»   »  ಬೆಂಜ್ ಕಾರಿನಲ್ಲಿ ರಜನಿ ಐಶ್ ರೋಮ್ಯಾನ್ಸ್!?

ಬೆಂಜ್ ಕಾರಿನಲ್ಲಿ ರಜನಿ ಐಶ್ ರೋಮ್ಯಾನ್ಸ್!?

Posted By:
Subscribe to Filmibeat Kannada
ರಜನಿಕಾಂತ್ ಮತ್ತು ಐಶ್ವರ್ಯ ರೈ ನಟಿಸುತ್ತಿರುವ 'ಎಂದಿರನ್'(ರೋಬೊ) ಚಿತ್ರ ಸಾಕಷ್ಟು ಕುತೂಹಲಗಳ ಗೂಡಾಗಿದೆ. ಈ ಚಿತ್ರವನ್ನು 165 ಕೋಟಿ ರು.ಗಳ ಭಾರಿ ಬಜೆಟ್ ನೊಂದಿಗೆ ಶಂಕರ್ ನಿರ್ದೇಶಿಸುತ್ತಿದ್ದಾರೆ ಎಂಬುದು ಹಳೆ ಸುದ್ದಿಯಾದರೂ ಹೊಸದಾಗಿ ಕೇಳಿಸುತ್ತದೆ!

ಚಿತ್ರದ ಕೆಲವೊಂದು ಸನ್ನಿವೇಶಗಳನ್ನು ವೆಲ್ಲೂರಿನಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ಇತ್ತೀಚೆಗಷ್ಟೇ ಚಿತ್ರತಂಡ ಕುಲು ಮನಾಲಿಗೆ ಪ್ರಯಾಣ ಹೊರಟಿತು. ಅಲ್ಲಿ ರಜನಿ ಮತ್ತು ಐಶ್ ನಡುವೆ ಪ್ರಣಯಭರಿತ ಸನ್ನಿವೇಶವನ್ನು ಕ್ಯಾಮೆರಾದಲ್ಲಿ ಬಂಧಿಸಿಕೊಳ್ಳಲಾಯಿತು. ಈ ಒಂದು ರೊಮ್ಯಾಂಟಿಕ್ ದೃಶ್ಯಕ್ಕಾಗಿ ಒಂದು ಕೋಟಿ ರು.ಗಳ ಬೆಂಜ್ ಕಾರನ್ನು ತರಿಸಲಾಗಿತ್ತು. ಕಾರಿನ ಒಳಗೆ ಐಶ್ ಮತ್ತು ರಜನಿ ಪ್ರಣಯಭರಿತ ಸನ್ನಿವೇಶಗಳನ್ನು ಚಿತ್ರೀಕರಿಸಿಕೊಳ್ಳಲಾಯಿತು!

ಐಶ್ವರ್ಯ ರೈ ಅಂದಚಂದಕ್ಕೆ ತಕ್ಕಂತೆ ರಜನಿ ಸಹ ನವ ಮನ್ಮಥನ ಗೆಟಪ್ ನಲ್ಲಿ ಕಾಣಿಸಲಿದ್ದಾರೆ. ಚರ್ಮದ ಸೌಂದರ್ಯವನ್ನು ಹೆಚ್ಚಿಸುವ ಎಲ್ಲ ತಂತ್ರಗಳನ್ನು ರಜನಿ ಬಳಸಿಕೊಂಡಿದ್ದಾರಂತೆ. ಈ ಚಿತ್ರದಲ್ಲಿ ರಜನಿಗೆ ಮತ್ತೆ ಪ್ರಾಯ ಬರಲಿದೆ. ಕಾರಣ ಅವರ ವಯಸ್ಸನ್ನು ಮರೆಸುವ ಮೇಕಪ್! ಬಾಲಿವುಡ್ ನಲ್ಲಿ ರೋಬೊ ಚಿತ್ರ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ. ಈ ಚಿತ್ರದ ಮತ್ತೊಂದು ಹೇಳಿಕೊಳ್ಳುವಂತ ವಿಚಾರವೆಂದರೆ,ಐಶ್ವರ್ಯ ರೈ 6 ಕೋಟಿ ರು.ಸಂಭಾವನೆ ಪಡೆದಿರುವುದು.

(ಏಜೆನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada