»   » ಆಯೇಷಾ ಟಕಿಯಾ 'ಪಾಠಶಾಲಾ'

ಆಯೇಷಾ ಟಕಿಯಾ 'ಪಾಠಶಾಲಾ'

Posted By:
Subscribe to Filmibeat Kannada

ಪ್ರಸ್ತುತ ಶಿಕ್ಷಣ ವ್ಯವಸ್ಥೆ ಹೇಗಿದೆ? ಎಂದು ಯಾರನ್ನಾದರೂ ಪ್ರಶ್ನಿಸಿದರೆ. ಪಠ್ಯ ಪುಸ್ತಕಗಳೊಂದಿಗೆ ಕುಸ್ತಿ ಮಾಡುತ್ತಾ...ಸ್ಫರ್ಧೆಯ ಹೆಸರಿನಲ್ಲಿ ಮಕ್ಕಳ ಬಾಲ್ಯವನ್ನು ಕಿತ್ತುಕೊಳ್ಳುವ ರೀತಿಯಲ್ಲಿದೆ ಎಂಬ ಉತ್ತರ ಬರುತ್ತದೆ. ಹೀಗಿದ್ದೂ ಯಾರೂ ಈ ಶಿಕ್ಷಣ ವ್ಯವಸ್ಥೆಯ ವಿರುದ್ಧ ಹೋರಾಡುತ್ತಿಲ್ಲ. ಅವರ ಮಕ್ಕಳನ್ನು ಅಂತಹ ಪಾಠಶಾಲೆಗೆ ಸೇರಿಸುತ್ತಿದ್ದಾರೆ.

ಹಾಗಾಗಿಯೇ ಇಂದಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ ಚಿತ್ರವೊಂದನ್ನು ತೆಗೆಯಬೇಕೆಂದು 'ಪಾಠಶಾಲಾ'ಕೈಗೆತ್ತಿಕೊಂಡೆ ಎನ್ನುತ್ತಿದ್ದಾರೆ ಬಾಲಿವುಡ್ ನಿರ್ದೇಶಕ ಮಿಲಿಂದ್ ಕೆ.ಈ ಚಿತ್ರವನ್ನು ಅವರು ನೃತ್ಯ ನಿರ್ದೇಶಕ ಅಹ್ಮದ್ ಖಾನ್ ಹಾಗೂ ಸೈರಾ ಅವರೊಂದಿಗೆ ನಿರ್ಮಿಸುತ್ತಿದ್ದಾರೆ. ಚಿತ್ರದ ನಾಯಕ ನಟ ಶಾಹೀದ್ ಕಪೂರ್. ಆಯೇಷಾ ಟಕಿಯಾ, ನಾನಾ ಪಾಟೇಕರ್ ಚಿತ್ರದಉಳಿದ ತಾರಾಗಣದಲ್ಲಿದ್ದಾರೆ. ಏಪ್ರಿಲ್ 16ರಂದು ಚಿತ್ರ ಬಿಡುಗಡೆಯಾಗಲಿದೆ.

ಚಿತ್ರದ ನಿರ್ಮಾಪಕ ಮಾತನಾಡುತ್ತಾ, ಪ್ರಸ್ತುತ ಶಿಕ್ಷಣ ವ್ಯವಸ್ಥೆಯಿಮ್ದ ವಿದ್ಯಾರ್ಥಿಗಳು ಹೇಗೆ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂಬ ಅಂಶವನ್ನು ಚಿತ್ರದಲ್ಲಿ ತೋರಿಸಿದ್ದೇವೆ. ಇದರಿಂದ ಹೊರಬರಲು ಏನು ಮಾಡಬೇಕು ಎಂಬ ಕುರಿತು ಚಿತ್ರದಲ್ಲಿ ವೈವಿಧ್ಯಮಯವಾಗಿ ತೋರಿಸುವ ಪ್ರಯತ್ನವನ್ನು ಮಾಡಿದ್ದೇವೆ ಎನ್ನುತ್ತಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada