»   » ಅಮಿತಾಬ್ ಗೆ ಅಮೀರ್ ಕಳಿಸಿದ ಟ್ವೀಟ್ ಸಂದೇಶ

ಅಮಿತಾಬ್ ಗೆ ಅಮೀರ್ ಕಳಿಸಿದ ಟ್ವೀಟ್ ಸಂದೇಶ

Posted By:
Subscribe to Filmibeat Kannada

ಬಾಲಿವುಡ್ ನ ಪ್ರಬುದ್ಧನಟ ಅಮೀರ್ ಖಾನ್ ಕೊನೆಗೂ ಮೈಕ್ರೋ ಬ್ಲಾಗಿಂಗ್ ಪ್ರಪಂಚಕ್ಕೆ ಕಾಲಿರಿಸಿದ್ದಾರೆ. ಸಿನಿಮಾ ಮಾಡಿದ ಮೇಲೆ ಪ್ರಚಾರಕ್ಕೆ ಬರುವ ಅಮೀರ್, ಚಿತ್ರ ಯಶಸ್ವಿಯಾದರೆ ಸಂತೋಷ ಕೂಟಕ್ಕೆ ತಪ್ಪಿಸಿಕೊಳ್ಳುವುದು ಸಹಜ. ಅಲ್ಲದೆ, ಫಿಲ್ಮಂಫೇರ್ ಸೇರಿದಂತೆ ಯಾವುದೇ ಪ್ರಶಸ್ತಿ ಸಮಾರಂಭಗಳಲ್ಲಿ ಅಮೀರ್ ಕಾಣಿಸಿಕೊಂಡಿದ್ದಿಲ್ಲ. ಈ ಬಗ್ಗೆ ಬಾಲಿವುಡ್ ಮಂದಿ ಆಡಿಕೊಂಡು ನಕ್ಕರು ಅಮೀರ್ ತನ್ನ ನಿಲುವು ಬದಲಿಸಿಲ್ಲ.

ವಿಡಿಯೋ: ಟ್ವಿಟ್ಟರ್ ಗೆ ಎಂಟ್ರಿ ಕೊಟ್ಟ ಅಮೀರ್ ಖಾನ್

ಆದರೆ, ಈಗ ಇದ್ದಕ್ಕಿದ್ದ ಹಾಗೆ ಬ್ಲಾಗಿಂಗ್ ನಿಂದ ಮೈಕ್ರೋ ಬ್ಲಾಗಿಂಗ್ ಗೆ ಇಳಿದಿರುವ ಅಮೀರ್ ಸಹನಟರು, ಹಿರಿ ನಟರೊಡನೆ ಬೆರೆಯತೊಡಗಿದ್ದಾರೆ ಎಂದು ತಿಳಿದಿದ್ದರೆ ಅದು ತಪ್ಪು, ಅಮಿತಾಬ್ ಹೊರತು ಪಡಿಸಿ ಇನ್ನೊಬ್ಬ ನಟ, ನಟಿಯನ್ನು ಅಮೀರ್ ಇದುವರೆವಿಗೂ ಹಿಂಬಾಲಿಸುತ್ತಿಲ್ಲ.

ಜು.1ರಂದು ಅಮಿತಾಬ್ ಗೆ ಶಾಯರಿಯ ಮೂಲಕ ಟ್ವೀಟ್ ಮಾಡಿದ್ದು ಹೀಗೆ "Bhala gardish falak ki chain deti hai kise Insha, ganimat hai ke hum surat yahan do-chaar baithey hain. Esp for you sir. Love." ಈ ಮುಂಚೆ ತಮ್ಮ ಬ್ಲಾಗ್ ತಾಣದಲ್ಲಿ ಅಭಿಮಾನಿಗಳೊಡನೆ ಮುಕ್ತವಾಗಿ ಚರ್ಚಿಸುತ್ತಿದ್ದ ಅಮೀರ್, ಟ್ವಿಟ್ಟರ್ ಗೆ ಬಂದಿರುವುದು ಅಭಿಮಾನಿಗಳಿಗೆ ಸಹಜವಾಗೇ ಖುಷಿಕೊಟ್ಟಿದೆ.

ಅಮೀರ್ ಟ್ವೀಟರ್ ಲೋಕಕ್ಕೆ ಎಂಟ್ರಿ ಕೊಟ್ಟ ಗಂಟೆಯೊಳಗೆ 46,000 ಹಿಂಬಾಲಕರನ್ನು ಪಡೆದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ. ಈಗ ಈ ಸಂಖ್ಯೆ 75,390 ದಾಟಿದೆ. ಕಾರಣ ಇಷ್ಟೇ ಖಾನ್ ತ್ರಯರಲ್ಲಿ ಸಲ್ಮಾನ್ ಹಾಗೂ ಶಾರುಖ್ ಗೆ ಇರುವ ಷ್ಟು ಕ್ರೇಜ್ ಅಮೀರ್ ಗೆ ಇಲ್ಲ. ಅಮೀರ್ ಅನ್ನು ಜನ ಈಗಲೂ ಗುರುತಿಸುವುದು ನಟನೆಯಿಂದಷ್ಟೇ. ಅಂದ ಹಾಗೆ , ಅಮೀರ್ ಟ್ವೀಟರ್ ಸೇರಲು ಅಮಿತಾಬ್ ಕಾರಣವಂತೆ.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X