For Quick Alerts
  ALLOW NOTIFICATIONS  
  For Daily Alerts

  ಹುಸೇನ್ ಅಜ್ಜನ ಹೊಸ ಕಲಾಕೃತಿ ಅನುಷ್ಕಾ ಶರ್ಮಾ!

  By Rajendra
  |

  ಭಾರತದ ಪಿಕಾಸೋ ಎಂಬ ಬಿರುದಾಂಕಿತ (ಫೋರ್ಬ್ಸ್ ನಿಯತಕಾಲಿಕೆ ಪ್ರಕಾರ)ಖ್ಯಾತ ಕಲಾವಿದ, ತೊಂಬತ್ತೈದರ ವಯೋವೃದ್ಧ ಎಂ ಎಫ್ ಹುಸೇನ್ ಅವರಿಗೆ ಪ್ರಾಯ ಮತ್ತೆ ಬಂದಂತಿದೆ. ಮಾಧುರಿ ದೀಕ್ಷಿತ್, ಟಬು ಮತ್ತು ಅಮೃತಾ ರಾವ್ ಅವರನ್ನು ತಮ್ಮ ಕುಂಚದಲ್ಲಿ ಸೆರೆಹಿಡಿದಿದ್ದ ಹುಸೇನ್ ಅಜ್ಜನ ಕಣ್ಣಿಗೆ ಈ ಬಾರಿ ಮತ್ತೊಬ್ಬ ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಬಿದ್ದಿದ್ದಾರೆ!

  ಅನುಷ್ಕಾ ಶರ್ಮ ಅಭಿನಯದ 'ಬ್ಯಾಂಡ್ ಬಾಜಾ ಬಾರಾತ್' ಚಿತ್ರವನ್ನು ಹುಸೇನ್ ಒಂದಲ್ಲ, ಎರಡಲ್ಲ ಎಂಟು ಬಾರಿ ನೋಡಿದ್ದಾರಂತೆ. ಚಿತ್ರ ಮಸ್ತ್ ಆಗಿದೆ ಎಂದು ಹುಸೇನ್ ಸಾಹೇಬರು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಕತಾರ್‌ನ ದೋಹಾದಲ್ಲಿರುವ ಹುಸೇನ್ ತಮ್ಮ ಕುಟುಂಬದವರು ಹಾಗೂ ಗೆಳೆಯರೊಂದಿಗೆ ಕೂತು ಈ ಚಿತ್ರವನ್ನು ವೀಕ್ಷಿಸಿದ್ದಾರೆ.

  ವಿಶೇಷ ಎಂದರೆ ಹುಸೇನ್ ಅಜ್ಜ ಕನ್ನಡಕವನ್ನು ತೆಗೆದಿಟ್ಟು ಈ ಚಿತ್ರವನ್ನು ನೋಡಿರುವುದು. ಅನುಷ್ಕಾರನ್ನು ನೋಡುತ್ತಾ ನೋಡುತ್ತಾ ತಮ್ಮ ಕಣ್ಣಿನ ದೃಷ್ಟಿ ಮತ್ತಷ್ಟು ಸುಧಾರಿಸಿದೆ ಎಂದಿದ್ದಾರೆ ಬೊಚ್ಚು ಬಾಯಿಯ ಹುಸೇನ್. ಈ ಹಿಂದೆ ಹಿಂದು ದೇವತೆಗಳನ್ನು ನಗ್ನವಾಗಿ ಬಿಡಿಸಿ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

  ದುಬೈನಲ್ಲಿ ಹುಸೇನ್ ಮಾತನಾಡುತ್ತಾ, "ತುಂಬಿದ ಗೃಹಗಳಲ್ಲಿ ಈ ಚಿತ್ರ ಇನ್ನೂ ಪ್ರದರ್ಶನ ಕಾಣುತ್ತಿದೆ. ಶಾರುಖ್ ಜೊತೆ ಅಭಿನಯಿಸಿದ 'ರಬ್ ನೇ ಬನಾದಿ' ಜೋಡಿ ಚಿತ್ರಕ್ಕೆ ಹೋಲಿಸಿದರೆ 'ಬ್ಯಾಂಡ್ ಬಾಜಾ ಬಾರಾತ್' ಚಿತ್ರದಲ್ಲಿ ಅನುಷ್ಕಾ ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚಿದ್ದಾರೆ. ಚಿತ್ರದಲ್ಲಿ ರಣವೀರ್ ಸಿಂಗ್ ಅಭಿನವೂ ಚೆನ್ನಾಗಿದೆ " ಎಂದಿದ್ದಾರೆ.

  ಅಂದಹಾಗೆ ಮಾಧುರಿ ದೀಕ್ಷಿತ್ ಅಭಿನಯದ 'ಹಮ್ ಆಪ್ಕೆ ಹೈ ಕೌನ್' ಚಿತ್ರವನ್ನು ಹುಸೇನ್ 73 ಬಾರಿ ನೋಡಿದ್ದು, ಅಮೃತಾ ರಾವ್ ಅವರ 'ವಿವಾಹ್' ಚಿತ್ರವನ್ನು 20 ಬಾರಿ ನೋಡಿ ಆನಂದಿಸಿದ್ದಾರಂತೆ. ಈಗ ಅನುಷ್ಕಾ ಚಿತ್ರವನ್ನು ಮತ್ತೆ ಮತ್ತೆ ನೋಡುವುದಾಗಿ ಹೇಳಿದ್ದಾರೆ. ಹುಸೇನ್ ಅಜ್ಜನ ಬತ್ತದಈ ಉತ್ಸಾಹಕ್ಕೆ ಏನನ್ನ ಬೇಕೋ ಏನೋ?! [ಎಂ ಎಫ್ ಹುಸೇನ್]

  English summary
  Controversial Indian artist M F Husain watched Anushka Sharma's Band Baaja Baaraat movie 8 times! At last M F Husain has found a new muse in Anushka Sharma. The 95-year-old finds the movie fascinating.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X