For Quick Alerts
  ALLOW NOTIFICATIONS  
  For Daily Alerts

  ಕಿರುತೆರೆಗೆ ಮುನ್ನಾಭಾಯ್ ಸಂಜಯ್ ದತ್ ಲಗ್ಗೆ

  By Rajendra
  |

  ಬಾಲಿವುಡ್ ಮುನ್ನಾಭಾಯ್ ಸಂಜಯ್ ದತ್ ಕಿರುತೆರೆಗೆ ಅಡಿಯಿಡಲು ಸಿದ್ಧತೆ ನಡೆಸಿದ್ದಾರೆ. ಹೊಸ ಟಿವಿ ಕಾರ್ಯಕ್ರಮವನ್ನು ಸಂಜು ಆರಂಭಿಸಲಿದ್ದಾರೆ ಎಂಬ ಸುದ್ದಿ ಬಾಲಿವುಡ್‌ ವಲಯದಲ್ಲಿ ದಟ್ಟವಾಗಿ ವ್ಯಾಪಿಸಿದೆ. ಇತ್ತೀಚೆಗೆ ಸಂಜಯ್ ದತ್ ಆಸ್ತಿಯನ್ನು ಮುಟ್ಟುಗೋಲು ಹಾಕುವಂತೆ ಮುಂಬೈ ಹೈಕೋರ್ಟ್ ಆದೇಶ ನೀಡಿತ್ತು.

  ಇದೊಂದು ಗೇಮ್ ಶೋ ಆಗಿದ್ದು, ಈಗಾಗಲೆ ಕಿರುತೆರೆಯ ಬಾಗಿಲನ್ನು ಸಂಜು ತಟ್ಟಿದ್ದಾರೆ. ಯಾವ ಟಿವಿ ಚಾನಲ್ ಮೆಟ್ಟಿಲತ್ತಿದ್ದಾರೆ, ಕಾರ್ಯಕ್ರಮದ ವಿವರಗಳು ಏನು ಎಂಬುದು ಸದ್ಯಕ್ಕೆ ಸಸ್ಪೆನ್ಸ್. ವ್ಯವಹಾರ ಕುದುರಿದ್ದು ಸಂಜು ಖುಷಿಯಾಗಿದ್ದಾರೆ ಎನ್ನುತ್ತವೆ ಮೂಲಗಳು. ಶೀಘ್ರದಲ್ಲೆ ಅಧಿಕೃತ ವಿವರಗಳು ಹೊರಬೀಳಲಿವೆ.

  ಇತ್ತೀಚೆಗಷ್ಟೆ ಅವಳಿ ಜವಳಿ ಮಕ್ಕಳ ತಂದೆಯಾಗಿದ್ದ ಮುನ್ನಾಬಾಯ್ ಈಗ ಕಿರುತೆರೆಗೆ ಎಂಟ್ರಿ ಕೊಡುತ್ತಿರುವ ಬಗ್ಗೆ ಚಿತ್ರೋದ್ಯಮದಲ್ಲಿ ಆಸಕ್ತಿ ನೆಲೆಸಿದೆ. ಈಗಾಗಲೆ ಕಿರುತೆರೆಯಲ್ಲಿ ಸಲ್ಮಾನ್ ಖಾನ್ ತಮ್ಮ ಪರಾಕ್ರಮ ಮೆರೆದಿದ್ದಾರೆ. ಈಗ ಮುನ್ನಾಬಾಯ್ ಸರದಿ.

  English summary
  Bollywood actor Sanjay Dutt is all set to host the show on small screen. The latest buzz is that soon Sanjay Dutt will host a new show on TV. But the official confirmation details about his show on TV is awaited.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X