»   » ಲವ್ ಮಾಡ್ತಿದ್ದೀನಿ ಅಂಥ ಕಡೆಗೂ ಒಪ್ಕೊಂಡ್ಲು ಕತ್ರಿನಾ

ಲವ್ ಮಾಡ್ತಿದ್ದೀನಿ ಅಂಥ ಕಡೆಗೂ ಒಪ್ಕೊಂಡ್ಲು ಕತ್ರಿನಾ

Posted By:
Subscribe to Filmibeat Kannada

ಬಾಲಿವುಡ್ ಚಿತ್ರರಸಿಕರ ಹೃದಯ ಕದ್ದ ಚೋರಿ ಕತ್ರಿನಾ ಕೈಫ್ ಕಡೆಗೂ ಪರಮ ಸತ್ಯವೊಂದನ್ನು ಒಪ್ಪಿಕೊಂಡಿದ್ದಾರೆ. ಅಂದ್ರೆ ಲವ್ ಮಾಡುತ್ತ್ತಿರುವ ವಿಚಾರನ್ನು ಆಕೆ ಬಹಿರಂಗಪಡಿಸಿದ್ದಾರೆ. ಆದರೆ ಕತ್ರಿನಾ ಕೈಫ್ ಲವ್ ಮಾಡುತ್ತಿರುವುದು ಯಾವುದೇ ಹೀರೋನನ್ನು ಅಲ್ಲ ಆಕೆ ಆನ್ ಲೈನ್ ಷಾಪಿಂಗ್ ಅನ್ನು ಪ್ರೀತಿಸುತ್ತಿದ್ದಾರಂತೆ.

ಆನ್ ಲೈನ್ ಷಾಪಿಂಗ್ ಮೂಲಕ ಮುಂಬೈನಲ್ಲಿ ನನಗೆ ಬೇಕಾದ್ದನ್ನು ಕೊಂಡುಕೊಳ್ಳುತ್ತೇನೆ. ಹೆಚ್ಚಾಗಿ ಬಟ್ಟೆಬರೆಗಳನ್ನೇ ಕೊಂಡುಕೊಳ್ಳುತ್ತಿದ್ದೇನೆ ಎನ್ನುತ್ತಾರೆ ಕತ್ರಿನಾ ಕೈಫ್. ಇದುವರೆಗೂ ನಾನು ಹೆಚ್ಚಾಗಿ ವಿದೇಶದಲ್ಲಿ ಷಾಪಿಂಗ್ ಮಾಡುತ್ತಿದ್ದೆ. ಮನೆಯಿಂದ ಹೊರಗೆ ಷಾಪ್ ಮಾಡಬೇಕಾದರೆ ನಾನು ಒಂಚೂರು ಗಾಬರಿಗೆ ಒಳಗಾಗುತ್ತೇನೆ. ಏನು ತಗೋಬೇಕು ಎಂಬುದು ಮರೆತೇ ಹೋಗುತ್ತದೆ ಎಂದಿದ್ದಾರೆ ಕತ್ರಿನಾ.

ಇತ್ತೀಚೆಗಷ್ಟೆ ಕತ್ರಿನಾ ಮುಂಬೈನ ಹೊಸ ಮನೆಗೆ ಗೃಹ ಪ್ರವೇಶ ಮಾಡಿದ್ದಾರೆ. ಹೊಸ ಮನೆಗೆ ಬೇಕಾದ ಪೀಠೋಪಕರಣಗಳನ್ನು ಖರೀದಿಸುತ್ತಿದ್ದಾರೆ. ಏನೇ ಖರೀದಿಸಬೇಕಾದರೂ ಅಮ್ಮ ಮತ್ತು ತಂಗಿ ಸಹಾಯಕ್ಕೆ ಬರುತ್ತಾರೆ. ನಮ್ಮ ಮನೆ ನೋಡಿದರೆ ಎಲ್ಲಾ ಖಾಲಿ ಖಾಲಿಯಾಗಿ ಕಾಣಿಸುತ್ತದೆ. ಹಾಗಾಗಿ ಈಗ ಹೆಚ್ಚಿನ ವಸ್ತುಗಳನ್ನು ಕೊಂಡು ಕೊಳ್ಳಲು ತೀರ್ಮಾನಿಸಿದ್ದೀನಿ ಎನ್ನುತ್ತಾರೆ ಕೈಫ್.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada