For Quick Alerts
  ALLOW NOTIFICATIONS  
  For Daily Alerts

  ಹಿಟ್ಲರ್ ಕಲ್ಯಾಣ: ಅತ್ಯಾಚಾರದ ಆರೋಪದಿಂದ ತಂದೆಯನ್ನು ಬಚಾವ್ ಮಾಡುತ್ತಾಳಾ ಲೀಲಾ ?

  By ಎಸ್ ಸುಮಂತ್
  |

  ದುರ್ಗಾಳಿಗೆ ಇನ್ನು ಸಮಾಧಾನವಾದಂತೆ ಕಾಣುತ್ತಿಲ್ಲ. ಯಾಕೆಂದರೆ, ಲೀಲಾಳ ಮೇಲಿನ ಸೇಡು ತೀರಿಸಿಕೊಳ್ಳುವ ಕೆಲಸವನ್ನು ಇನ್ನು ಬಿಟ್ಟಿಲ್ಲ. ಇಷ್ಟು ದಿನ ಮನೆಯ ಒಳಗೆ ಮಾಡುತ್ತಿದ್ದ ಕಿತಾಪತಿ ಈಗ ಲೀಲಾ ಮನೆಯವರೆಗೂ ಹೋಗಿದೆ. ಲೀಲಾಳ ಬಳಿಯಿದ್ದ ಅಧಿಕಾರವನ್ನು ಕಿತಾಪತಿಯಿಂದಲೇ ಮತ್ತೆ ಮರಳಿ ಪಡೆದಿದ್ದಾಳೆ. ಆದರೂ ಲೀಲಾಳನ್ನು ಇಕ್ಕಟ್ಟಿಗೆ ಸಿಲುಕಿಸುವ ನೀಚ ಬುದ್ಧಿಯನ್ನು ದುರ್ಗಾ ಮುಂದುವರೆಸಿದ್ದಾಳೆ.

  ಲೀಲಾಳ ಮುಗ್ಧತೆಯೇ ಮುಳುವಾಗುವ ಸಾಧ್ಯತೆ ಹೆಚ್ಚಾಗಿ ಕಾಣಿಸುತ್ತಿದೆ. ಅಧಿಕಾರವೆಲ್ಲವನ್ನೂ ಕೊಟ್ಟ ಬಳಿ ದುರ್ಗಾ ಇನ್ಯಾವುದೇ ತೊಂದರೆ ಕೊಡುವುದಿಲ್ಲ ಎಂದು ಲೀಲಾ ಸುಮ್ಮನೆ ಕುಳಿತುಬಿಟ್ಟಿರುವುದು ದೊಡ್ಡ ಗಂಡಾಂತರವನ್ನೇ ತಂದೊಡ್ಡುವ ಸೂಚನೆ ನೀಡಿದೆ. ಅದರಲ್ಲೂ ಲೀಲಾ ತುಂಬಾ ಪ್ರೀತಿ ಮಾಡುವ ತಂದೆಯ ಮೇಲೆ ಅತ್ಯಾಚಾರದ ಆರೋಪ ಮಾಡಲಾಗಿದೆ. ಇದನ್ನು ಲೀಲಾ ಹೇಗೆ ಸಹಿಸಿಕೊಳ್ಳುತ್ತಾಳೆ ? ತಂದೆಯನ್ನು ಈ ಆರೋಪದಿಂದ ಕಾಪಾಡುವಲ್ಲಿ ಯಶಸ್ವಿಯಾಗುತ್ತಾಳಾ ? ಇವತ್ತಿನ ಎಪಿಸೋಡಿನಲ್ಲಿ ಎಲ್ಲವೂ ಬಗೆಹರಿಯಲಿದೆ.

   ಸಂಭ್ರಮವನ್ನೆಲ್ಲಾ ಕೆಡಿಸುತ್ತಾಳಾ ದುರ್ಗಾ?

  ಸಂಭ್ರಮವನ್ನೆಲ್ಲಾ ಕೆಡಿಸುತ್ತಾಳಾ ದುರ್ಗಾ?

  ಎಜೆ ಮನೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮಗ ಮತ್ತು ಸೊಸೆಯ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡುತ್ತಿದ್ದಾರೆ. ಎಜೆ ಮನೆ ಕಾರ್ಯಕ್ರಮ ಎಂದರೆ ಸಿಕ್ಕಾಪಟ್ಟೆ ಗ್ರ್ಯಾಂಡ್ ಆಗಿ ಇರುತ್ತದೆ. ಅಷ್ಟೆ ಅಲ್ಲ ಸಂಬಂಧಿಕರು, ಸ್ನೇಹಿತರು ನೆರೆದಿರುತ್ತಾರೆ. ಈ ಕಾರ್ಯಕ್ರಮಕ್ಕೆ ಇದೀಗ ಲೀಲಾ ಅಪ್ಪ ಅಮ್ಮನನ್ನು ಕರೆಯಲಾಗಿದೆ. ಎಜೆಗೆ ಎಲ್ಲರ ಮೇಲು ಗೌರವವಿದೆ. ಯಾರಿಗೂ ಬೇಸರವಾಗಬಾರದು. ಹೀಗಾಗಿಯೇ ಮನೆಯವರಿಗೆ ಒಂದೊಂದು ಜವಾಬ್ದಾರಿ ವಹಿಸಿರುತ್ತಾರೆ. ಆದರೆ ದುರ್ಗಾ ಈ ಕಾರ್ಯಕ್ರಮವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಲೀಲಾ ಮನೆಯವರ ಮರ್ಯಾದೆ ತೆಗೆಯಲು ಹೊಂಚು ಹಾಕುತ್ತಿದ್ದಾಳೆ.

   ಇದನ್ನು ಹೇಗೆ ಸಹಿಸುತ್ತಾಳೆ ಲೀಲಾ ?

  ಇದನ್ನು ಹೇಗೆ ಸಹಿಸುತ್ತಾಳೆ ಲೀಲಾ ?

  ಲೀಲಾಳಿಗೆ ತಂದೆಯೆಂದರೆ ಬಲು ಪ್ರೀತಿ. ಸಾಕಿದ ಅಮ್ಮನಿಗಿಂತ ತಂದೆ ಮತ್ತು ತಂಗಿ ಚುಕ್ಕಿ ಎಂದರೆ ಪ್ರಾಣ ಬಿಡುತ್ತಾಳೆ. ಅದಕ್ಕೆ ಉದಾಹರಣೆ ಎಜೆಯನ್ನು ಮದುವೆಯಾಗಿದ್ದು. ಚುಕ್ಕಿಯ ಜೀವನ ಹಾಳಾಗಬಾರದು ಎಂಬ ಕಾರಣಕ್ಕೆ ಎಜೆಯನ್ನು ಲೀಲಾ ಮದುವೆಯಾದಳು. ಇನ್ನು ತಂದೆಯ ಮೇಲೆ ಅಷ್ಟು ಕೆಟ್ಟ ಆರೋಪ ಬಂದಾಗ ಲೀಲಾಳ ಪ್ರತಿಕ್ರಿಯೆ ಹೇಗಿರಬೇಡ. ಕಾರ್ಯಕ್ರಮಕ್ಕೆ ಬಂದ ಮಹಿಳೆಯೊಬ್ಬಳು ರೂಮಿನಲ್ಲಿ ನೇಣು ಬಿಗಿದುಕೊಳ್ಳಲು ಯತ್ನಿಸುತ್ತಿರುತ್ತಾಳೆ. ಇದನ್ನು ನೋಡಿ ತಡೆಯಲು ಮುಂದಾಗುತ್ತಾರೆ ಲೀಲಾ ತಂದೆ. ಆದರೆ ಕಾರ್ಯಕ್ರಮಕ್ಕೆ ಓಡಿ ಬಂದ ಆ ಮಹಿಳೆ ಇವರು ನನ್ನ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದರು ಎಂದು ಸುಳ್ಳು ಆರೋಪ ಮಾಡಿದ್ದಾರೆ. ಇದರಿಂದ ನೆರೆದಿದ್ದವರು ಅಕ್ಷರಶಃ ದಿಗ್ಬ್ರಾಂತರಾಗಿದ್ದಾರೆ. ಆದರೆ ದುರ್ಗಾ ಒಬ್ಬಳನ್ನು ಬಿಟ್ಟು.

   ಲೀಲಾ ಇಷ್ಟಪಡುವ ವ್ಯಕ್ತಿಯಾಗುತ್ತಾರಾ ಎಜೆ?

  ಲೀಲಾ ಇಷ್ಟಪಡುವ ವ್ಯಕ್ತಿಯಾಗುತ್ತಾರಾ ಎಜೆ?

  ಈಗಾಗಲೇ ಎಜೆ ಲೀಲಾ ಮದುವೆಯಾಗಿದೆ. ಅದರ ಜೊತೆಗೆ ಎಡವಟ್ಟು ಮಾಡುವ ಲೀಲಾಳನ್ನು ಸಹಿಸಿಕೊಳ್ಳಲು ಆಗದ ಎಜೆ ಆಗಾಗ ಹೆಣಗಾಡುತ್ತಿರುತ್ತಾರೆ. ಆದರೂ ಲೀಲಾಗೆ ಒಂದಷ್ಟು ಜವಾಬ್ದಾರಿಯನ್ನು ಕೊಟ್ಟು ನೋಡಿದ್ದಾರೆ. ಲೀಲಾಳ ಬೆಂಬಲಕ್ಕೂ ಹಲವು ಬಾರಿ ನಿಂತಿದ್ದಾರೆ. ಆದರೆ ಲೀಲಾ ಎಡವಟ್ಟಿನಿಂದಾಗಿ ಇದೆಲ್ಲಾ ಮಣ್ಣು ಪಾಲಾಗಿದೆ. ಈಗ ಲೀಲಾ ತನ್ನ ಮನಸ್ಸಿನೊಳಗಿರುವ ಆಸೆಯನ್ನು ಹೇಳಿದ್ದಾಳೆ. ಸಮುದ್ರ ದಡದಲ್ಲಿ ಕುಳಿತು ಮನೆ ಕಟ್ಟಬೇಕು. ಮಹಡಿ ಮೇಲೆ ಕೂತು ನಕ್ಷತ್ರ ಏಣಿಸಬೇಕು. ಬೆಳಗ್ಗೆ ಎದ್ದಾಗ ತೋಳುಗಳಲ್ಲಿ ಬಂಧಿಯಾಗಿರಬೇಕು. ಜೀವನದ ಕಡೆಯ ಕ್ಷಣವನ್ನು ನಿನ್ನ ಜೊತೆಗೆ ಕಳೆಯಬೇಕು ಅಂತ ತನ್ನ ಮನಸ್ಸಲ್ಲಿರುವ ಹುಡುಗನ ಬಗ್ಗೆ ತನಗಿರುವ ಕನಸುಗಳನ್ನು ಹಂಚಿಕೊಂಡಿದ್ದಾಳೆ. ಇದು ಅಕ್ಷರಶಃ ಎಜೆಗೆ ಶಾಕ್ ಆಗಿದೆ. ಇಷ್ಟೆಲ್ಲಾ ಆಸೆಗಳಿರುವ ಲೀಲಾ ನನ್ನನ್ನು ವಂಚಿಸಿ ಮದುವೆಯಾಗಿದ್ದೇಗೆ ಎಂದು ಯೋಚಿಸುತ್ತಾ ನಿಲ್ಲುವಂತಾಗಿದೆ.

  ಬದುಕಿನ ಭಾವಗಳ ಬಗ್ಗೆ ಎಜೆ ಹೇಳಿದ್ದು ಏನು ಗೊತ್ತಾ?

  ಎಜೆ ಎಂದರೆ ಯಾವಾಗಲೂ ಉರ ಉರ ಎನ್ನುವ ಮನುಷ್ಯ. ನಗು ಮುಖವನ್ನು ಅವನಲ್ಲಿ ಕಂಡಿದ್ದೆ ಕಡಿಮೆ. ಇನ್ನು ಪ್ರೀತಿ ಮಾಡುವುದು ಎಲ್ಲಿಂದ ಬರಬೇಕು. ಪ್ರೀತಿ ಇದ್ದರು ಪರ್ಫೆಕ್ಷನಿಸ್ಟ್ ಎಂದು ತೋರಿಸಿಕೊಳ್ಳಲು ಹೋಗಿ ಎಲ್ಲವನ್ನು ಅದುಮಿಟ್ಟುಕೊಂಡಿದ್ದಾನೆ. ಆದರೆ ಮಕ್ಕಳ ವಿವಾಹ ವಾರ್ಷಿಕೋತ್ಸವದಿಂದ ಎಲ್ಲವೂ ಬಟಾಬಯಲಾಗಿದೆ. ಸಂಬಂಧಗಳ ಬೆಲೆ, ಮದುವೆಯ ಸಂತಸ, ಗಂಡ ಹೆಂಡತಿ ಹೇಗಿರಬೇಕು ಹೀಗೆ ಎಲ್ಲವನ್ನು ಎಲ್ಲರ ಮುಂದೆ ವೇದಿಕೆಯಲ್ಲಿ ಹೇಳಿದ್ದಾನೆ. ಎಜೆ ಮಾತುಗಳನ್ನು ಕೇಳಿದ ಪ್ರತಿಯೊಬ್ಬರಿಗೂ ನಮ್ಮ ಜೀವನದಲ್ಲೂ ಇದನ್ನು ಅಳವಡಿಸಿಕೊಳ್ಳಬೇಕು ಎನಿಸಿ, ತಲೆದೂಗಿಸಿದ್ದಾರೆ.

  English summary
  Zee Kannada Serial Hitler Kalyana Written Update On May 13th Episode. Here is the details about why Karthik hated Sathya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion