»   »  ಎಂದೂ ಕಂಡರಿಯದ ಅಮಿತಾಬ್ ಬಚ್ಚನ್ ಚಿತ್ರ!

ಎಂದೂ ಕಂಡರಿಯದ ಅಮಿತಾಬ್ ಬಚ್ಚನ್ ಚಿತ್ರ!

Subscribe to Filmibeat Kannada
Amitabh Bachchan forthcoming film Pa.
ಚಿತ್ರದಲ್ಲಿರುವ ವ್ಯಕ್ತಿ ಮೆಜಿಸ್ಟಿಕ್ ನಂತಹ ಜನನಿಬಿಡ ಪ್ರದೇಶಕ್ಕೆ ಬಂದರೂ ಜನ ಗುರುತಿಸುವುದಿರಲಿ ಅವನನ್ನು ಕಂಡು ದೂರ ಸರಿಯುತ್ತಾರೆ! ಅದೇ ಈ ವ್ಯಕ್ತಿ ಬಾಲಿವುಡ್ ಖ್ಯಾತ ನಟ ಅಮಿತಾಬ್ ಬಚ್ಚನ್ ಎಂದರೆ ಮುಗಿ ಬೀಳಲೇ ಬೇಕು. ಎಲ್ಲಾ ಮೇಕಪ್ ಮಹಾತ್ಮೆ!

ಬಿಗ್ ಬಿ ಅಮಿತಾಬ್ ಬಚ್ಚನ್ ಸದ್ಯ ' ಪಾ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದು. ಆ ಚಿತ್ರದ ಪಾತ್ರಕ್ಕಾಗಿ ಈ ಅವತಾರ ಎತ್ತಿದ್ದಾರೆ. ಲಂಡನ್ ನ ಮೇಕಪ್ ಕಲಾವಿದ ಹೀಗೆ ತನ್ನ ಅದ್ಭುತ ಕಲಾ ನೈಪುಣ್ಯತೆಯನ್ನು ಮೆರೆದಿದ್ದಾನೆ. ಈ ಚಿತ್ರದಲ್ಲಿ ಅಮಿತಾಬ್ ರದ್ದು ಬೌದ್ಧಿಕ ವಿಕಲಚೇತನ ಪಾತ್ರ.

ಈ ಚಿತ್ರದ ಮತ್ತೊಂದು ವಿಶೇಷವೆಂದರೆ, ಅಮಿತಾಬ್ ಗೆ ತಂದೆ ತಾಯಿಯಾಗಿ ಅಭಿಷೇಕ್ ಮತ್ತು ವಿದ್ಯಾ ಬಾಲನ್ ಕಾಣಿಸಲಿದ್ದಾರೆ. ಆದರೆ ಚಿತ್ರಕ್ಕೆ ಹೆಚ್ಚಿನ ಪ್ರಚಾರ ಕೊಡದೆ ರಹಸ್ಯವಾಗಿ ಚಿತ್ರೀಕರಿಸಲಾಗುತ್ತಿದೆ. ದೆಹಲಿಯಲ್ಲಿ ಚಿತ್ರೀಕರಣ ಮುಗಿಸಿಕೊಂಡು ಈಗ ಮುಂಬೈಗೆ ಮರಳಿದ್ದಾರೆ ಬಿಗ್ ಬಿ.

ಈ ರೀತಿ ಮೇಕಪ್ ಮಾಡಲು ಕನಿಷ್ಠ ಐದು ಗಂಟೆಗಳಾದರೂ ಬೇಕು. ತುಂಬಾ ನಾಜೂಕಾಗಿ ಮಾಡಬೇಕಾಗುತ್ತದೆ. ಹಾಗಾಗಿ ನಾನು ಮೇಕಪ್ ಮುಗಿಯುವವರೆಗೂ ಒಂದು ತೊಟ್ಟು ನೀರು ಕುಡಿಯುವುದಿಲ್ಲ ಎನ್ನುತ್ತಾರೆ ಲಂಡನ್ ನ ಮೇಕಪ್ ಕಲಾವಿದ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada