»   » ಐಟಂ ಗರ್ಲ್ ಪಾತ್ರದಲ್ಲಿ ನಟಿ ಕತ್ರಿನಾ ಕೈಫ್

ಐಟಂ ಗರ್ಲ್ ಪಾತ್ರದಲ್ಲಿ ನಟಿ ಕತ್ರಿನಾ ಕೈಫ್

Posted By:
Subscribe to Filmibeat Kannada

ಬಾಲಿವುಡ್ ಹಾಟ್ ಬ್ಯೂಟಿ ಕತ್ರಿನಾ ಕೈಫ್ ಪಡ್ಡೆಗಳಿಗೆ ರಸದೌತಣ ನೀಡಲು ಸಜ್ಜಾಗಿದ್ದಾರೆ. ತನ್ನ ಮುಂದಿನ ಚಿತ್ರದ ಐಟಂ ಸಾಂಗ್ ನಲ್ಲಿ ಕಾಣಿಸಿಕೊಳ್ಳಲು ಕತ್ರಿನಾ ತಯಾರಿ ನಡೆಸಿದ್ದಾರೆ. ಫರಾ ಖಾನ್ ನಿರ್ದೇಶನದ 'ತೀಸ್ ಮಾರ್ ಖಾನ್' ಚಿತ್ರದಲ್ಲಿ ಐಟಂ ಬೆಡಗಿಯಾಗಿ ಕತ್ರಿನಾ ದರ್ಶನ ನೀಡುವುದು ಪಕ್ಕಾ ಆಗಿದೆ.

ತನ್ನ ವೃತ್ತಿ ಜೀವನದಲ್ಲಿ ಕತ್ರಿನಾ ಕೈಫ್ ಐಟಂ ಸಾಂಗ್ ನಲ್ಲಿ ನಟಿಸುತ್ತಿರುವುದು ಇದೇ ಮೊದಲು. ಈ ಚಿತ್ರದ ನಿರ್ಮಾಪಕರು ಶಿರೀಷ್ ಕುಂದರ್. 'ಬೂಮ್' ಚಿತ್ರದಲ್ಲಿ ಸೂಪರ್ ಮಾಡೆಲ್ ಆಗಿ, 'ಅಜಬ್ ಪ್ರೇಮ್ ಕಿ ಘಜಬ್ ಕಹಾನಿ'ಯ ಪಕ್ಕದ ಮನೆ ಹುಡುಗಿಯಾಗಿ 'ನ್ಯೂಯಾರ್ಕ್' ಚಿತ್ರದಲ್ಲಿ ಮಗುವಿನ ತಾಯಿಯಾಗಿ ಕತ್ರಿನಾ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿದ್ದರು.ಈಗ ಐಟಂ ಹುಡುಗಿಯಾಗಿ ಕತ್ರಿನಾ ಚಿತ್ರರಸಿಕರ ಹೃದಯಕ್ಕೆ ಕಿಚ್ಚು ಹಚ್ಚಲಿದ್ದಾರೆ.

ಮಾರ್ಚ್ 1ರಿಂದ ಚಿತ್ರೀರಣ ನಡೆಯಲಿದ್ದು ಡಿಸೆಂಬರ್ 24ಕ್ಕೆ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಚಿತ್ರದ ಐಟಂ ಹಾಡಿಗಾಗಿ ಬಹಳಷ್ಟು ಮಂದಿಯನ್ನು ಹುಡುಕಿದೆವು. ಆದರೂ ಈ ಹಾಡಿಗೆ ನ್ಯಾಯ ಒದಗಿಸಲು ಕತ್ರಿನಾರಿಂದ ಮಾತ್ರ ಸಾಧ್ಯ ಅನ್ನಿಸಿದ್ದರಿಂದ ಅವರನ್ನೇ ಆಯ್ಕೆ ಮಾಡಿಕೊಂಡೆವು ಎನ್ನುತ್ತಾರೆ ಕುಂದರ್.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada