»   » ಬಚ್ಚನ್ ಮಗನಾಗಿ ಹಿಂದಿ ಚಿತ್ರದಲ್ಲಿ ಕಿಚ್ಚ ಸುದೀಪ್

ಬಚ್ಚನ್ ಮಗನಾಗಿ ಹಿಂದಿ ಚಿತ್ರದಲ್ಲಿ ಕಿಚ್ಚ ಸುದೀಪ್

Subscribe to Filmibeat Kannada

ಫೂಂಕ್ ಚಿತ್ರದಿಂದ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್ ಈಗ ಮತ್ತೊಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಬಾಕ್ಸಾಫೀಸ್ ಗಳಿಕೆಯಲ್ಲಿ ಉತ್ತಮ ಸಾಧನೆ ಮಾಡದ ಫೂಂಕ್ ಚಿತ್ರ ಸುದೀಪ್ ಗೆ  ಒಳ್ಳೆಯ  ಬ್ರೇಕ್ ಕೊಟ್ಟಿತು.  ಸುದೀಪ್ ಅಭಿನಯ ಪ್ರೇಕ್ಷಕರ ಮತ್ತು ಮಾಧ್ಯಮಗಳ  ಮೆಚ್ಚುಗೆಗೆ ಪಾತ್ರವಾಗಿತ್ತು. ಇದೇ ಯಶಸ್ಸನ್ನು ಬಳಸಿಕೊಂಡು ರಾಮ್ ಗೋಪಾಲ್ ವರ್ಮ  ಈಗ ಭಾರತ ಚಿತ್ರರಂಗದ ಮೇರು ನಟ ಅಮಿತಾಭ್ ಬಚ್ಚನ್ ಹಾಗೂ ಸುದೀಪ್ ಜೊತೆ  'ರಣ್' ಎನ್ನುವ ಚಿತ್ರಕ್ಕೆ ಕೈ ಹಾಕಿದ್ದಾರೆ.  ಸುದೀಪ್ ಈ ಚಿತ್ರದಲ್ಲಿ ಅಮಿತಾಭ್ ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಎಲೆಕ್ಟ್ರಾನಿಕ್ ಮಾಧ್ಯಮ ಕುರಿತ ಕಥೆಯಾಧಾರಿತ ಈ ಚಿತ್ರದಲ್ಲಿ ಅಮಿತಾಬ್ ಎನ್ ಡಿ ಟಿ ವಿಯ ಸಂಸ್ಥಾಪಕ ಪ್ರಣವ್ ರಾಯ್ ಅವರನ್ನು ಹೋಲುವ ಪಾತ್ರವನ್ನು ನಿರ್ವಹಿಸಲಿದ್ದಾರೆ. 24/7 ಖಾಸಗಿ ಸುದ್ದಿ  ವಾಹಿನಿಯ ಸುತ್ತಮುತ್ತ ಈ ಚಿತ್ರಕಥೆ  ಹೆಣೆಯಲಾಗಿದೆ.  ಬಿಗ್ ಬಿ ಈ ವಾಹಿನಿಯ ಮಾಲಿಕ ಹರ್ಷವರ್ಧನ್ ಮಲ್ಲಿಕ್ ಪಾತ್ರದಲ್ಲಿ  ನಟಿಸಿದ್ದರೆ ಸುದೀಪ್ ಮಗನಾಗಿ ಜೈ ಮಲ್ಲಿಕ್ ಪಾತ್ರದಲ್ಲಿ ಕಾಣಿಸಲಿದ್ದಾರೆ.  ಸುದ್ದಿ ವಾಹಿನಿಯನ್ನು ಒಂದು ಉದ್ಯಮವಾಗಿ ನೋಡುವ ಜೈ ಮಲ್ಲಿಕ್, ಸಂಸ್ಥೆಯ ಲಾಭವೇ ಅದರ ಉನ್ನತಿಗೆ ಮೂಲ  ಎಂಬುದು ಇವನ ಅಭಿಪ್ರಾಯ. ಚಿತ್ರದ ಇತರೆ ತಾರಾಗಣದಲ್ಲಿ ಮನೀಶಾ ಕೊಯಿರಾಲ, ರಜತ್ ಕಪೂರ್, ರೈಮಾ ಸೇನ್, ರಾಜ್ ಪಾಲ್ ಯಾದವ್, ಪರೇಶ್ ರಾವಲ್ ಹಾಗೂ ರಿತೇಶ್ ದೇಶ್ ಮುಖ್ ಇದ್ದರೆ.

ನೈಜ ಅಭಿನಯಕ್ಕೆ ಹೆಸರಾದ ಸುದೀಪ್ ಈಗ  ಬಿಗ್ ಬಿಗೆ ಸರಿಸಮಾನವಾಗಿ ಯಾವ ರೀತಿ ತಮ್ಮ ನಟನಾ ಕೌಶಲ್ಯವನ್ನು ಪ್ರದರ್ಶಿಸುತ್ತಾರೆ ಎಂಬುದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ರಣ್ ಚಿತ್ರಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ರಾಮ್ ಗೋಪಾಲ್ ವರ್ಮಾ ತಮ್ಮ ಬ್ಲಾಗ್  ನಲ್ಲಿ ಬರೆದುಕೊಂಡಿದ್ದಾರೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada