾ ಹಾಗೂ ಉಪೇಂದ್ರ ಅವರು ಅದ್ಭುತವಾಗಿ ಅಭಿನಯಿಸಿದ್ದಾರೆ. ಈ ಭಾನುವಾರ ಡೋಂಟ್ ಮಿಸ್ 'ಶ್ರೀಮತಿ'. (ಒನ್ಇಂಡಿಯಾ ಕನ್ನಡ)

  English summary
  Real Star Upendra, Priyanka Upendra, Celina Jaitley lead Kannada movie Srimathi being aired on Asianet Suvarna channel on 16th December at 6 pm IST. The movie got 'A’ certificate by the regional censor board. t is an Hindi film 'Aitraaz' remake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X