»   »  ಯುವ ಅಭಿಮಾನಿಗಳಿಗೆ ಅಮೀರ್ ಖಾನ್ ಉಪದೇಶ

ಯುವ ಅಭಿಮಾನಿಗಳಿಗೆ ಅಮೀರ್ ಖಾನ್ ಉಪದೇಶ

Posted By:
Subscribe to Filmibeat Kannada

ಯುವಜನಾಂಗದ ಹಾಟ್ ಫೇವರೆಟ್ ಆಗಿರುವ ಅಮೀರ್ ಖಾನ್ ಯುಜನಾಂಗಕ್ಕೆ ಹಿತೋಪದೇಶವೊಂದನ್ನು ನೀಡಿದ್ದಾರೆ. ಫೇಸ್ ಬುಕ್, ಟ್ವಿಟ್ಟರ್ ಮುಂತಾದ ಸಾಮಾಜಿಕ ತಾಣಗಳ ಚಟುವಟಿಕೆಗಳನ್ನು ಬಹಳಷ್ಟು ಕಡಿತಗೊಳಿಸಿ ಸಮಯದ ಸದುಪಯೋಗ ಮಾಡಿಕೊಳ್ಳಿ" ಎಂದಿದ್ದಾರೆ. ಸಾಮಾಜಿಕ ತಾಣಗಳ ಅತಿಯಾದ ಬಳಕೆ ಸರಿಯಲ್ಲ ಎಂಬ ಕಿವಿಮಾತನ್ನೂ ಹೇಳಿದ್ದಾರೆ.

ಯುವಜನಾಂಗ ಎಲ್ಲಾ ಮಾಹಿತಿಯನ್ನು ಫೇಸ್ ಬುಕ್ ಮೂಲಕ ಪಡೆಯುವದಾಗಲೀ ಕೊಡುವುದಾಗಲೀ ಮಾಡುತ್ತಾ ಸಮಯವನ್ನು ವ್ಯರ್ಥ ಮಾಡುತ್ತಿದೆ. ಇದೇ ವೇಳೆಯನ್ನು ಸದುಪಯೋಗ ಪಡಿಸಿಕೊಂಡು ಯಾವುದಾದರೂ ಲಾಭದಾಯಕ ಕೆಲಸದಲ್ಲಿ ತೊಡಗಿಕೊಳ್ಳಿ" ಎಂದಿದ್ದಾರೆ ಬಾಲಿವುಡ್ ನ ಮಿ. ಪರ್ಫೆಕ್ಟ್. ಅಮೀರ್ ಖಾನ್ ಮಾತು ಸಾಮಾಜಿಕ ತಾಣಗಳನ್ನೇ ಗುರಿಯಾಗಿಸಿಕೊಂಡಿದೆ.

ಬಾಲಿವುಡ್ ನಲ್ಲಿ ಬಹಳಷ್ಟು ಸಾಧನೆ ಮಾಡಿ ತನ್ನದೇ ಆದ ಸ್ಥಾನ ಗಳಿಸಿಕೊಂಡಿರುವ ಅಮೀರ್ ಮಾತಿಗೆ ಎಲ್ಲರೂ ಬೆಲೆ ಕೊಡುತ್ತಾರೆ. ಇನ್ನು ಅವರ ಅಭಿಮಾನಿಗಳು ಅನುಸರಿಸದೇ ಇರುತ್ತಾರೆಯೇ? ಇನ್ನಾದರೂ ಅಮೀರ್ ಯುವ ಅಭಿಮಾನಿಗಳು ಸಾಮಾಜಿಕ ತಾಣಗಳ ಚಟುವಟಿಕೆಯಲ್ಲಿ ಸಮಯವನ್ನು ವ್ಯರ್ಥ ಮಾಡಲಿಕ್ಕಿಲ್ಲವೆಂದು ಆಶಿಸೋಣವೇ! (ಏಜೆನ್ಸೀಸ್)

English summary
Aamir Khan advices youngsters not to waste time on social networking sites like Facebook and Twitter.
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X