»   » 'ಧಾರಾವಾಹಿ ನಿಲ್ಲಿಸು' ಎಂದು ದೇವರಿಗೆ ಮನವಿ ಮಾಡುತ್ತಿರುವ ಪ್ರೇಕ್ಷಕ

'ಧಾರಾವಾಹಿ ನಿಲ್ಲಿಸು' ಎಂದು ದೇವರಿಗೆ ಮನವಿ ಮಾಡುತ್ತಿರುವ ಪ್ರೇಕ್ಷಕ

Posted By:
Subscribe to Filmibeat Kannada
ಲಕ್ಷ್ಮೀ ಬರಬೇಡಮ್ಮಅಂತಿದ್ದಾರೆ ಪ್ರೇಕ್ಷಕರು | Filmibeat Kannada

ಕಿರುತೆರೆ ಈಗ ಬೆಳ್ಳಿ ತೆರೆಯಷ್ಟೇ ಪ್ರಬಾವ ಬೀರುತ್ತಿವೆ. ತಂತ್ರಜ್ಙಾನದ ವಿಚಾರದಲ್ಲಿ ಆಗಲಿ ಕಥೆಗಳ ಆಯ್ಕೆಯಲ್ಲಾಗಲಿ, ವಿಭಿನ್ನ ಹಾಗೂ ವಿಶಿಷ್ಟ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಇನ್ನು ಧಾರಾವಾಹಿಗಳು ಜನರ ಮೇಲೆ ಅದೆಷ್ಟರ ಮಟ್ಟಿಗೆ ಪ್ರಬಾವ ಬೀರಿದೆ ಎಂದರೆ, ಧಾರಾವಾಹಿಗಳನ್ನ ಮರುಪ್ರಸಾರವನ್ನು ಬಿಡದೇ ನೋಡುವ ಅದೆಷ್ಟೋ ಪ್ರೇಕ್ಷಕರು ಇದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಧಾರಾವಾಹಿಗಳಿಗೆ ಅತಿ ಹೆಚ್ಚು ವೀಕ್ಷಕರಿದ್ದಾರೆ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ಪ್ರತಿ ನಿತ್ಯ ಪ್ರಸಾರ ಆಗುವ 'ಲಕ್ಷ್ಮೀ ಬಾರಮ್ಮ ಸೀರಿಯಲ್ ಅನ್ನು ನಿಲ್ಲಿಸು ದೇವರೇ' ಅಂತ ವೀಕ್ಷಕರು ಕೇಳಿಕೊಳ್ಳುತ್ತಿದ್ದಾರೆ.

ಫ್ಯಾಮಿಲಿ ಪವರ್ ನಲ್ಲಿ ಸೀರಿಯಲ್ ಸ್ಟಾರ್ ಗಳ ಹಣಾಹಣಿ

ಅಷ್ಟೊಂದು ವೀಕ್ಷಕರು ನೋಡಿ ಮೆಚ್ಚಿಕೊಳ್ಳುತ್ತಿರುವ ಧಾರಾವಾಹಿಯನ್ನು ನಿಲ್ಲಿಸು ಅಂತ ಕೇಳುತ್ತಿರುವುದು ಯಾರು? ಯಾವ ಕಾರಣಕ್ಕೆ ಧಾರಾವಾಹಿಯನ್ನ ನಿಲ್ಲಿಸು ಅಂತಿದ್ದಾರೆ? ಎನ್ನು ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಿಮಗೆ ನೀಡಲಿದ್ದೇವೆ. ಮುಂದೆ ಓದಿ

ದೇವರಲ್ಲಿ ಮನವಿ ಮಾಡಿದ ಪ್ರೇಕ್ಷಕ

ನೀವು ಲಕ್ಷ್ಮೀ ಬಾರಮ್ಮ ಧಾರಾವಾಹಿ ವೀಕ್ಷಕರಾಗಿದ್ದರೆ, ಎಲ್ಲರಿಗೂ ತಿಳಿದಿರುವಂತೆ ಸೀರಿಯಲ್ ನಲ್ಲಿ ಗೊಂಬೆ ಕಿಡ್ನಾಪ್ ಆಗಿದೆ. ಅದೆಷ್ಟೇ ಕಷ್ಟ ಪಟ್ಟರೂ ಗೊಂಬೆಯ ಪತ್ತೆ ಮಾತ್ರ ಆಗುತ್ತಿಲ್ಲ. ಆದರೆ ಈಗ ಧಾರಾವಾಹಿಯಲ್ಲಿ ಹೊಸ ಕತೆ ಆರಂಭ ಆಗಲಿದೆ ಎನ್ನುವ ಪ್ರೋಮೋ ಬರುತ್ತಿದೆ. ಪ್ರೋಮೋ ನೋಡಿದ ವೀಕ್ಷಕರು ದೇವರೆ ಈ ಧಾರಾವಾಹಿ ನಿಲ್ಲಿಸು ಎಂದು ಮನವಿ ಮಾಡಿದ್ದಾರೆ.

ಬೇಗ ನಿಮ್ಮ ಕತೆ ಮುಗಿಸಿ

ವೀಕ್ಷಕರಿಗೆ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಕತೆ ಎಳೆಯುತ್ತಿದ್ದಾರೆ ಎನ್ನುವ ಫೀಲ್ ಆಗುತ್ತಿದೆಯಂತೆ. ಬೇಗ ಕತೆ ಮುಗಿಸಿ ನಮಗೆ ಧಾರಾವಾಹಿ ನೋಡಲು ಸಾಧ್ಯವಾಗುತ್ತಿಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಗೊಂಬೆ ಪಾತ್ರ ಬದಲಾವಣೆ

ಧಾರಾವಾಹಿ ವೀಕ್ಷಕರು ಸೀರಿಯಲ್ ನಲ್ಲಿ ಅಭಿನಯ ಮಾಡುವ ಪಾತ್ರಧಾರಿಗಳ ಬಗ್ಗೆ ತಿಳಿದುಕೊಳ್ಳುತ್ತಿರುತ್ತಾರೆ. ಗೊಂಬೆ ಪಾತ್ರದಲ್ಲಿ ಅಭಿನಯ ಮಾಡಿದ್ದ ನೇಹಾ ಗೌಡ ಇತ್ತೀಚಿಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೇ ಸಮಯದಲ್ಲಿ ಹೊಸ ಕತೆ ಎನ್ನುವ ಪ್ರೋಮೋ ಪ್ರಸಾರವಾಗುತ್ತಿದೆ. ಅನೇಕ ವೀಕ್ಷಕರು ಗೊಂಬೆ ಪಾತ್ರವನ್ನ ಬದಲಾವಣೆ ಮಾಡುತ್ತಿದ್ದಾರೆ. ದಯಮಾಡಿ ಚೇಂಜ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಗೊಂಬೆ ಬೇಗ ಬನ್ನಿ

ಕೆಲವರು ದಯಮಾಡಿ ಧಾರಾವಾಹಿ ನಿಲ್ಲಿಸಿ ಎಂದು ಕಮೆಂಟ್ ಮಾಡಿದರೆ ಇನ್ನೂ ಕೆಲವರು ಗೊಂಬೆ ನಮ್ಮ ಮನೆಯವರು ನಿಮ್ಮನ್ನು ಮಿಸ್ ಮಾಡಿಕೊಳ್ತಿದ್ದಾರೆ. ಪ್ಲೀಸ್ ಬೇಗ ಬನ್ನಿ ಎಂದು ಮನವಿ ಮಾಡುತ್ತಿದ್ದಾರೆ. ಹಳೆ ಗೊಂಬೆ ಬರಲಿಲ್ಲ ಎಂದಿದ್ದಾರೆ ನಾವು ಧಾರಾವಾಹಿ ನೋಡುವುದಿಲ್ಲ ಎಂದು ಇನ್ನು ಅನೇಕರು ಕಮೆಂಟ್ ಮಾಡಿದ್ದಾರೆ.

English summary
Kannada serial Viewers are requesting God to stop 'Laxmi Baramma' Serial, watching Lakshmi baramma serial new promo audience commenting on Facebook and also Viewers requesting to colours kannada team dont change Gombe charecter. Lakshmi baramma serial

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X