»   » ಆರ್ಥಿಕ ಬಿಕ್ಕಟ್ಟಿನಲ್ಲೂ ಬಾಲಿವುಡ್ ಜೂಜಾಟ

ಆರ್ಥಿಕ ಬಿಕ್ಕಟ್ಟಿನಲ್ಲೂ ಬಾಲಿವುಡ್ ಜೂಜಾಟ

By: * ನಿಸ್ಮಿತಾ
Subscribe to Filmibeat Kannada
ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಎಷ್ಟೊ ದೊಡ್ಡ ದೊಡ್ಡ ಬ್ಯಾನರ್ ಸಿನಿಮಾಗಳು ಶೂಟಿಂಗ್ ಗೆ ಪ್ಯಾಕ್ ಅಪ್ ಹೇಳಿ ಪ್ರಾಜೆಕ್ಟ್ ಮುಂದೂಡಿದ್ದು ಈಗ ಹಳೆ ಸುದ್ದಿ. ಇದಕ್ಕೆ ಪೂರಕವಾಗಿ ಸಾಲು ಸಾಲಾಗಿ ಕಳಪೆ ಚಿತ್ರಗಳು ತೆರೆಯ ಮೇಲೆ ಹೀಗೆ ಬಂದು ಹೋಗಲಾರಂಭಿಸಿರುವುದು ಬಾಲಿವುಡ್ ಮಂದಿಗೆ ಚಿಂತೆಯ ವಿಷಯವಾಗಿದೆ.

ಮುಂಬೈ ಭಯೋತ್ಪಾದನೆ ದಾಳಿಯ ನಂತರ ಮತ್ತೆ ಸಹಜ ಸ್ಥಿತಿಗೆ ಕನಸಿನ ನಗರಿ ಮುಂಬೈ ಮರಳುತ್ತಿರುವುದು ಸಿನಿಮಾ ಮಂದಿಗೆ ಆಶಾದಾಯಕವಾಗಿದೆ ತೋರಿದರು. ಥಿಯೇಟರ್ ನಲ್ಲಿ ಯಾವ ಸಿನಿಮಾ ಕೂಡ ವಾರದ ಮೇಲೆ ನಿಲ್ಲುತ್ತಿಲ್ಲವಂತೆ. ಪ್ರೇಕ್ಷಕರ ಸಂಖ್ಯೆ ಇಳಿಮುಖವಾಗಿ ಪ್ರದರ್ಶನ ರದ್ದಾದ ಘಟನೆಗಳು ನಡೆದಿದೆ. ಇದೆಲ್ಲದರ ನಡುವೆ ಮುಂಬರುವ ವಾರದಲ್ಲಿ ಸುಮಾರು 225 ಕೋಟಿ ರು ನಷ್ಟು ಹಣ ಹೂಡಿಕೆಯಳ್ಳ ಚಿತ್ರಗಳ ಜೊತೆಗೆ ಜೂಜಾಟವಾಡುತ್ತಿದೆ ಮುಂಬೈ ಸಿನಿ ಪ್ರಪಂಚ.

ಕಳೆದ ನಾಲ್ಕೈದು ವಾರಗಳಲ್ಲಿ ತೆರೆಕಂಡ ಓಯೆ ಲಕ್ಕಿ ಲಕ್ಕಿ ಓಯೆ, ಸಾರಿ ಭಾಯ್, ಮಹಾರಥಿ, ದಿಲ್ ಕಬಡ್ಡಿ, ಮೀರಾ ಭಾಯ್ ನಾಟ್ ಔಟ್(ಅನಿಲ್ ಕುಂಬ್ಳೆ ನಟನೆಯ), ಓ ಮೈ ಗಾಡ್ ಚಿತ್ರಗಳು ಇನ್ನಿಲ್ಲದಂತೆ ನೆಲಕಚ್ಚಿವೆ. ಇರೋದರಲ್ಲಿ ದೋಸ್ತಾನಾ ಸ್ವಲ್ಪ ಗಳಿಕೆಯತ್ತ ಹೆಜ್ಜೆ ಹಾಕಿದೆ. ಯುವರಾಜ ಕೂಡ ಸಾಧಾರಣ ಗತಿಯಲ್ಲಿ ಸಾಗಿದೆ.

ಖಾನ್ ಗಳ ದರ್ಬಾರ್, ಅಕ್ಷಯ್ ನ ಕಮಾಲ್ ಬಾಲಿವುಡ್ ಅನ್ನು ರಕ್ಷಿಸುವುದು ಎಂದು ನಂಬಲಾಗಿದೆ. ಸಲ್ಮಾನ್ ಖಾನ್ ನ ಯುವರಾಜ ಸ್ವಲ್ಪ ಚೇತರಿಕೆ ನೀಡಿದರೂ ಮುಂಬರುವ ಶಾರುಖ್ ನ ರಬ್ ನೆ ಬನಾದಿ ಜೋಡಿ, ಅಮೀರ್ ನ ಘಜಿನಿ, ಅಕ್ಷಯ್ ನ ಚಾಂದಿನಿ ಚೌಕ್ ಟು ಚೈನಾ ಮೇಲೆ ಎಲ್ಲರ ನಿರೀಕ್ಷೆಯ ಕಣ್ಣುಗಳು ನೆಟ್ಟಿವೆ. ಅಕ್ಷಯ್ ಅವರ ಜಂಬೋ ಅನಿಮೇಷನ್ ಚಿತ್ರವನ್ನು ಕೂಡ ಚಿತ್ರಪ್ರೇಮಿಗಳು ಎದುರು ನೋಡುತ್ತಿದ್ದಾರೆ

ಈ ಚಿತ್ರಗಳು ಅಕಸ್ಮಾತ್ ತೋಪೆದ್ದರೆ ನಿಜಕ್ಕೂ ಬಾಲಿವುಡ್ ಮಂದಿಗೆ ಭಾರಿ ಹೊಡೆತ ಗ್ಯಾರಂಟಿ. 225 ಕೋಟಿ ರು ಜತೆಗೆ ಶಾರುಖ್ , ಅಮೀರ್ ಗೆ ಪ್ರತಿಷ್ಠೆಗೆ ದಕ್ಕೆ ಉಂಟಾಗುವುದಂತೂ ಖಂಡಿತ. ಇನ್ನೊಂದು ವಿಷ್ಯ ರಬ್ ನೆ ಬನಾದಿ ಜೋಡಿಯ ಅನುಷ್ಕಾ, ಚಾಂದಿನಿ ಚೌಕ್ ನ ದೀಪಿಕಾ ಬೆಂಗಳೂರು ಮೂಲದವರು ಎಂಬುದು ಸಿನಿರಸಿಕರಿಗೆ ಗೊತ್ತೇ ಇದೆ. ಇವರಿಬ್ಬರ ವೃತ್ತಿ ಜೀವನಕ್ಕೆ ಈ ಚಿತ್ರಗಳು ಯಶಸ್ವಿಯಾಗುವುದು ಮುಖ್ಯ. ಎಲ್ಲಕ್ಕಿಂತ ಮುಖ್ಯವಾಗಿ ಸಿನಿ ಕಾರ್ಮಿಕರಿಗೆ ಮುಂಬೈ ಸಿನಿಲೋಕದಲ್ಲಿ ಜೀವನ ಚಕ್ರ ಸರಾಗವಾಗಿ ಸಾಗಿಸಬೇಕಾದರೆ ಚಿತ್ರಗಳು ಹಿಟ್ ಆಗಲೇ ಬೇಕು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada