»   » ಧೋನಿ ದಿಢೀರ್ ಮದುವೆಗೆ ಕಾರಣ ಜೋತಿಷ್ಯವಲ್ಲ ಗುರು!

ಧೋನಿ ದಿಢೀರ್ ಮದುವೆಗೆ ಕಾರಣ ಜೋತಿಷ್ಯವಲ್ಲ ಗುರು!

Posted By:
Subscribe to Filmibeat Kannada

ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ತಾರಾತುರಿಯಲ್ಲಿ ಮದುವೆಯಾಗಿದ್ದು ಯಾಕೆ? ಇದಕ್ಕೆ ಜೋತಿಷ್ಯ ಕಾರಣವೆ? ಮುಂದಿನ ದಿನಗಳಲ್ಲಿ ಬಿಡುವಿಲ್ಲದ ಕ್ರಿಕೆಟ್ ಪಂದ್ಯಾವಳಿಗಳಿರುವುದೇ ಇದಕ್ಕೆ ಕಾರಣ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಧೋನಿ ದಿಢೀರ್ ಮದುವೆಗೆ ಇದ್ಯಾವುದೂ ಕಾರಣವಲ್ಲ ಎಂಬ ಮಹತ್ವದ ಸಂಗತಿ ಬಹಿರಂಗವಾಗಿದೆ!

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಡುವಿನ ಕಣ್ಣಾಮುಚ್ಚಾಲೆಯೇ ಧೋನಿ ದಿಢೀರ್ ಮದುವೆಯಾಗಲು ಕಾರಣ ಎನ್ನಲಾಗಿದೆ. ಅಷ್ಟೆ ಅಲ್ಲದೆ ಬಾಲಿವುಡ್ ನ ಹಲವಾರು ಮಂದಿ ನಟಿಯರೊಂದಿಗೆ ಧೋನಿ ಕಾಣಿಸಿಕೊಳ್ಳುತ್ತಿದ್ದರು. ವಿಷಯ ಗಂಭೀರವಾಗುವುದಕ್ಕೂ ಮುನ್ನ ಧೋನಿಯನ್ನು ಗೃಹಸ್ಥಾಶ್ರಮಕ್ಕೆ ಸೇರಿಸಬೇಕು ಎಂದು ಅವರ ಮನೆಯವರು ತೀರ್ಮಾನಿಸಿದ್ದರು.

ಇದರ ಪರಿಣಾಮವೆ ಸಾಕ್ಷಿ ಸಿಂಗ್ ರಾವತ್ ಜೊತೆಗೆ ಸಪ್ತಪದಿ. ರಾತ್ರೋರಾತ್ರಿ ಧೋನಿಗೆ ಮದುವೆ ಶಾಸ್ತ್ರ ಮಾಡಿ ಮುಗಿಸಿದರು. ಡೆಹ್ರಾಡೂನ್ ನಲ್ಲಿ ನಡೆದ ಮದುವೆ ಸಮಾರಂಭಕ್ಕೆ ಬೆರಳೆಣಿಕೆಯಷ್ಟು ಮಂದಿಯನ್ನು ಮಾತ್ರ ಆಹ್ವಾನಿಸಲಾಗಿತ್ತು. ಸಾಕ್ಷಿ ಹಾಗೂ ಧೋನಿ ಮನೆಯವರು ಗುಟ್ಟಾಗಿ ಮದುವೆ ಮಾಡಿ ಮುಗಿಸಿದ್ದು ಮಾಧ್ಯಮಗಳಲ್ಲಿ ರಟ್ಟಾಯಿತು.

ಅದರಲ್ಲೂ ಮುಖ್ಯಮಾಗಿ ದೀಪಿಕಾ ಜೊತೆ ಕಾಣಿಸಿಕೊಂಡ ಧೋನಿ ಸಾಕಷ್ಟು ಸುದ್ದಿ ಮಾಡಿದ್ದರು. ದಿನಕ್ಕೊಬ್ಬಳು ಬಾಲಿವುಡ್ ನಟಿಯ ಜೊತೆ ಧೋನಿ ಕಾಣಿಸಿಕೊಳ್ಳುತ್ತಿದ್ದ. ಮಗ ದಾರಿ ತಪ್ಪುತ್ತಿದ್ದಾನೆ ಎಂದು ತಿಳಿದ ಧೋನಿ ಮನೆಯವರು ದಿಢೀರ್ ಅಂತ ಮದುವೆ ಮಾಡಿ ಮುಗಿಸಿದ್ದಾರೆ.

ಭಾರತದ ಕ್ರಿಕೆಟ್ ತಂಡದ ನಾಯಕನ ಮದುವೆ ಎಂದರೆ ಅದ್ದೂರಿಯಾಗಿ ನಡೆಯುತ್ತದೆ ಎಂಬ ಊಹೆ ಸಹಜವಾಗಿ ಎಲ್ಲರಿಗೂ ಇರುತ್ತದೆ. ಹೀಗೆ ಏಕಾಏಕಿ ದಿಢೀರ್ ಮದುವೆ ನಡೆದು ಹೋದರೆ ಎಂಥವರಿಗೂ ಅನುಮಾನ ಬಾರದೆ ಇರದು ಅಲ್ಲವೆ? ಎಂಬ ಪ್ರಶ್ನೆಗಳು ಹಲವರನ್ನು ಕಾಡುತ್ತಿವೆ. ನೀವೇನಂತೀರಾ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada