»   »  ಷಾಹಿದ್, ಸಾನಿಯಾ ನಡುವಿನ ಆಟ ಶುರು!

ಷಾಹಿದ್, ಸಾನಿಯಾ ನಡುವಿನ ಆಟ ಶುರು!

Subscribe to Filmibeat Kannada
Shahid-Sania, the match is on!
ಮೂಗುನತ್ತು ಸುಂದರಿ, ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಹಿಂದೆ ಬಾಲಿವುಡ್ ನಟ ಷಾಹಿದ್ ಕಪೂರ್ ಬಿದ್ದಿದ್ದಾನೆ. ಹೀಗಂತ ಬಾಲಿವುಡ್ ನಲ್ಲಿ ಗುಲ್ಲೋ ಗುಲ್ಲು.ಕರೀನಾ ಕಪೂರ್ ಕೈಕೊಟ್ಟ ನಂತರ ಷಾಹಿದ್ ಕಣ್ಣು ಸಾನಿಯಾ ಮೇಲೆ ಬಿದ್ದೆದೆ ಎಂದು ಇಡೀ ಹಿಂದಿ ಚಿತ್ರರಂಗವೆ ಅಲಲಾ ಎನ್ನುತ್ತಿದೆ.

ಇಷ್ಟೆಲ್ಲಾ ವದಂತಿಗಳು ಹುಟ್ಟಿಕೊಳ್ಳಲು ಕಾರಣವೂ ಇದೆ. ಇವರಿಬ್ಬರೂ ಇತ್ತೀಚೆಗೆ ಬೆಂಗಳೂರಿನ ಒಂದು ಹೋಟೆಲ್ ನಲ್ಲಿ ಒಟ್ಟಿಗೆ ಇದ್ದರಂತೆ. ಅದು ಉದ್ದೇಶಪೂರ್ವಕವಾಗಿ ಅಲ್ಲ ಅದೊಂದು ಆಕಸ್ಮಿಕವಂತೆ. ಅದು ಹೇಗೋ ಇವರಿಬ್ಬರೂ ಮಾಧ್ಯಮದವರ ಕಣ್ಣಿಗೆ ಬಿದ್ದು ಇಷ್ಟೆಲ್ಲ ಎಡವಟ್ಟಾಗಿದೆಯಂತೆ. ಷಾಹಿದ್ ಈಗ ಬೆಂಕಿಯನ್ನು ನಂದಿಸಲು ಮುಂದಾಗಿದ್ದಾರೆ.

ಈ ಅಂತೆ ಕಂತೆಗಳನ್ನು ಪಕ್ಕಕ್ಕಿಟ್ಟರೆ, ಅವರಿಬ್ಬರ ನಡುವೆ ಆತ್ಮೀಯತೆ ಇದೆ ಎಂದು ಸ್ವತಃ ಷಾಹಿದ್ ತಂದೆ ಪಂಕಜ್ ಕಪೂರ್ ಒಪ್ಪಿಕೊಂಡಿದ್ದಾರೆ. ಷಾಹಿದ್ ರ ಕಿಸ್ಮತ್ ಕನೆಕ್ಷನ್ ಎಂಬ ಚಿತ್ರದ ವಿಶೇಷ ಪ್ರದರ್ಶನದಲ್ಲೂ ಸಾನಿಯಾ ಭಾಗವಹಿಸಿದ್ದಂತೆ. ಪ್ರದರ್ಶನ ಮುಗಿದ ಬಳಿಕ ಆಕೆಯನ್ನು ತನ್ನ ಕಾರಿನಲ್ಲಿ ವಿಮಾನ ನಿಲ್ದಾಣದ ತನಕ ಬಿಟ್ಟು ಬಂದಿದ್ದನಂತೆ ಎಂಬ ಗುಸುಗುಸು ಸಹ ಚಾಲ್ತಿಯಲ್ಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada