»   » ನನಸಾದ ಅಮಿತಾಬ್ ಬಚ್ಚನ್ ಕನಸು

ನನಸಾದ ಅಮಿತಾಬ್ ಬಚ್ಚನ್ ಕನಸು

Posted By: Super
Subscribe to Filmibeat Kannada
Amitabh Bachchan
ಬಾಲಿವುಡ್ ನ ಮೇಘಾಸ್ಟಾರ್ ಅಮಿತಾಬ್ ಬಚ್ಚನ್ ಅವರು ಪತ್ರಕರ್ತನಾಗಬೇಕೆಂಬ ಬಹುದಿನದ ಕನಸೊಂದು ಈಡೇರಿದೆ. ಬಿಡುಗಡೆಗೆ ಸಿದ್ದಗೊಂಡಿರುವ 'ರಣ್' ಚಿತ್ರದಲ್ಲಿ ಅವರು ಪತ್ರಕರ್ತನ ಪಾತ್ರದಲ್ಲಿ ಅಭಿನಯಿಸಿರುವುದು ನನಗೆ ಖುಷ ತಂದಿದೆ ಎಂದು ಅಮಿತಾಬ್ ಹೇಳಿದ್ದಾರೆ.

70 ದಶಕ ತುತ್ತಿಗಾಗಿ ಪರದಾಡುತ್ತಿರುವ ಸಮಯವದು. ದೂರ ಉತ್ತರ ಪ್ರದೇಶದ ಹಳ್ಳಿಯೊಂದರಿಂದ ಹೊಟ್ಟೆಪಾಡಿಗಾಗಿ ಉದ್ಯೋಗ ಅರಸಿ ಮುಂಬೈಗೆ ಬಂದು ಸೇರಿದೆ. ಬಾಲಿವುಡ್ ನಲ್ಲಿ ನಟಿಸಬೇಕು ಎಂಬ ಮಹಾದಾಸೆ ಇತ್ತಾದರೂ ಆರಂಭದ ದಿನಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿದೆ. ಈ ಸಂದರ್ಭದಲ್ಲಿ ನನಗೆ ನಾನೇಕೆ ಪತ್ರಕರ್ತವಾಗಬಾರದು ಎಂದು ಪ್ರಶ್ನಿಸಿಕೊಂಡಿದ್ದು ಇದೆ. ನಂತರ ದಿನಗಳಲ್ಲಿ ಬಾಲಿವುಡ್ ನಲ್ಲಿ ಕೈತುಂಬ ಕೆಲಸ ಸಿಕ್ಕಿತು. ಇದರಿಂದಾಗಿ ಪತ್ರಕರ್ತನಾಗಬೇಕು ಎಂಬ ನನ್ನ ಕನಸು ಹಾಗೆ ಉಳಿಯಿತು ಎಂದು ಅಮಿತಾಬ್ ವಿವರಿಸಿದರು.

ಆದರೆ, ರಾಂಗೋಪಾಲ್ ವರ್ಮಾ ಅವರ ನಿರ್ದೇಶನದ ರಣ್ ಚಿತ್ರದಲ್ಲಿ ಪತ್ರಕರ್ತನ ಪಾತ್ರ ನಿರ್ವಹಿಸಿರುವೆ. ಇದರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಪತ್ರಕರ್ತನ ಕೆಲಸ ತಂಬಾ ಸವಾಲು ಹಾಗೂ ಒತ್ತಡದಿಂದ ಕೂಡಿರುತ್ತದೆ. ಇದರ ಬಗ್ಗೆ ನನಗೆ ಸಂಪೂರ್ಣ ಅರಿವಾಗಿದ್ದು, ರಣ್ ಚಿತ್ರದ ಚಿತ್ರೀಕರದ ಸಮಯದಲ್ಲಿ. ಬಹುದಿನದಿಂದ ಕನಸಾಗಿದ್ದ ಕೆಲಸವನ್ನು ಕಟ್ಟಿಕೊಟ್ಟ ರಾಂಗೋಪಾಲ್ ವರ್ಮಾ ಅವರಿಗೆ ನನ್ನ ಅಭಿನಂದನೆಗಳು ಎಂದು ಅಮಿತಾಬ್ ಹೇಳಿದರು.

ದೇಶದ ಪ್ರಮುಖ ಪತ್ರಿಕೋದ್ಯಮಿಗಳು ಹಾಗೂ ದೇಶದ ರಾಜಕೀಯ ಬದಲಾವಣೆಗಳ ಕುರಿತಾದ ಈ ಚಿತ್ರದಲ್ಲಿ ಕನ್ನಡದ ನಟ ಸುದೀಪ್ಅವರು ಅಮಿತಾಬ್ ಅವರ ಮಗನಾಗಿ ನಟಿಸುತ್ತಿದ್ದಾರೆ.

(ಏಜೆನ್ಸೀಸ್)

English summary
He may have taken pot shots at media time and again in his blog but megastar Amitabh Bachchan had once dreamt of becoming a journalist himself. And the actor gets to fulfill his long cherished dream in the upcoming film 'Rann', which sees him in the role of a media honcho

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X