»   »  ಎಯಿಟ್ ಪ್ಯಾಕ್ ದೇಹಾಕೃತಿಗಾಗಿ ಶಾರುಖ್ ಶ್ರಮ

ಎಯಿಟ್ ಪ್ಯಾಕ್ ದೇಹಾಕೃತಿಗಾಗಿ ಶಾರುಖ್ ಶ್ರಮ

Subscribe to Filmibeat Kannada
Shahrukh to have eight pack abs now
ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಎಯಿಟ್ ಪ್ಯಾಕ್ ದೇಹಾಕೃತಿಗಾಗಿ ಶ್ರಮಿಸುತ್ತಿದ್ದಾರೆ. ಈ ಹಿಂದೆ ಅವರು 'ಓಂ ಶಾಂತಿ ಓಂ' ಚಿತ್ರದಲ್ಲಿ ಸಿಕ್ಸ್ ಪ್ಯಾಕ್ ದೇಹಾಕೃತಿಯಲ್ಲಿ ಕಾಣಿಸಿ ಪ್ರೇಕ್ಷಕರನ್ನು ಆಕರ್ಷಿಸಿದ್ದರು. ಎಯಿಟ್ ಪ್ಯಾಕ್ ದೇಹಾಕೃತಿಗಾಗಿ ಈ ಇಳಿವಯಸ್ಸಿನಲ್ಲಿ ಬಹಳಷ್ಟು ಕಷ್ಟಪಟ್ಟಿರುವುದಾಗಿಯೂ ಅವರು ತಿಳಿಸಿದ್ದಾರೆ.

ಇಷ್ಟಕ್ಕೂ ಶಾರುಖ್ ಎಯಿಟ್ ಪ್ಯಾಕ್ ಗಾಗಿ ಶ್ರಮಿಸುತ್ತಿರುವ ಹಿಂದಿನ ಮರ್ಮವಾದರೂ ಏನು? 'ಗಜನಿ'ಚಿತ್ರಕ್ಕಾಗಿ ಅಮೀರ್ ಖಾನ್ ಎಯಿಟ್ ಪ್ಯಾಕ್ ದೇಹಾಕೃತಿಯನ್ನು ಸಾಧಿಸಿದ್ದ. ಶಾರುಖ್ ರ ಸಿಕ್ಸ್ ಪ್ಯಾಕ್ ದೇಹಾಕೃತಿಯನ್ನು ಎಲ್ಲರೂ ಮರೆತರು. ಹಾಗಾಗಿಯೇ ಈ ಹಾರಾಟ ಹೋರಾಟ ಎಲ್ಲಾ ಎಯಿಟ್ ಪ್ಯಾಕ್ ಗಾಗಿ. ಕೇವಲ ಇದೊಂದೆ ಕಾರಣಕ್ಕೆ ಶಾರುಖ್ ಪ್ರಯತ್ನಿಸುತ್ತಿದ್ದಾರೆ ಎಂದರೆ ತಪ್ಪಾಗುತ್ತದೆ.

ಓಂ ಶಾಂತಿ ಓಂ ಚಿತ್ರದ ನಿರ್ದೇಶಕಿ ಫರಾ ಖಾನ್ ನಿರ್ದೇಶಿಸುತ್ತಿರುವ 'ಹ್ಯಾಪಿ ನ್ಯೂ ಇಯರ್' ಚಿತ್ರಕ್ಕಾಗಿ ಈ ಶ್ರಮ. ಚಿತ್ರದಲ್ಲಿ ಶಾರುಖ್ ಪಾತ್ರ ಆ ರೀತಿ ಇದೆ. ಹಾಗಾಗಿ ಎಯಿಟ್ ಪ್ಯಾಕ್ ದೇಹಾಕೃತಿ ಬೇಕೇ ಬೇಕು ಎಂಬುದು ನಿರ್ದೇಶಕಿ ಫರಾ ಅವರ ವಿವರಣೆ.

ಬಹುಶಃ ಈ ಚಿತ್ರದಲ್ಲಿ ಶಾರುಖ್ ರನ್ನು ಅಂಗಿ ಬಿಚ್ಚಿಸಿ ತೋರಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಶಾರುಖ್ ರನ್ನು ಜಲಪಾತಗಳ ಕೆಳಗೆ ನಿಲ್ಲಿಸಿ ಚಿತ್ರೀಕರಿಸಬೇಕು ಎನ್ನುತ್ತಿದ್ದಾರೆ. ಆದರೆ ನನಗೇನೋ ಅಂಗಿ ಬಿಚ್ಚಿಸಿ ಶಾರುಖ್ ರನ್ನು ತೋರಿಸಬೇಕು ಅನ್ನಿಸುತ್ತಿದೆ ಎನ್ನುತ್ತಾರೆ ಫರಾ.

(ಏಜೆನ್ಸೀಸ್)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada