For Quick Alerts
  ALLOW NOTIFICATIONS  
  For Daily Alerts

  ಅಮೀರ್ 'ತ್ರಿ ಇಡಿಯಟ್ಸ್'ಗೆ ಲಕ್ಷ್ಮಿ ಕಟಾಕ್ಷ

  By Staff
  |

  ಬಾಲಿವುಡ್ ಚಿತ್ರೋದ್ಯಮಕ್ಕೆ ಲಕ್ಷ್ಮಿಯ ಕೃಪಾಕಟಾಕ್ಷ ದೊರೆತಿದೆ. ಕಂಕಣ ಕೈಯ ತಿರುವುತ ಲಕ್ಷ್ಮಿ ಬಾಲಿವುಡ್ ಅಂಗಳಕ್ಕೆ ಅಡಿಯಿಟ್ಟಿದ್ದಾಳೆ. ಅಮೀರ್ ಖಾನ್ ನಟನೆಯ 'ತ್ರಿ ಇಡಿಯಟ್ಸ್' ಚಿತ್ರ ಬಾಕ್ಸಾಫೀಸಲ್ಲಿ ಕನಕ ವೃಷ್ಟಿ ಕರೆಯುತ್ತಿದೆ. ಚಿತ್ರ ಬಿಡುಗಡೆಯಾದ 10 ದಿನಗಳಲ್ಲೇ 240 ಕೋಟಿ ರು.ಗಳನ್ನು ತ್ರಿ ಇಡಿಯಟ್ಸ್ ಚಿತ್ರ ಬಾಚಿಕೊಂಡಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 'ತ್ರಿ ಇಡಿಯಟ್ಸ್' ಗೆಲುವಿನ ನಗೆ ಬೀರುತ್ತಿದೆ.

  ತ್ರಿ ಇಡಿಯಟ್ಸ್ ಚಿತ್ರ ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. 'ಚಿತ್ರಮಂದಿರ ತುಂಬಿದೆ' ಎಂಬ ಫಲಕಗಳು ಚಿತ್ರಮಂದಿರಗಳ ಮುಂದೆ ನೇತಾಡುತ್ತಿರುವುದೇ ಇದಕ್ಕೆ ನಿದರ್ಶನ. ಈ ಹಿಂದೆ ಬಾಲಿವುಡ್ ನಲ್ಲಿ ಬಿಡುಗಡೆಯಾದ ಭಾರಿ ಬಜೆಟ್ ಚಿತ್ರಗಳನ್ನು 'ತ್ರಿ ಇಡಿಯಟ್ಸ್ ' ಹಿಂದಿಕ್ಕಿ ಮುನ್ನುಗ್ಗಿದೆ.

  ಈ ಹಿಂದೆ ಅಮೀರ್ ಖಾನ್ ಅಭಿನಯದ 'ಘಜಿನಿ' ಚಿತ್ರ 225 ಕೋಟಿ ರು.ಗಳನ್ನು, ಸನ್ನಿ ಡಿಯೋಲ್ ಅಭಿನಯದ 'ಗದರ್' ಚಿತ್ರ ರು.175 ಕೋಟಿಗಳನ್ನು, ಹೃತಿಕ್ ರೋಷನ್, ಐಶ್ವರ್ಯ ರೈ ತಾರಾಗಣದ 'ಧೂಮ್ 2' ಚಿತ್ರ 145 ಕೋಟಿ ರು.ಗಳನ್ನು ಬಾಚಿಕೊಂಡಿದ್ದವು. ಇದೀಗ ತ್ರಿ ಇಡಿಯಟ್ಸ್ ಚಿತ್ರ ಈ ಎಲ್ಲಾ ದಾಖಲೆಗಳನ್ನು ಅಳಿಸಿಹಾಕಿದೆ.

  'ತ್ರಿ ಇಡಿಯಟ್ಸ್' ಚಿತ್ರವನ್ನು ರು. 45 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ್ದರು. ಬಾಕ್ಸಾಫೀಸರಲ್ಲಿ ದುಡ್ಡು ಬಾಚುತ್ತಿರುವ 'ತ್ರಿ ಇಡಿಯಟ್ಸ್ ' ಚಿತ್ರದನಿರ್ಮಾಪಕ ವಿಧು ವಿನೋದ್ ಚೋಪ್ರಾ ಅವರಿಗೆ ಐದು ಪಟ್ಟು ಲಾಭ ತಂದಿದೆ. ಚಿತ್ರದ ವಿತರಣೆ ಹಕ್ಕುಗಳನ್ನು ರು.80 ಕೋಟಿಗೆ ಅನಿಲ್ ಅಂಬಾನಿ ಒಡೆತನದ ಬಿಗ್ ಫಿಕ್ಚರ್ಸ್ ಪಡೆದುಕೊಂಡಿದೆ ಎನ್ನುತ್ತವೆ ಬಾಲಿವುಡ್ ಮೂಲಗಳು.

  ಮೂವರು ಗೆಳೆಯರು ಅವರ ಕಾಲೇಜು, ಕೆಲಸಗಳ ಸುತ್ತ ಸುತ್ತುವುದೇ 'ತ್ರಿ ಇಡಿಯಟ್ಸ್" ಚಿತ್ರದಕತೆ. ವಿದೇಶಗಳಲ್ಲೂ ತ್ರಿ ಇಡಿಯಟ್ಸ್ ಚಿತ್ರ ಕನಕ ವೃಷ್ಟಿ ಗರೆಯುತ್ತಿದೆ. ವಿದೇಶಗಳಲ್ಲಿ ಈಗಾಗಲೇ ರು.45 ಕೋಟಿಗಳನ್ನು ಬಾಚಿ 'ಘಜಿನಿ' ಚಿತ್ರದ ವಿದೇಶಿ ಗಳಿಕೆಯನ್ನು ಹಿಂದಿಕ್ಕಿದೆ. ವಿದೇಶಗಳಲ್ಲಿ 'ಘಜಿನಿ' ಚಿತ್ರ ರು.35 ಕೋಟಿ ಗಳಿಸಿ ದಾಖಲೆ ನಿರ್ಮಿಸಿತ್ತು.

  ವಿವಾದದ ಸುತ್ತ 'ತ್ರಿ ಇಡಿಯಟ್ಸ್'
  ಚೇತನ್ ಭಗತ್ ಅವರ ದಾಖಲೆ ಮಾರಾಟದ ಕಾದಂಬರಿ Five Point Someone ಪ್ರೇರಣೆಯಿಂದ 'ತ್ರಿ ಇಡಿಯಟ್ಸ್' ಚಿತ್ರವನ್ನು ತೆರೆಗೆ ತರಲಾಗಿದೆ. ಲೇಖಕರಿಗೆ ಸೂಕ್ತ ಮನ್ನಣೆ ನೀಡಿಲ್ಲ ಎಂಬ ಕಾರಣಕ್ಕೆ ಈ ಚಿತ್ರ ವಿವಾದಕ್ಕೆ ಸಿಲುಕಿತ್ತು. ಇದು ಒಂದು ರೀತಿಯಲ್ಲಿ 'ತ್ರಿ ಇಡಿಯಟ್ಸ್'ಗೆ ಲಾಭವಾಗಿದೆ. ''ಚಿತ್ರದ ಆರಂಭದಲ್ಲಿ ತನಗೆ ಮನ್ನಣೆ ಕೊಡಿ ಎಂದು ಭಗತ್ ಅವರು ವಿನಂತಿಸಿಕೊಂಡಿದ್ದರು. ಆದರೆ ಚಿತ್ರದ ಕೊನೆಯಲ್ಲಿ ಅವರ ಹೆಸರನ್ನು ತೋರಿಸಲಾಗಿತ್ತು. ಇದರಿಂದ ಭಗತ್ ನೊಂದುಕೊಂಡಿದ್ದರು. ಆದಾಗ್ಯೂ ಪುಸ್ತಕದ ಮಾರಾಟ ಶೇ10ರಿಂದ 15ರಷ್ಟು ಹೆಚ್ಚಾಗಿದೆ ಎನ್ನುತ್ತವೆ ಮೂಲಗಳು.

  ''Five Point Someone ಪುಸ್ತಕವನ್ನು ವಿಚಾರಿಸಿ ಹಲವಾರು ಕರೆಗಳು ಬರುತ್ತಿವೆ. ಪ್ರತಿನಿತ್ಯ 30 ರಿಂದ 40 ಕಾಪಿಗಳು ಮಾರಾಟವಾಗುತ್ತವೆ'' ಎನ್ನುತ್ತಾರೆ ದಕ್ಷಿಣ ದೆಹಲಿಯ ಖಾನ್ ಮಾರ್ಕೆಟ್ ಪುಸ್ತಕ ಮಳಿಗೆಯ ಮಾಲೀಕರು. ಈ ಪುಸ್ತಕವನ್ನು ಆನ್ ಲೈನ್ ನಲ್ಲಿ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು ಎನ್ನುತ್ತಾರೆ ಅವರು. 1,500 ಪ್ರಿಂಟ್ ಗಳೊಂದಿಗೆ ತ್ರಿ ಇಡಿಯಟ್ಸ್ ಚಿತ್ರ ದೇಶದಾದ್ಯಂತ ತೆರೆಕಂಡಿದ್ದು ಅಮೀರ್ ಖಾನ್ ಅಭಿಮಾನಿಗಳಿಗೆ ರಸದೌತಣ ನೀಡುತ್ತಿದೆ. ತ್ರಿ ಇಡಿಯಟ್ಸ್ ವಿಡಿಯೋ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X