»   » ಜೂ.19ರಂದು ಗೃಹಸ್ಥಾಶ್ರಮಕ್ಕೆ ಮನಿಷಾ ಕೋಯಿರಾಲ

ಜೂ.19ರಂದು ಗೃಹಸ್ಥಾಶ್ರಮಕ್ಕೆ ಮನಿಷಾ ಕೋಯಿರಾಲ

Posted By:
Subscribe to Filmibeat Kannada

ನೇಪಾಳಿ ಸುಂದರಿ ಮನಿಷಾ ಕೋಯಿರಾಲ ಜೂನ್ 19ಕ್ಕೆ ಗೃಹಸ್ಥಾಶ್ರಮಕ್ಕೆ ಪ್ರವೇಶಿಸಲಿದ್ದಾರೆ. ನೇಪಾಳ ಮೂಲದ ಉದ್ಯಮಿ ಸಾಮ್ರಾಟ್ ಧಹ್ಲ್ ಎಂಬುವವರನ್ನು ಮನಿಶಾ ವರಿಸಲಿದ್ದಾರೆ. ತಮ್ಮ ಚೊಚ್ಚಲ ಮಲಯಾಳಂ ಚಿತ್ರ 'ಎಲಕ್ಟ್ರಾ' ಚಿತ್ರೀಕರಣದಲ್ಲಿ ಮನಿಷಾ ಸದ್ಯಕ್ಕೆ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಈ ಚಿತ್ರದ ಚಿತ್ರೀಕರಣ ಕೊಚ್ಚಿಯಲ್ಲಿ ನಡೆಯುತ್ತಿದೆ.

ಈ ತಿಂಗಳಾಂತ್ಯಕ್ಕೆ ಚಿತ್ರ ಸಂಬಂಧಿ ಕೆಲಸಗಳನ್ನು ಮನೀಷಾ ಮುಗಿಸಿಕೊಂಡು ಹಸೆಮಣೆ ಏರಲು ಸನ್ನದ್ಧರಾಗಿದ್ದಾರೆ. ಕೊಚ್ಚಿಯಿಂದ ಆದಷ್ಟು ಬೇಗನೆ ನೇಪಾಳಕ್ಕೆ ಹಿಂತಿರುಗುವ ಸಿದ್ಧತೆಯಲ್ಲಿದ್ದಾರೆ. ನೇಪಾಳದ ರಾಜ ಕುಟುಂಬದಿಂದ ಬಂದ ಮನಿಷಾ ಮದುವೆ ಅದ್ದೂರಿಯಾಗಿ ನೆರವೇರಲಿದೆ ಎನ್ನುತ್ತವೆ ಮೂಲಗಳು.

ನೇಪಾಳಿ ಸಂಪ್ರದಾಯದಂತೆ ಮನಿಷಾ ಮದುವೆಯಾಗಲಿದ್ದಾರೆ. ಈ ಮದುವೆ ಒಂದರ್ಥದಲ್ಲಿ ಅರ್ಧ ಪ್ರೇಮ ವಿವಾಹ ಉಳಿದರ್ಧ ಗುರು ಹಿರಿಯರು ನಿಶ್ಚಯಿಸಿದ ಮದುವೆ ಎಂಬ ಮಾತನ್ನು ಮನೀಶಾ ಒಪ್ಪುತ್ತ್ತಾರೆ. ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ. ಹಾಗಾಗಿ ಇಬ್ಬರೂ ಮದುವೆಯಾಗುತ್ತಿದ್ದೇವೆ ಎನ್ನುತ್ತಾರೆ ಮನಿಷಾ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada