»   »  ಐಶ್ ಸ್ಥಾನ ಆಕ್ರಮಿಸಿದ ಮಲ್ಲು ಬೆಡಗಿ ಅಸಿನ್

ಐಶ್ ಸ್ಥಾನ ಆಕ್ರಮಿಸಿದ ಮಲ್ಲು ಬೆಡಗಿ ಅಸಿನ್

Posted By:
Subscribe to Filmibeat Kannada

ದಕ್ಷಿಣ ಭಾರತದ ನಟಿ ಅಸಿನ್ ಗೆ ಹಿಂದಿಯಲ್ಲಿ ಸಾಕಷ್ಟು ಅವಕಾಶಗಳು ಸಿಗುತ್ತಿಲ್ಲ ಎಂದವರೇ ಹೆಚ್ಚು. ಈಗೀಗಲೇ ಖ್ಯಾತ ನಿರ್ದೇಶಕರು ಆಕೆಯ ಹೆಸರನ್ನು ಗಣನೆಗೆ ತೆಗೆದುಕೊಳ್ಳುತ್ತಿದ್ದಾರೆ. ಐಶ್ವರ್ಯ ರೈ ಪೋಷಿಸಬೇಕಾಗಿದ್ದ ನಾಯಕಿ ಪಾತ್ರಕ್ಕಾಗಿ ಅಸಿನ್ ರನ್ನು ಸಂಪರ್ಕಿಸಿದ್ದಾರೆ ನಿರ್ದೇಶಕ ಅಶುತೋಷ್ ಗೋವರಿಕರ್.

ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ನಾಯಕ ನಟ ಎಂಬುದು ವಿಶೇಷ. 'ಖೇಲೆಂ ಹಮ್ ಜೀ ಜಾನ್ ಸೆ' ಎಂಬ ಹೆಸರಿನಲ್ಲಿ ಸೆಟ್ಟೇರಲಿರುವ ಐತಿಹಾಸಿಕ ಚಿತ್ರದಲ್ಲಿ ಅಭಿ, ಅಸಿನ್ ಜತೆಯಾಗಿ ನಟಿಸಲಿದ್ದಾರೆ. ಈ ನಡುವೆ ಮುಂಬೈನಲ್ಲಿ ಮೂಗಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಅಸಿನ್ ಇತ್ತೀಚೆಗೆ ಅಶುತೋಷ್ ಅವರನ್ನು ಭೇಟಿ ಮಾಡಿದ್ದರಂತೆ.

ಅಶುತೋಷ್ ಕತೆಯನ್ನು ಇನ್ನೂ ಹೇಳುತ್ತಿದ್ದಂತೆ...'ನಿಮ್ಮ ಈ ಹಿಂದಿನ ಚಿತ್ರಗಳನ್ನು ನೋಡಿದ್ದೇನೆ. ನಾನು ನಿಮ್ಮೊಂದಿಗೆ ಕಲೆತು ಕೆಲಸ ಮಾಡಬೇಕೆಂದು ನಿರ್ಧರಿಸಿದ್ದೇನೆ' ಎಂದರಂತೆ! ಈ ಬಗ್ಗ್ಗೆ ನಿರ್ದೇಶಕ ಮಾತನಾಡುತ್ತಾ, ಅಸಿನ್ ನನ್ನ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ವಿವರಗಳನ್ನು ಬಹಿರಂಗಪಡಿಸುತ್ತೇನೆ ಎಂದಿದ್ದಾರೆ.

ಮೊದಲು ತಮ್ಮ ಚಿತ್ರಕ್ಕೆ ನಾಯಕಿ ಐಶ್ ಎಂದುಕೊಂಡಿದ್ದು ನಿಜ. ಆದರೆ ಅನಿವಾರ್ಯ ಕಾರಣಗಳಿಂದ ಆಕೆಯ ಸ್ಥಾನಕ್ಕೆ ಅಸಿನ್ ರನ್ನು ಆಯ್ಕೆ ಮಾಡುತ್ತಿದ್ದೇವೆ ಎಂದು ಅಶುತೋಶ್ ತಿಳಿಸಿದ್ದಾರೆ. ಅಭಿಷೇಕ್ ಬಚ್ಚನ್ ನಾಯಕ ನಟನಾಗಿರುವ ಚಿತ್ರದಿಂದ ಐಷ್ ಗೆ ಕೈತಪ್ಪಿದ್ದೇಕೆ ಎಂದು ಬಾಲಿವುಡ್ ವಲಯದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada