»   » ವಿಚಿತ್ರ ಕೀಟ ಗುಳುಂ ಮಾಡಿದ ಬಾಲಿವುಡ್ ತಾರೆ ಅಸಿನ್

ವಿಚಿತ್ರ ಕೀಟ ಗುಳುಂ ಮಾಡಿದ ಬಾಲಿವುಡ್ ತಾರೆ ಅಸಿನ್

Posted By:
Subscribe to Filmibeat Kannada

ಮಲ್ಲು ಬೆಡಗಿ ಅಸಿನ್ ತೊಟ್ಟುಂಕಲ್ ಮಾಡಬಾರದ ಕೆಲಸವೊಂದನ್ನು ಮಾಡಿದ್ದಾರೆ! ಈ ಬಾರಿ ಆಕೆ ವಿಚಿತ್ರ ಸಾಹಸವನ್ನು ಮಾಡುವ ಮೂಲಕ ಸುದ್ದಿ ಮಾಡಿದ್ದಾರೆ. ವಿಚಿತ್ರ ಕೀಟವನ್ನು ಬಾಯಿಗೆ ಹಾಕಿಕೊಂಡು ಗುಳುಂ ಮಾಡಿ ಆಕೆಯ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದ್ದಾರೆ. ಇದೆಲ್ಲಾ ಆಗಿದ್ದು 'ರೆಡಿ' ಚಿತ್ರೀಕರಣದವೇಳೆ.

ಈ ಚಿತ್ರದ ಚಿತ್ರೀಕರಣ ಥೈಲ್ಯಾಂಡ್‌ನಲ್ಲಿ ಸರಾಗವಾಗಿ ನಡೆಯುತ್ತಿತ್ತಂತೆ. ಚಿತ್ರದ ನಾಯಕ ನಟ ಸಲ್ಮನ್ ಖಾನ್ ಅದೂ ಇದೂ ಮಾತನಾಡುತ್ತಾ ಅಲ್ಲೆ ತೆವಳುತ್ತಾ ಹೋಗುತ್ತಿದ್ದ ಕೀಟವನ್ನು ತೋರಿಸಿ ಇದನ್ನು ತಿನ್ನಲು ಹೇಳಿದರಂತೆ. ಈ ಚಾಲೆಂಜನ್ನು ಸೀರಿಯಸ್ಸಾಗಿ ತೆಗೆದುಕೊಂಡ ಅಸಿನ್ ಕೂಡಲೆ ಆ ಕೀಟವನ್ನು ಹಿಡಿದು ಬಾಯಿಗೆ ಹಾಕಿಕೊಂಡು ಗುಳುಂ ಮಾಡಿದ್ದಾಗಿ ಸುದ್ದಿ.

ಒಟ್ಟಿನಲ್ಲಿ ಸಲ್ಲು ಹುಡುಗಾಟಕ್ಕೆ ಮಲ್ಲು ಬೆಡಗಿ ಮರುಳಾಗಿ ಇಷ್ಟೊಂದು ಸೀರಿಯಸ್ಸಾಗಿ ತೆಗೆದುಕೊಳ್ಳುವುದೇ ಎಂಬ ಮಾತುಗಳು ಬಾಲಿವುಡ್ ವಲಯದಲ್ಲಿ ಕೇಳಿಬರುತ್ತಿವೆ. ಅಂದಹಾಗೆ ಇದು ತೆಲುಗಿನ 'ರೆಡಿ' ಚಿತ್ರದ ರೀಮೇಕ್. ಅನೀಸ್ ಬಜ್ಮಿ ಆಕ್ಷನ್, ಕಟ್ ಹೇಳುತ್ತಿರುವ ಈ ಚಿತ್ರ ಜೂನ್ 3ರಂದು ತೆರೆಕಾಣಲಿದೆ.

English summary
Asin Thottumkal is known for daring attitude.The actress has proved again. ow, what we hear is that she has eaten an insect, when Salman Khan challenged her to do so during the shooting of Ready in Thailand.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada