»   » ನಟ ಅರವಿಂದ ಸ್ವಾಮಿ ಸುದೀರ್ಘ ದಾಂಪತ್ಯ ಅಂತ್ಯ

ನಟ ಅರವಿಂದ ಸ್ವಾಮಿ ಸುದೀರ್ಘ ದಾಂಪತ್ಯ ಅಂತ್ಯ

Posted By:
Subscribe to Filmibeat Kannada

ಚಿತ್ರರಸಿಕರ ಹೃದಯಗೆದ್ದ ನಟ ಅರವಿಂದ ಸ್ವಾಮಿ ದಾಂಪತ್ಯ ಜೀವನ ವಿವಾಹ ವಿಚ್ಛೇಧನದಲ್ಲಿ ಅಂತ್ಯ ಕಂಡಿದೆ. ಬುಧವಾರ ಅರವಿಂದ ಸ್ವಾಮಿ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇಧನ ಕೋರಿ ಸಲ್ಲಿಸಿದ್ದ ಅರ್ಜಿ ಪುರಸ್ಕೃತವಾಗಿದೆ . ಖ್ಯಾತ ನಿರ್ದೇಶಕ ಮಣಿರತ್ನಂ ಅವರ ರೋಜಾ, ಬಾಂಬೆ ಚಿತ್ರಗಳಲ್ಲಿ ನಟಿಸುವ ಮೂಲಕ ಅರವಿಂದ ಸ್ವಾಮಿ ಭಾರತೀಯ ಚಿತ್ರರಂಗದ ಗಮನಸೆಳೆದಿದ್ದರು.

ಕಳೆದ ಎರಡು ವರ್ಷಗಳಿಂದ ತಮ್ಮ ಪತ್ನಿ ಗಾಯತ್ರಿ ಅವರಿಂದ ವಿವಾಹ ವಿಚ್ಛೇಧನಕ್ಕಾಗಿ ಅರವಿಂದ ಸ್ವಾಮಿ ಪ್ರಯತ್ನಿಸುತ್ತಿದ್ದರು. ಇಂದು ವಿವಾಹ ವಿಚ್ಛೇಧನ ದೊರೆಯುವ ಮೂಲಕ ಅರವಿಂದ ಸ್ವಾಮಿಯ 16 ವರ್ಷಗಳ ಸುದೀರ್ಘ ದಾಂಪತ್ಯಕ್ಕೆ ತೆರೆಬಿದ್ದಿದೆ. ಗಾಯತ್ರಿ ಮತ್ತು ಅರವಿಂದ್ ವಿವಾಹ ವಿಚ್ಛೇಧನಕ್ಕೆ ಪರಸ್ಪರ ಒಪ್ಪಿಗೆ ನೀಡಿದ ಬಳಿಕ ಚೆನ್ನೈನ ಕೌಟುಂಬಿಕ ನ್ಯಾಯಲಯ ವಿವಾಹ ವಿಚ್ಛೇಧನವನ್ನು ಅಂಗೀಕರಿಸಿದೆ.

ದಾಂಪತ್ಯ ಜೀವನದಲ್ಲಿ ಕಲಹ ಉಂಟಾದ ಕಾರಣ ಅರವಿಂದ ಸ್ವಾಮಿ ವಿವಾಹ ವಿಚ್ಛೇಧನ ಕೋರಿ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಿದ್ದರು.1994ರಲ್ಲಿ ಇವರಿಬ್ಬರ ಮದುವೆಯಾಗಿದ್ದರು. ಅರವಿಂದ ಸ್ವಾಮಿ ಮತ್ತು ಗಾಯತ್ರಿಗೆ ಇಬ್ಬರು ಮಕ್ಕಳು; ಒಂದು ಹೆಣ್ಣು ಮತ್ತು ಒಂದು ಗಂಡು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada