»   » ಪಾಕ್ ನಲ್ಲಿ ಶಾರುಖ್ ರ ರಬ್ ನೆ ಬನಾ ದಿ ಜೋಡಿ

ಪಾಕ್ ನಲ್ಲಿ ಶಾರುಖ್ ರ ರಬ್ ನೆ ಬನಾ ದಿ ಜೋಡಿ

Subscribe to Filmibeat Kannada

ಪಾಕಿಸ್ತಾನ ಬಾಲಿವುಡ್ ಚಿತ್ರಗಳ ಪ್ರಮುಖ ಮಾರುಕಟ್ಟೆ ಎಂಬುದರಲ್ಲಿ ಎರಡು ಮಾತಿಲ್ಲ.ಮುಂಬಯಿ ಉಗ್ರರ ದಾಳಿಯಲ್ಲಿ ಪಾಕ್ ಭಯೋತ್ಪಾದಕರ ಕೈವಾಡ ಇರುವುದು ಜಗಜ್ಜಾಹೀರಾಗಿದೆ. ಇಂಥಹ ಪರಿಸ್ಥಿತಿಯಲ್ಲಿ ಬಾಲಿವುಡ್ ಬಾದಶಾ ಎಂದೇ ಕರೆಸಿಕೊಳ್ಳುವ ಶಾರುಕ್ ಖಾನ್ ರ 'ರಬ್ ನೆ ಬನಾ ದಿ ಜೋಡಿ' ಭಾರತ ಮತ್ತು ಪಾಕಿಸ್ತಾನದಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಇದಕ್ಕೆ ಭಾರತೀಯ ಚಿತ್ರೋದ್ಯಮ ಸಹ ಹಸಿರು ನಿಶಾನೆ ತೋರಿಸಿದೆ.

ಆದಿತ್ಯ ಛೋಪ್ರಾ ನಿರ್ದೇಶನದ ' ರಬ್ ನೆ ಬನಾ ದಿ ಜೋಡಿ' ಡಿಸೆಂಬರ್ 12 ರಂದು ಬಿಡುಗಡೆಗೊಳ್ಳುತ್ತಿದೆ. ಮುಂಬಯಿ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ವಾಕ್ಸಮರ ತೀವ್ರವಾಗಿದ್ದು ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಿದೆ. ಇಂಥಹ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಶಾರುಖ್ ಅಭಿನಯದ ಚಿತ್ರ ಪಾಕಿಸ್ತಾನದಲ್ಲಿ ಬಿಡುಗಡೆಯಾಗುವುದು ಎಷ್ಟು ಸಮಂಜಸ? ಎಂಬ ಪ್ರಶ್ನೆ ತಲೆಯೆತ್ತಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada