For Quick Alerts
  ALLOW NOTIFICATIONS  
  For Daily Alerts

  ಚಡ್ಡಿ ಧರಿಸದೆ ಕೆಟ್ಟ ಯಾನಾ ವಿರುದ್ಧ ಕೇಸ್ ದಾಖಲು

  By Prasad
  |

  ಕನ್ನಡ ಚಿತ್ರ 'ಜೋಗಿ'ಯಲ್ಲಿ 'ಬಿನ್ ಲಾಡೆನ್ನ ನನ್ ಮಾವ, ಬಿಲ್ ಕ್ಲಿಂಟನ್ನ ನನ್ ಭಾವ' ಎಂಬ ಹಾಡಿಗೆ ಮಾದಕವಾಗಿ ನರ್ತಿಸಿ ಕನ್ನಡದ ಪಡ್ಡೆಗಳಿಗೆ ಹುಚ್ಚುಹಿಡಿಸಿದ್ದ ಬಾಲಿವುಡ್ ಬೆಡಗಿ ಯಾನಾ ಗುಪ್ತಾಳನ್ನು ವಿವಾದ ಬೇತಾಳದಂತೆ ಬೆನ್ನತ್ತಿದೆ. ಚಾರಿಟಿ ಕಾರ್ಯಕ್ರಮವೊಂದರಲ್ಲಿ ಒಳಚಡ್ಡಿಯನ್ನು ಧರಿಸದೆ ಛಾಯಾಗ್ರಾಹಕರಿಗೆ ಅಸಹ್ಯಕರವಾಗಿ ಪೋಸ್ ನೀಡಿ ಮುಜುಗರಕ್ಕೀಡು ಮಾಡಿದ ಘಟನೆ ಆಕೆಯನ್ನು ಕೋರ್ಟ್ ಮೆಟ್ಟಿಲೇರುವಂತೆ ಮಾಡಿದೆ.

  'ಅಯ್ಯೋ ಗಡಿಬಿಡಿಯಲ್ಲಿ ಅಮೂಲ್ಯವಾದ ಬಟ್ಟೆಯನ್ನೇ ಮರೆತುಬಿಟ್ಟಿದ್ದರಿಂದ ಹೀಗಾಯಿತು' ಎಂಬ ಬೇಜವಾಬ್ದಾರಿಯುತವಾದ ಹೇಳಿಕೆ ನೀಡಿದ್ದ ಜೆಕೊಸ್ಲೋವಕಿಯಾದ ಚೆಲುವೆ ಯಾನಾ ಗುಪ್ತಾ ಅಕಾ ಯಾನಾ ಸಿಂಕೋವಾ, ಆಕೆಯ ಗುಪ್ತಾಂಗವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದ ಛಾಯಾಚಿತ್ರಕಾರ ಮತ್ತು ಕಾರ್ಯಕ್ರಮದ ಆಯೋಜಕ ಸುಶೀಲಾ ನಿರಾಲಿ ವಿರುದ್ಧ ರಿಜ್ವಾನ್ ಅಹ್ಮದ್ ಎಂಬ ಸಮಾಜ ಕಾರ್ಯಕರ್ತ ಕೇಸು ಜಡಿದಿದ್ದಾರೆ.

  "ಯಾನಾ ಗುಪ್ತಾರಂಥ ಪ್ರಸಿದ್ಧ ವ್ಯಕ್ತಿ ಜನಪ್ರಿಯತೆಗಾಗಿ ಇಷ್ಟೊಂದೂ ಕೀಳುಮಟ್ಟಕ್ಕೆ ಇಳಿದಿದ್ದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಚಾರಿಟಿ ಕಾರ್ಯಕ್ರಮ ಆಯೋಜಿಸಿದ್ದವರಿಗೆ ಮತ್ತು ಫೋಟೋಗ್ರಾಫರ್ ಗಳಿಗಾದರೂ ಜವಾಬ್ದಾರಿ ಇರಬೇಕಾಗಿತ್ತು. ಸಾಮಾಜಿಕ ವೆಬ್ ತಾಣದಲ್ಲಿ 'ತಾನೀಗ ಒಳಚಡ್ಡಿ ಇಲ್ಲದ ಹುಡುಗಿ'ಯಾಗಿ ಪ್ರಸಿದ್ಧಳು ಎಂಬಂತೆ ಹೇಳಿಕೆ ಯಾನಾ ನೀಡಿದ್ದು ಇನ್ನೂ ಅಸಹ್ಯಕರ. ಹೀಗಾಗಿ ಮೂವರ ವಿರುದ್ಧವೂ ಮೊಕದ್ದಮೆ ಹಾಕಿದ್ದೇನೆ" ಎಂದು ರಿಜ್ವಾನ್ ಹೇಳಿದ್ದಾರೆ.

  ಸಾರ್ವಜನಿಕವಾಗಿ ಅಶ್ಲೀಲವಾಗಿ ನಡೆದುಕೊಂಡಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 292, 293 ಮತ್ತು 294 ಅಡಿಯಲ್ಲಿ ಲಖನೌ ದಂಡಾಧಿಕಾರಿಯ ಮುಂದೆ ಪ್ರಕರಣ ದಾಖಲಿಸಲಾಗಿದೆ. ಡಿಸೆಂಬರ್ 6ರಂದು ನ್ಯಾಯಾಲಯಕ್ಕೆ ಹಾಜರಾಗಬೇಕಾಗಿ ಮೂವರಿಗೂ ಸಮನ್ಸ್ ನೀಡಲಾಗಿದೆ.

  ಇತ್ತೀಚಿನ ದಿನಗಳಲ್ಲಿ ಚಿತ್ರನಟಿಯರು ಗಮನ ಸೆಳೆಯಲು ಕೆಟ್ಟದಾಗಿ ಬಟ್ಟೆ ಧರಿಸುವುದು ಸಾಮಾನ್ಯವಾಗಿದೆ. ಆದರೆ ಉದ್ದೇಶಪೂರ್ವಕವಾಗಿ ಪ್ರಚಾರ ಪಡೆಯುವುದಿಕ್ಕಾಗಿಯೇ ಯಾನಾ ಮತ್ತು ಛಾಯಾಚಿತ್ರಕಾರ ಈ ರೀತಿ ಮಾಡಿದ್ದಾರೆ ಎಂದು ರಿಜ್ವಾನ್ ಆರೋಪಿಸಿದ್ದಾರೆ. ಉದ್ದೇಶಪೂರ್ವಕವಾಗಿಯೇ ಮಾಡಿರದಿದ್ದರೆ ಛಾಯಾಗ್ರಾಹಕನ ವಿರುದ್ಧ ಯಾನಾ ದೂರೇಕೆ ದಾಖಲಿಸಲಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

  ಈ ಪ್ರಕರಣ ನಡೆದ ನಂತರ ಯಾನಾ ಮಾಧ್ಯಮದವರೆದುರಿಗೆ ನಡೆದುಕೊಂಡಿದ್ದು ಇನ್ನೂ ನಾಚಿಕೆಗೇಡಿನದ್ದು. ಜಾಹೀರಾತುದಾರರು ನನ್ನನ್ನು ಒಳಚಡ್ಡಿ ಇಲ್ಲದ ಜಾಹೀರಾತುಗಳಿಗೆ ಕರೆದರೆ ಆಶ್ಚರ್ಯವಿಲ್ಲ ಎಂದು ನಗೆಯಾಡಿದ್ದರು. ಈಗ ಅದಕ್ಕೆಲ್ಲ ಬೆರೆ ತೆರಬೇಕಾದ ಸಮಯ ಬಂದಿದೆ.

  English summary
  Model turnded bollywood actress Yana Gupta has been sued for her pantyless stunt by a social activist. Photos of Yana Gupta without underwear had created controversy when they appeared in media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X