»   » ಯೂಟ್ಯೂಬ್ ನಲ್ಲಿ ಬಿಪಶಾ ಪೂರ್ಣ ಕುಂಭ ದರ್ಶನ!

ಯೂಟ್ಯೂಬ್ ನಲ್ಲಿ ಬಿಪಶಾ ಪೂರ್ಣ ಕುಂಭ ದರ್ಶನ!

Posted By:
Subscribe to Filmibeat Kannada

ಬಾಲಿವುಡ್ ಚಿತ್ರರಂಗದ ಮಿಂಚಿನ ಬಳ್ಳಿ ಬಿಪಶಾ ಬಸು ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ. ವಿವೇಕ್ ಒಬೆರಾಯ್ ಜೊತೆ ಟಾಪ್ ಲೆಸ್ ದೃಶ್ಯದಲ್ಲಿ ಪೂರ್ಣ ಕುಂಭ ದರ್ಶನ ನೀಡಿದ್ದಾರೆ. ಆಕೆಯ ಅಭಿನಯದ ಜಾಹೀರಾತು ತುಣುಕು ಯೂಟ್ಯೂಬ್ ನಲ್ಲಿ ಲೀಕಾಗಿ ಪಡ್ಡೆಗಳ ಪಾಲಿಗೆ ಪಂಚಾಮೃತವಾಗಿದೆ.

ಆರಂಭದ ದಿನಗಳಲ್ಲಿ ಬಿಪಶಾ ಮಾಡುತ್ತಿದ್ದ ಮಾಡೆಲಿಂಗ್ ರೀತಿಯಲ್ಲಿ ಈ ಜಾಹೀರಾತು ಬಿತ್ತರವಾಗಿದೆ. ಹೊಳೆಯುವ ಬೆಳಕಿನಲ್ಲಿ ಬಿಪಶಾ ಅರೆಬೆತ್ತಲಾಗಿದ್ದಾರೆ. ಈ ವಿಷಯವನ್ನು ಸ್ವತಃ ಬಿಪಶಾ ಬಸು ಅವರ ಮ್ಯಾನೇಜರ್ ಖಚಿತಪಡಿಸಿದ್ದು, 1999ರಲ್ಲಿ ಫೋರ್ಡ್ ಮಾಡೆಲಿಂಗ್ ಏಜೆನ್ಸಿಗಾಗಿ ನ್ಯೂಯಾರ್ಕ್ ನಲ್ಲಿ ತೆಗೆದ ದೃಶ್ಯಗಳವು ಎಂದಿದ್ದಾರೆ.

ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ತೆಗೆದ ಜಾಹೀರಾತು ಅದು. ಇದೀಗ ಯಾಕೆ ಅದನ್ನು ಯೂಟ್ಯೂಬ್ ಗೆ ಹಾಕಿದ್ದಾರೋ ಗೊತ್ತಿಲ್ಲ ಎಂದು ಬಿಪಶಾ ಮ್ಯಾನೇಜರ್ ಪ್ರತಿಕ್ರಿಯಿಸಿದ್ದಾರೆ. ಆರಂಭದ ದಿನಗಳಲ್ಲಿ ಆಗಷ್ಟೆ ನೆಲೆಕಂಡುಕೊಳ್ಳಲು ತಿಣುಕುತ್ತಿದ್ದ ವಿವೇಕ್ ಒಬೆರಾಯ್ ಸಹ ಜಾಹೀರಾತಿನಲ್ಲಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada