For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಜೊತೆ ವಿವೇಕ್; ಹುಲಿಗಳ ಕಾದಾಟ ಶುರು

  |

  ಬಾಲಿವುಡ್ ಮೆಗಾಸ್ಟಾರ್ ಸಲ್ಮಾನ್ ಖಾನ್ ಮತ್ತು ವಿವೇಕ್ ಒಬೆರಾಯ್ ಒಟ್ಟಾಗಿ ನಟಿಸುತ್ತಿದ್ದಾರೆ. ಚಿತ್ರದ ಹೆಸರೇ 'ಶೇರ್ ವಾರ್ಸ್'. ಈ ಇಬ್ಬರು ಬಾಲಿವುಡ್ ಹುಲಿಗಳು, ಹುಲಿಗಳ ಹಾಗೆ ಸದ್ಯದಲ್ಲೇ ಕಾದಾಡಲಿರುವುದು ಖಾತ್ರಿಯಾಗಿದೆ. ಶೇರ್ ವಾರ್ಸ ಎಂದು ಹೆಸರಿಟ್ಟ ಮೇಲೆ ಕಾದಾಟ ಇರದಿರುತ್ತದೆಯೇ?

  ಸದ್ಯಕ್ಕೆ ಸಲ್ಮಾನ್ ಖಾನ್, ಯಸ್ ರಾಜ್ ಫಿಲಂಸ್ ನ ಏಕ್ ಥಾ ಟೈಗರ್ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಸೋಹಮ್ ಷಾ ನಿರ್ದೇಶನದಲ್ಲಿ ಮೂಡಿಬರಲಿರುವ 'ಶೇರ್ ವಾರ್ಸ್' ಚಿತ್ರಕ್ಕೆ ಸಲ್ಮಾನ್ ಖಾನ್ ಜೊತೆ ವಿವೇಕ್ ಒಬೆರಾಯ್ ಅವರನ್ನೂ ಸೇರಿಸಿಕೊಳ್ಳಲು ಸೋಹೈಲ್ ಖಾನ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ ವಿವೇಕ್ ಇನ್ನೂ 'ಓಕೆ' ಅಂದಿಲ್ಲ.

  ವಿವೇಕ್ ಒಬೆರಾಯ್ ಕೈಯಲ್ಲಿ ಚಿತ್ರಗಳ ಹಾರವೇ ಇದೆ. ಕ್ರಿಶ್ 3, ಕಿಸ್ ಮತ್ ಲವ್ ಪೈಸಾ ದಿಲ್ಲಿ, ಜಿಲ್ಲಾ ಗಾಜಿಯಾಬಾದ್, ಜಯಂತ್ ಭಾಯಿ ಮತ್ತು ಮಸ್ತಿ- 2 ಇವಿಷ್ಟು ಚಿತ್ರಗಳು ಒಬೆರಾಯ್ ಜೇಬಲ್ಲಿರುವಾಗ ಅವರಿಗೇನು ಅರ್ಜೆಂಟ್? ಯೋಚಿಸಿ ನಿಧಾನಿಸಿ ಉತ್ತರಿಸಲಿದ್ದಾರೆ ಹೆಸರಿಗೆ ಸರಿಯಾಗಿ ವಿವೇಕ್. ಹೀಗಾಗಿ ನೀವೂ ಸ್ವಲ್ಪ ದಿನ ಕಾಯಲು ಸಿದ್ಧರಾಗಿ. (ಏಜೆನ್ಸೀಸ್)

  English summary
  While Salman is shooting for Yash Raj Films Ek Tha Tiger and will also work on Sher Khan, Vivek Oberoi has apparently signed on a film called Sher.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X