»   »  ಸಂಭಾವನೆ ಶೂರ ಸಂಜಯ್ ಲೀಲಾ ಭನ್ಸಾಲಿ!

ಸಂಭಾವನೆ ಶೂರ ಸಂಜಯ್ ಲೀಲಾ ಭನ್ಸಾಲಿ!

Subscribe to Filmibeat Kannada

ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಕೈಗೆತ್ತಿಕೊಂಡಿರುವ ಹೊಸ ಚಿತ್ರ 'ಗುಜಾರೀಷ್'. ಹೃತಿಕ್ ರೋಶನ್, ಐಶ್ವರ್ಯ ರೈ ಪ್ರಧಾನ ಭೂಮಿಕೆಯಲ್ಲಿರುವ ಚಿತ್ರ. ಯೂಟಿವಿ ಸಂಸ್ಥೆ ಈ ಚಿತ್ರವನ್ನು ನಿರ್ಮಿಸುತ್ತಿದ್ದು ಈ ಚಿತ್ರದ ನಿರ್ದೇಶನಕ್ಕಾಗಿ ಭನ್ಸಾಲಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೆ?

ಭನ್ಸಾಲಿ ಪಡೆಯುತ್ತಿರುವ ಸಂಭಾವನೆ ಕೇಳಿದರೆ ಎಂತಹವರಿಗೂ ಎದೆ ಝಲ್ಲೆನ್ನುತ್ತದೆ. ಈ ಚಿತ್ರಕ್ಕಾಗಿ ಅಕ್ಷರಶಃ ಅವರು ಪಡೆಯುತ್ತಿರುವ ಸಂಭಾವನೆ ರು.35 ಕೋಟಿ! ಆಶ್ವರ್ಯವಾಗುತ್ತಿದೆಯೇ...? ಆದರೂ ಇದು ನಿಜ! ಈ ಚಿತ್ರದ ನಿರ್ದೇಶನಕ್ಕಾಗಿ ಚರ್ಚಿಸಿದ ಬಳಿಕ ಅವರು ರು.35 ಕೋಟಿಯನ್ನು ಕೇಳಿದರು.

ನಿರ್ದೇಶನದ ಜೊತೆಗೆ ಚಿತ್ರಕತೆ, ಸಂಗೀತದ ಜವಾಬ್ದಾರಿಯೂ ತನ್ನದೇ ಎಂದರಂತೆ. ಈ ಹಿಂದೆ ಭನ್ಸಾರಿ ನಿರ್ದೇಶಿಸಿದ 'ಸಾವರಿಯಾ' ಬಾಕ್ಸಾಫೀಸಲ್ಲಿ ಸೋತರೂ ವ್ಯಾಪಾರಿ ವರ್ಗದಲ್ಲಿ ಅವರ ಚಿತ್ರಗಳಿಗೆ ಬಲು ಬೇಡಿಕೆಯಿದೆಯಂತೆ. ಹಾಗಾಗಿ ಭನ್ಸಾಲಿ ಈ ಚಿತ್ರಕ್ಕಾಗಿ ಅಷ್ಟು ಮೊತ್ತದ ಬೇಡಿಕೆಯನ್ನು ಇಟ್ಟಿದ್ದಾರೆ. ಯೂಟಿವಿ ಸಹ ಈ ಮೊತ್ತವನ್ನು ಕೊಡಲು ಮುಂದೆ ಬಂದಿದೆ. ಒಟ್ಟು ರು.80 ಕೋಟಿ ವೆಚ್ಚದಲ್ಲಿ ಗುಜಾರಿಷ್ ಚಿತ್ರವನ್ನು ನಿರ್ಮಿಸಲಾಗುತ್ತಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada