»   » ಬಿಂಕಬಿಟ್ಟು ಆಟೋ ಹತ್ತಿದ ಬಿಂಕದ ಸಿಂಗಾರಿ ಬಿಪಾಶಾ

ಬಿಂಕಬಿಟ್ಟು ಆಟೋ ಹತ್ತಿದ ಬಿಂಕದ ಸಿಂಗಾರಿ ಬಿಪಾಶಾ

Posted By:
Subscribe to Filmibeat Kannada

ಸಾಮಾನ್ಯವಾಗಿ ಸಿನಿಮಾ ತಾರೆಗಳು ಆಟೋ ಹತ್ತುವುದು ಬಲು ಅಪರೂಪದ ಸಂಗತಿ. ಒಂದು ವೇಳೆ ಹತ್ತಿದರೂ ಆಟೋ ಚಾಲಕ ಇಳಿಸದೆ ಸೀದಾ ತನ್ನ ಮನೆಗೆ ಕರೆದೊಯ್ಯುವ ಸಾಧ್ಯತೆಗಳಿವೆ. ಆದರೂ ಬಂಗಾಳಿ ಸೆಕ್ಸ್ ಬಾಂಬ್ ಬಿಪಾಶಾ ಬಸು ಆಟೋ ಹತ್ತಿ ತಾನು ತಲುಪಬೇಕಾದ ಸ್ಥಳಕ್ಕೆ ಸುರಕ್ಷಿತವಾಗಿ ತಲುಪಿದ್ದಾರೆ.

ಈಕೆ ಪ್ರಯಾಣಿಸುತ್ತಿದ್ದ ಕಾರು ಅರ್ಧ ದಾರಿಯಲ್ಲೆ ಕೈ ಕೊಟ್ಟಿದೆ. ಇನ್ನು ರಿಪೇರಿ ಆಗುವವರೆಗೂ ಕಾದರೆ ಪ್ರಯೋಜನವಿಲ್ಲ ಎಂದು ಕಾರು ಇಳಿದು ಆಟೋ ಹತ್ತಿಬಿಟ್ಟಿದ್ದಾರೆ. ಜೊತೆಗೆ ಆಕೆಯ ಜಿಮ್ ಟ್ರೈನರ್ ಕೂಡ ಇದ್ದರು ಅನ್ನಿ.ಮುಂಬೈ ಟ್ರಾಫಿಕ್‌ ಕಿರಿಕಿರಿಯಿಂದ ಕಳಚಿಕೊಳ್ಳಲು ಆಟೋ ಹೇಳಿ ಮಾಡಿಸಿದ ಗಾಡಿ ಎಂಬುದು ಬಿಪಾಶಾಳ ಕಾಮೆಂಟ್.

ಈ ಹಿಂದೆ ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಕೂಡ ಆಟೋದಲ್ಲಿ ಪ್ರಯಾಣಿಸಿ ಅಚ್ಚರಿ ಮೂಡಿಸಿದ್ದರು. ಈಗ ಬಿಪಾಶಾ ಕೂಡ ಪ್ರಚಾರಕ್ಕಾಗಿ ಅಲ್ಲದಿದ್ದರೂ ಅನಿವಾರ್ಯತೆಯ ದೃಷ್ಟಿಯಿಂದ ಬಿಂಕ ಬಿಟ್ಟು ಆಟೋ ಹತ್ತಿದ್ದಾರೆ ಅಷ್ಟೆ ಇನ್ನೇನು ವಿಶೇಷವಿಲ್ಲ. (ಏಜೆನ್ಸೀಸ್)

English summary
Recently the bollywood actress Bipasha Basu and her gym trainer was spotted in an auto rickshaw. Sources say Bips was getting late and her car driver had not yet arrived. Since she didn't want to waste time, she called an auto, hopped into it.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada