For Quick Alerts
  ALLOW NOTIFICATIONS  
  For Daily Alerts

  ZEE Kutumba Awards 2022 Winners : ಜೀ ಕುಟುಂಬ ಅವಾರ್ಡ್ಸ್‌: ಯಾವ ನಟರಿಗೆ ಯಾವ ಪ್ರಶಸ್ತಿ? ಅತ್ಯುತ್ತಮ ಧಾರಾವಾಹಿ ಯಾವುದು?

  By ಪೂರ್ವ
  |

  ಜೀ ಕನ್ನಡ ಕುಟುಂಬ ಅವಾರ್ಡ್ಸ್-2022 ಧಾರಾವಾಹಿಗಳಷ್ಟೆ ಪ್ರೇಕ್ಷಕರ ಮನರಂಜಿಸಿದೆ. ಸಿನಿ ತಾರೆಯರ ರಿಯಲ್ ಲೈಫ್ ಜರ್ನಿ ಹಾಗೂ ಈಗಿನ ಕಲರ್ ಫುಲ್ ಧಾರಾವಾಹಿಗಳಲ್ಲಿ ಅವಾರ್ಡ್ ಗೆದ್ದುಕೊಳ್ಳುವ ಖುಷಿ ಇದೆಲ್ಲ ನೋಡುಗರ ಮನಸೂರೆಗೊಂಡಿದೆ. ನಟ-ನಟಿಯರಿಗೆ ಖಾಸಗಿಯಾಗಿ ಅದೆಷ್ಟೆ ನೋವು ಇದ್ದರೂ ಶೂಟಿಂಗ್ ಮಾಡುವ ವೇಳೆ ಅದನ್ನೆಲ್ಲ ಮರೆತು ಅಭಿನಯದಲ್ಲಿ ಮುಳುಗಿ ಹೋಗಿರುತ್ತಾರೆ. ಅದೆಷ್ಟು ಏಳು ಬೀಳುಗಳು ಎದುರಾದರೂ ಗುರಿ ಮುಟ್ಟುವ ವರೆಗೂ ಚಲ ಬಿಡದೆ ದುಡಿದು ಇದೀಗ ಉತ್ತಮ ಮಟ್ಟಕ್ಕೆ ಏರಿದ್ದಾರೆ. ಇದಕ್ಕೆ ಅದ್ಭುತ ಉದಾಹರಣೆ ನಟಿ ಉಮಾಶ್ರೀ.

  ಗಂಡನನ್ನು ಬಿಟ್ಟು ಬಂದು ತವರು ಮನೆಗೆ ಬಂದ ವೇಳೆ ಊರಿನವರ ಮಾತಿಗೆ ಹೆದರಿ ಅವರ ತಂದೆ ತಾಯಿ ಬಚ್ಚಲು ಮನೆಯಲ್ಲಿ ಇರಲು ಅವಕಾಶ ಕೊಡುತ್ತಾರೆ. ಅಲ್ಲಿ ಇಡ್ಲಿ ಮಾಡಿ ಅದನ್ನು ಮಾರಿ ಬದುಕುತ್ತಿದ್ದರು ಉಮಾಶ್ರೀ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಹಾಗೆಯೇ ಗಂಡ ಬಿಟ್ಟು ಹೋದರು ಮೆಸ್ ನಡೆಸಿಕೊಂಡು ಜೀವನ ಸಾಗಿಸುತ್ತಾರೆ ಪುಟ್ಟಕ್ಕ ಅದೇ ರೀತಿ ನನ್ನ ಜೀವನದಲ್ಲಿ ಕೂಡ ನಡೆದಿದೆ ಎಂದು ಮೆಲುಕು ಹಾಕಿ ಅತ್ತರು ಉಮಾಶ್ರೀ.

  ಜೀ ಕನ್ನಡ ಕುಟುಂಬ ಅವಾರ್ಡ್ಸ್ 2022: ಯಾವ ನಟರಿಗೆ ಯಾವ ಪ್ರಶಸ್ತಿ? ಜೀ ಕನ್ನಡ ಕುಟುಂಬ ಅವಾರ್ಡ್ಸ್ 2022: ಯಾವ ನಟರಿಗೆ ಯಾವ ಪ್ರಶಸ್ತಿ?

  ಈ ಭಾವುಕ ಕತೆಗಳ ಜೊತೆಗೆ ಮನೊರಂಜನೆಯೂ ಕಾರ್ಯಕ್ರಮದಲ್ಲಿ ಇತ್ತು. ಹಲವು ನಟ ನಟಿಯರು ಡಾನ್ಸ್ ಮಾಡಿ ಮನರಂಜನೆ ನೀಡಿದರು. ಕಾರ್ಯಕ್ರಮಕ್ಕೆ ಅವಾರ್ಡ್ ಕೊಡಲು ಆಗಮಿಸಿದ ಸಂಗೀತ ಅವರು ಪಟಾಕಿ ನೆನಪು ತೆರೆದಿಟ್ಟಿದ್ದು ವಿಶೇಷ. ಪಾರು ಧಾರಾವಾಹಿಯ ಪ್ರೀತು ಅತ್ಯುತ್ತಮ ಬ್ರದರ್ ಪ್ರಶಸ್ತಿಗೆ ಆಯ್ಕೆ ಆದರೆ ಇನ್ನೊಂದು ಕಡೆ ಗಟ್ಟಿಮೇಳ ಧಾರಾವಾಹಿಯ ವಿಕ್ರಾಂತ್ ಸಹ ಅದೇ ಪ್ರಶಸ್ತಿಗೆ ಆಯ್ಕೆ ಆಗಿದ್ದು ಡಬಲ್ ಖುಷಿ.

  ಬೆಸ್ಟ್ ಸಹೋದರ ಅವಾರ್ಡ್ ಇಬ್ಬರಿಗೆ ಹಂಚಿ ಹೋಗಿದೆ

  ಬೆಸ್ಟ್ ಸಹೋದರ ಅವಾರ್ಡ್ ಇಬ್ಬರಿಗೆ ಹಂಚಿ ಹೋಗಿದೆ

  ಪ್ರಶಸ್ತಿ ಗೆದ್ದ ಪ್ರೀತಮ್ ವೇದಿಕೆ ಮೇಲೆ ಖುಷಿ ಹಂಚಿಕೊಂಡರು. ಬಳಿಕ ಪಾರು ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು. ಇನ್ನು ವಿಕ್ರಾಂತ್ ವೇದಿಕೆಯಲ್ಲಿ ಮಾತನಾಡುತ್ತಾ ಇರುವ ವೇಳೆ ಆತನ ತಂಗಿ ಮತ್ತು ಅಮ್ಮ ಸ್ಟೇಜ್ ಮೇಲೆ ಆಗಮಿಸಿ ಸರ್ ಪ್ರೈಸ್ ನೀಡಿದರು. ವೇದಿಕೆಗೆ ಆಗಮಿಸಿದ ಪ್ರೇಮ್ ಮಾತ್ರ ಎಲ್ಲರನ್ನೂ ಹೊಟ್ಟೆ ಹುಣ್ಣಾಗುವಂತೆ ನಗಿಸಿದರು. ಈ ವೇಳೆ ವೇದಿಕೆಗೆ ಆಗಮಿಸಿದ ಹೇಮಾ ಅವರನ್ನು ನೋಡಿ ಬಹಳ ಖುಷಿ ಪಡುತ್ತಾರೆ ಬಳಿಕ ಅಮೆರಿಕ ಅಮೆರಿಕ ಚಿತ್ರವನ್ನು 25 ಬಾರಿ ನೋಡಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.

  ಜೀ ಕುಟುಂಬ ಕಣ್ಮಣಿ ಪ್ರಶಸ್ತಿ ಇಬ್ಬರಿಗೆ!

  ಜೀ ಕುಟುಂಬ ಕಣ್ಮಣಿ ಪ್ರಶಸ್ತಿ ಇಬ್ಬರಿಗೆ!

  ಬಳಿಕ ನಟಿ ಹೇಮಾ, ಜೀ ಕುಟುಂಬದ ಕಣ್ಮಣಿ ಎಂಬ ಪ್ರಶಸ್ತಿಯನ್ನು ಪಾರು ಧಾರವಾಹಿಯ ನಾಯಕ ನಟ ಆದಿ ಗೆ ಹಾಗೂ ನಾಗಿಣಿ 2 ಧಾರವಾಹಿಯ ಶಿವಾನಿಗೆ ನೀಡಿದರು. ಈ ವೇಳೆ ವೇದಿಕೆಗೆ ಆಗಮಿಸಿದ 'ಹಿಟ್ಲರ್ ಕಲ್ಯಾಣ' ಖ್ಯಾತಿಯ ಏಜೆ ಆಗಮಿಸಿ ಅವರು ಶರತ್ ಬಗ್ಗೆ ಉತ್ತಮ ಮಾತುಗಳನ್ನು ಆಡಿದರು. ಇನ್ನು ಧಾರಾವಾಹಿಯ ಮನಗೆದ್ದ ಪಾರು ಹಾಗೂ ಆದಿಯ ಸಖತ್ ಪರ್ಫಾರ್ಮೆನ್ಸ್ ನೀಡಿದರು.

  ಜೀ ಕುಟುಂಬ ಹೆಮ್ಮೆ ಅವಾರ್ಡ್ ಶಿವಣ್ಣನ ಪಾಲು

  ಜೀ ಕುಟುಂಬ ಹೆಮ್ಮೆ ಅವಾರ್ಡ್ ಶಿವಣ್ಣನ ಪಾಲು

  ಜೀ ಕುಟುಂಬ ಹೆಮ್ಮೆ ಅವಾರ್ಡ್ ಅನ್ನು ನಟ ಶಿವರಾಜ್ ಕುಮಾರ್ ಅವರಿಗೆ ನೀಡಲಾಯಿತು. ನೆಚ್ಚಿನ ಖಳ ನಟ ಅವಾರ್ಡ್ ಅನ್ನು ಜೊತೆ ಜೊತೆಯಲಿ ಧಾರಾವಾಹಿಯ ಝೆಂಡೆಗೆ ನೀಡಲಾಯಿತು. ನೆಚ್ಚಿನ ಖಳ ನಟಿ ಅವಾರ್ಡ್ ಅನ್ನು ಗಟ್ಟಿಮೇಳ ಧಾರಾವಾಹಿಯ ಸುಹಾಸಿನಿಗೆ ನೀಡಲಾಯಿತು. ನೆಚ್ಚಿನ ಹಾಸ್ಯ ನಟ ಅವಾರ್ಡ್ ಅನ್ನು ನಾಲ್ವರ ಪಾಲಾಗಿದೆ ಹಿಟ್ಲರ್ ಕಲ್ಯಾಣ ವಿಶ್ವರೂಪ ಹಾಗೂ ಪುಟ್ಟಕ್ಕನ ಮಕ್ಕಳು ಮುಂಗುಸಿ, ಹುಲಿರಾಯ, ಮಂಜನೀಗೆ ನೀಡಲಾಯಿತು.

  ಜನ ಮೆಚ್ಚಿದ ಧಾರವಾಹಿ ಯಾವುದು ಗೊತ್ತಾ?

  ಜನ ಮೆಚ್ಚಿದ ಧಾರವಾಹಿ ಯಾವುದು ಗೊತ್ತಾ?

  ನೆಚ್ಚಿನ ಹಾಸ್ಯ ನಟಿ ಸತ್ಯ ಧಾರಾವಾಹಿಯ ದಿವ್ಯಾಗೆ ಪಾಲಾಯಿತು. ಜನಪ್ರಿಯ ನಾಯಕ ನಟ ಗಟ್ಟಿಮೇಳ ವೇದಾಂತ್‌ನ ಪಾಲಾಗಿದೆ. ನೆಚ್ಚಿನ ಅಪ್ಪ ಗಟ್ಟಿಮೇಳದ ಮಂಜುನಾಥ್ ಪಾಲಾಗಿದೆ. ಹೀಗೆ ಹಲವಾರು ವಿವಿಧ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ನೆಚ್ಚಿನ ಧಾರವಾಹಿ ಯಾಗಿ 'ಪುಟ್ಟಕ್ಕನ ಮಕ್ಕಳು' ಧಾರವಾಹಿ ಆಯ್ಕೆ ಆಗಿದೆ. ಜನಪ್ರಿಯ ಧಾರಾವಾಹಿಯಾಗಿ 'ಗಟ್ಟಿ ಮೇಳ' ಧಾರಾವಾಹಿಗೆ ಪ್ರಶಸ್ತಿ ಲಭಿಸಿದೆ. ಉತ್ತಮ ಮನರಂಜನೆ ನೀಡುತ್ತಾ ಜನರ ಮನಸಲ್ಲಿ ಬೇರೂರಿದೆ ಅಂದರೆ ತಪ್ಪಾಗದು.

  English summary
  Zee Kannada Kutumba awards 2022 written updated on 23th October new episode. Know more about it.
  Monday, October 24, 2022, 17:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X