»   » 'ದೇವಿರಿ'ನಂದಿತಾ ದಾಸ್ ಗೆ ಎರಡನೇ ಮದುವೆ

'ದೇವಿರಿ'ನಂದಿತಾ ದಾಸ್ ಗೆ ಎರಡನೇ ಮದುವೆ

Subscribe to Filmibeat Kannada

ಕವಿತಾ ಲಂಕೇಶ್ ನಿರ್ದೇಶನದ 'ದೇವಿರಿ' ಚಿತ್ರದನಟಿ ನಂದಿತಾ ದಾಸ್ ಗುಟ್ಟಾಗಿ ಎರಡನೇ ಮದುವೆ ಮಾಡಿಕೊಳ್ಳುತ್ತಿರುವ ಸುದ್ದಿ ರಟ್ಟಾಗಿದೆ! ಇಷ್ಟಕ್ಕೂ ನಂದಿತಾ ದಾಸ್ ಮದುವೆಯಾಗ ಬಯಸಿರುವುದು ಮುಂಬೈ ಮೂಲದ ಉದ್ಯಮಿ ಸುಬೋಧ್ ಮಸ್ಕರ ಅವರನ್ನು. ಪಿ.ಲಂಕೇಶ್ ಅವರ 'ಅಕ್ಕ' ಕಾದಂಬರಿ ಆಧಾರಿತವಾಗಿ ತೆರೆಕಂಡ ದೇವಿರಿ ಚಿತ್ರದಲ್ಲಿ ನಂದಿತಾ ಮನೋಜ್ಞ ಅಭಿನಯ ನೀಡಿದ್ದ್ದರು.

ಈಗಾಗಲೇ ನಂದಿತಾ ದಾಸ್ ಗೆ ಮದುವೆಯಾಗಿದ್ದು ವಿಚ್ಛೇದನವನ್ನು ಪಡೆದಿದ್ದಾರೆ. ಮುಂಬೈನ ವೊರ್ಲಿ ಪ್ರಾಂತ್ಯದಲ್ಲಿ ಇವರಿಬ್ಬರೂ ಫ್ಲಾಟ್ ಒಂದನ್ನು ಕೊಳ್ಳಲು ಓಡಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ನಂದಿತಾ ಮತ್ತು ಸುಬೋಧ್ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿಯೂ ಇದೆ.

ತನ್ನ ಬಹುಕಾಲದ ಗೆಳೆಯ ಸೌಮ್ಯ ಸೇನ್ ರನ್ನು ಕೆಲ ವರ್ಷಗಳ ಹಿಂದೆ ನಂದಿತಾ ಮದುವೆಯಾಗಿದ್ದರು. ಕಾರಣಾಂತರಗಳಿಂದ ವಿವಾಹ ವಿಚ್ಛೇದನ ಪಡೆದಿದ್ದರು. ಇದೀಗ ಮದುವೆಯಾಗುತ್ತಿರುವ ಸುಬೋಧ್ ಸಹ ವಿಚ್ಛೇದಿತನಾಗಿದ್ದು ಇಬ್ಬರಿಗೂ ಇದು ಎರಡನೇ ಮದುವೆ. ನಲವತ್ತರ ನಡುವಯಸ್ಸಿನಲ್ಲಿರುವ ಕೃಷ್ಣಸುಂದರಿ ನಂದಿತಾ ದಾಸ್ ಅವರ ಚಿತ್ರಗಳು ಇತ್ತೀಚೆಗೆ ಬೇಡಿಕೆ ಕಳೆದುಕೊಂಡಿರುವುದು ವಿಪರ್ಯಾಸ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada