»   » ಐಶ್ವರ್ಯ ರೈಗೆ ಶೀಘ್ರದಲ್ಲೇ ಸಂತಾನ ಭಾಗ್ಯ!

ಐಶ್ವರ್ಯ ರೈಗೆ ಶೀಘ್ರದಲ್ಲೇ ಸಂತಾನ ಭಾಗ್ಯ!

Subscribe to Filmibeat Kannada

ಬಾಲಿವುಡ್ ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಗರ್ಭವತಿಯಾಗಿದ್ದಾರೆ ಎಂಬ ಸುದ್ದಿ ಬಾಲಿವುಡ್ ವಲಯದಲ್ಲಿ ಮಿಂಚಿನಂತೆ ಹರಿದಾಡುತ್ತಿದೆ. ಈ ಹಿಂದೆಯೂ ಈ ರೀತಿಯ ಗಮ್ಮತ್ತಾದ ಸುದ್ದಿ ಚಾಲ್ತಿಯಲ್ಲಿತ್ತು. ''ಗರ್ಭಿಣಿಯಾದರೆ ಇಡೀ ವಿಶ್ವಕ್ಕೆ ಗೊತ್ತಾಗುತ್ತೆ ಬಿಡಿ'' ಎಂದು ಖುದ್ದು ಐಶ್ವರ್ಯ ರೈ ಹೇಳುವ ಮೂಲಕ ಸುದ್ದಿಗೆ ಕಡಿವಾಣ ಬಿದ್ದಿತ್ತು.

ದಿನದಿಂದ ದಿನಕ್ಕೆ ಐಶ್ವರ್ಯ ರೈ ತೂಕ ಹೆಚ್ಚುತ್ತಿದ್ದು ಇದೀಗ ಆಕೆ ಗರ್ಭವತಿಯಾಗಿರುವುದು ಖಚಿತವಾಗಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ. ಈ ಸುದ್ದಿಗೆ ಪೂರಕ ಎಂಬಂತೆ ಐಶೂ ಯಾವುದೇ ಹೊಸ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಗುಜಾರೀಷ್, ರಾವಣ ಚಿತ್ರಗಳನ್ನು ತಾರಾತುರಿಯಲ್ಲಿ ಮುಗಿಸಲು ಐಶೂ ಮುಂದಾಗಿದ್ದಾರೆ.

ಬಹುನಿರೀಕ್ಷಿತ 'ರೋಬೋಟ್' ಚಿತ್ರವನ್ನು ಆದಷ್ಟು ಬೇಗನೆ ಮುಗಿಸುವ ಸನ್ನಾಹದಲ್ಲಿ ಐಶ್ವರ್ಯ ರೈ ಇದ್ದಾರೆ. ಅಭಿಷೇಕ್ ಬಚ್ಚನ್ ಜತೆ ನಟಿಸಬೇಕಿದ್ದ ಚಿತ್ರವನ್ನು ಸದ್ಯಕ್ಕೆ ಐಶೂ ಪಕ್ಕಕ್ಕಿಟ್ಟಿದ್ದಾರೆ. ಇದಿಷ್ಟೇ ಅಲ್ಲದೆ ''ಶೀಘ್ರದಲ್ಲೇ ನಾವೊಂದು ಸಿಹಿ ಸುದ್ದಿ ಕೊಡಲಿದ್ದೇವೆ'' ಎಂದು ಐಶ್ವರ್ಯ ಹೇಳಿ ಬಾಲಿವುಡ್ ನಲ್ಲಿ ಮತ್ತಷ್ಟು ಕುತೂಹಲ ಕೆರಳಿಸಿದ್ದಾರೆ.

ಐಶ್ವರ್ಯ ರೈಗೆ ಗಂಡು ಅಥವಾ ಹೆಣ್ಣು ಯಾವ ಮಗುವಾದರೂ ಪರ್ವಾಗಿಲ್ಲವಂತೆ. ದೇವರು ಯಾವ ಮಗುವನ್ನು ಕರುಣಿಸುತ್ತಾನೋ ಅದೇ ಐಶ್ ದಂಪನಿಗಳ ಪಾಲಿನ ಭಾಗ್ಯವಂತೆ. ಸದ್ಯಕ್ಕೆ ಐಶ್ವರ್ಯ ರೈ ಮಾವ ಅಮಿತಾಬ್ ಬಚ್ಚನ್ ಅವರ 'ಪಾ' ಚಿತ್ರದ ಚಟುವಟಿಕೆಗಳಲ್ಲಿ ಬ್ಯುಸಿಯಾಗಿದ್ದಾರೆ. ಒಟ್ಟಿನಲ್ಲಿ ಅಮಿತಾಬ್ ಬಚ್ಚನ್ ತಾತನಾಗುವುದು ಐಶ್ವರ್ಯ ರೈ ತಾಯಿಯಾಗುವುದು, ಅಭಿಷೇಕ್ ಅಪ್ಪನಾಗುವುದು ಖಚಿತವಾಗಿದೆ ಎನ್ನುತ್ತವೆ ಬಾಲಿವುಡ್ ಮೂಲಗಳು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada