»   » ಸರ್ವಕಾಲಿಕ ಶ್ರೇಷ್ಠರಲ್ಲಿ ಬಚ್ಚನ್, ಗುರುದತ್, ನರ್ಗೀಸ್

ಸರ್ವಕಾಲಿಕ ಶ್ರೇಷ್ಠರಲ್ಲಿ ಬಚ್ಚನ್, ಗುರುದತ್, ನರ್ಗೀಸ್

Posted By:
Subscribe to Filmibeat Kannada

ಕೇಬಲ್ ನ್ಯೂಸ್ ನೆಟ್ ವರ್ಕ್ (ಸಿಎನ್ ಎನ್) ಆಯ್ಕೆ ಮಾಡಿದ ಏಷ್ಯಾದ 25 ಸರ್ವಕಾಲಿಕ ಶ್ರೇಷ್ಠ ಚಲನಚಿತ್ರಕಲಾವಿದರಪಟ್ಟಿಯಲ್ಲಿ ಗುರುದತ್, ಅಮಿತಾಬ್ ಬಚ್ಚನ್, ನರ್ಗೀಸ್ ದತ್, ಮೀನಾಕುಮಾರಿ ಹಾಗೂ ಪ್ರಾಣ್ ಸ್ಥಾನ ಪಡೆದಿದ್ದಾರೆ.

ಪ್ಯಾಸ(1957) ಚಿತ್ರದಲ್ಲಿನ ದುರಂತ ನಾಯಕ ಗುರುದತ್ ನಟನೆ, ಜಂಜೀರ್(1973) ನಲ್ಲಿನ ಅಮಿತಾಬ್ ಹಾಗೂ ಪ್ರಾಣ್ ನಟನೆ, ಮದರ್ ಇಂಡಿಯಾ(1957) ಚಿತ್ರದ ನರ್ಗೀತ್ ಅಭಿನಯ, ಸಾಹಿಬ್ ಬೀಬಿ ಔರ್ ಗುಲಾಂ(1962) ಚಿತ್ರದಲ್ಲಿ ಟ್ರಾಜಿಡಿ ಕ್ವೀನ್ ಮೀನಾಕುಮಾರಿಯ ಭಾವಾಭಿನಯವನ್ನು ಆಯಾ ಕಲಾವಿದರ ಸರ್ವ ಶ್ರೇಷ್ಠ ಪಾತ್ರ ನಿರ್ವಹಣೆ ಎಂದು ಆಯ್ಕೆಮಾಡಲಾಗಿದೆ.

ಸಿಎನ್ ಎನ್: ಅಮೆರಿಕದ ಅಟ್ಲಾಂಟದಲ್ಲಿ ಕೇಂದ್ರ ಕಚೇರಿಯುಳ್ಳ ಬಹು ವಿಸ್ತೃತ ಪ್ರಸಾರ ಜಾಲ ಹೊಂದಿರುವ ಸಂಸ್ಥೆ. ಏಷ್ಯಾದಲ್ಲಿ ಬ್ಯಾಂಗ್ ಕಾಂಕ್, ಹಾಂಗ್ ಕಾಂಗ್, ಮುಂಬೈ, ಶಾಂಘೈ, ಸಿಂಗಪುರ ಹಾಗೂ ಟೋಕಿಯೋದಲ್ಲಿ ಅಂಗ ಸಂಸ್ಥೆ ಹೊಂದಿದೆ. ದೈನಂದಿನ ಸುದ್ದಿ ಜೊತೆಗೆ ಪ್ರವಾಸ/ಜೀವನ ಶೈಲಿ/ ಮನರಂಜನೆಯ ಮಾಹಿತಿಯನ್ನು ನೀಡುತ್ತಾ ಬಂದಿದೆ. "Local Insights, Global Experiences" ಈ ಸಂಸ್ಥೆಯ ಧ್ಯೇಯವಾಕ್ಯ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada