»   » ಶಾರುಖ್ ರಾ ವನ್ ಹಾಗೂ ಮಣಿರತ್ನಂ ರಾವಣ್

ಶಾರುಖ್ ರಾ ವನ್ ಹಾಗೂ ಮಣಿರತ್ನಂ ರಾವಣ್

Posted By:
Subscribe to Filmibeat Kannada

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಚಿತ್ರ 'ರಾ.ವನ್'. ಈ ಚಿತ್ರ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶಿಸುತ್ತಿರುವ ಚಿತ್ರ 'ರಾವಣ್' ಚಿತ್ರಕ್ಕೆ ಹೋಲಿಕೆ ಇದೆ ಎಂದು ಬಹಳಷ್ಟು ಮಂದಿ ಭಾವಿಸುತ್ತಿದ್ದಾರೆ.

ಈ ಗೊಂದಲವನ್ನು ಪರಿಹರಿಸಲು ಶಾರುಖ್ ಖಾನ್ ಮೊದಲ ಬಾರಿಗೆ ತಮ್ಮ ಚಿತ್ರದ ವಿಶೇಷಗಳನ್ನು ತಿಳಿಸಿದ್ದಾರೆ. ಚಿತ್ರದ ಹೆಸರಿನಲ್ಲಿರುವ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. 'ರಾ.ವನ್' ಎಂಬುದು ಆಂಗ್ಲ ಅಕ್ಷರಮಾಲೆಯೆ ಆರ್. ಎ...ವನ್! ರಾಂಡಮ್ ವರ್ಷನ್ ವನ್ ಎಂಬುದು ಅದರ ಅಂತರಾರ್ಥ ಎಂದು ತಿಳಿಸಿದ್ದಾರೆ.

ಈ ಚಿತ್ರದಲ್ಲಿ ಶಾರುಖ್ ಸೂಪರ್ ಹೀರೋ ಪಾತ್ರದಲ್ಲಿ ಕಾಣಿಸಲಿದ್ದಾರೆ. ಈ ಸೂಪರ್ ಹೀರೋ ಹೆಸರು ಜಿ.ವನ್. ಶೀಘ್ರದಲ್ಲಿ 'ರಾ.ವನ್' ಚಿತ್ರಕ್ಕೆ ಸಂಬಂಧಿಸಿದ ವೆಬ್ ಸೈಟ್ ಬಿಡುಗಡೆ ಮಾಡುವುದಾಗಿ ಶಾರುಖ್ ಖಾನ್ ತಿಳಿಸಿದ್ದಾರೆ. ಈ ಜಾಲತಾಣದಲ್ಲಿ ಚಿತ್ರಕ್ಕೆ ಸಂಬಂಧಿಸಿದ ಪೂರ್ಣ ವಿವರಗಳು ಲಭಿಸಲಿವೆಯಂತೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada