»   » ಮನಿಷಾ ಕೋಯಿರಾಲ ಮದ್ವೆಯಂತೆ

ಮನಿಷಾ ಕೋಯಿರಾಲ ಮದ್ವೆಯಂತೆ

Subscribe to Filmibeat Kannada

ತೆರೆಮರೆಗೆ ಸರಿದಿರುವ ನೇಪಾಳಿ ಚೆಲುವೆ ಮನಿಷಾ ಕೋಯಿರಾಲಾ ಕಡೆಗೂ ಮದುವೆಯಾಗಲು ನಿರ್ಧರಿಸಿದ್ದಾರೆ. ತನ್ನ ಹಳೆಯ ಪ್ರಿಯತಮ ಆಸ್ಟ್ರೇಲಿಯಾದ ಕ್ರಿಸ್ಟೋಫರ್ ಡೋರಿಸ್ ನನ್ನು ಮನಿಷಾ ವರಿಸಲಿದ್ದಾರೆ. ಸದ್ಯಕ್ಕೆ ಒಬ್ಬರನ್ನೊಬ್ಬರು ಅರಿತುಕೊಳ್ಳಲು ಪ್ಯಾರಿಸ್ ಗೆ ಹಾರಿದ್ದಾರೆ. ಪ್ಯಾರಿಸ್ ಪ್ರಣಯ ಎಲ್ಲಾ ಮುಗಿದ ಬಳಿಕ ಮದುವೆಯಂತೆ.

ಕ್ರಿಸ್ ಮತ್ತು ಮೋನಿ ನಡುವೆ ಸುಮಾರು ವರ್ಷಗಳಿಂದ ಗೆಳೆತನವಿತ್ತು. ಆನಂತರ ಅವರಿಬ್ಬರು ಪ್ರೇಮಿಗಳಾಗಿದ್ದರು. 39ರ ಹರೆಯದಲ್ಲಿರುವ ಮನಿಷಾ ಕಾಂಗರೂ ನಾಡಿನ ಚೆಲುವನ ಕೈಹಿಡಿಯಲಿದ್ದಾರೆ. ಒಬ್ಬ ವ್ಯಕ್ತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಅವನೊಂದಿಗೆ ಕೆಲಕಾಲ ಕಳೆಯಬೇಕು ಎಂಬುದು ಮೋನಿ ನಂಬಿಕೆ. ಹಾಗಾಗಿ ಕ್ರಿಸ್ ಜತೆ ನಾಲ್ಕು ತಿಂಗಳಿಂದ ಪ್ಯಾರಿಸ್ ನಲ್ಲಿದ್ದಾರಂತೆ.

ಇದೀಗ ಇವರಿಬ್ಬರ ನಡುವಿನ ಸ್ಟಡಿ ಅವಧಿ ಮುಗಿದಿದ್ದು ಗಟ್ಟಿಮೇಳಕ್ಕೆ ವೇದಿಕೆ ಸಿದ್ಧವಾಗಿದೆ. ಇನ್ನು ಡೋರಿಸ್ ವಿಚಾರಕ್ಕೆ ಬಂದರೆ, ಈತ ಲೇಖಕ, ಉದ್ಯಮಿ ಹಾಗೂ ಕ್ರೀಡಾ ಕೌನ್ಸಿಲರ್. ಡೋರಿಸ್ ನನ್ನು ಸ್ಟಡಿ ಮಾಡುವ ಸಲುವಾಗಿ ಬಾಲಿವುಡ್ ಚಿತ್ರರಂಗಕ್ಕೆ ಮನಿಷಾ ವಿದಾಯ ಹೇಳಿ ಪ್ಯಾರಿಸ್ ಗೆ ಹಾರಿದ್ದರು.

ಮುಂಬರುವ ಜನವರಿ ಅಥವಾ ಫೆಬ್ರವರಿಯಲ್ಲಿ ಮೋನಿಷಾ ಮದುವೆ ನೆರೆವೇರುವ ಸಾಧ್ಯತೆ ಇದೆ. ಇಷ್ಟರಲ್ಲೇ ಪ್ಯಾರಿಸ್ ನಲ್ಲಿ ಸೀಕ್ರೆಟ್ ವೆಡ್ಡಿಂಗ್ ಸೆರೆಮೊನಿ ನಡೆಯಲಿದೆ ಎಂಬ ಸುದ್ದಿಯೂ ಇದೆ. ಇಷ್ಟೆಲ್ಲಾ ನಡೆದಿದ್ದರೂ ಮನಿಷಾ ಮಾತ್ರ ತಾವು ಮದುವೆಯಾಗುತ್ತಿಲ್ಲ ಎಂದು ಹೇಳಿದ್ದಾರೆ. ಕೇವಲ ಇದೆಲ್ಲಾ ವದಂತಿ ಅಷ್ಟೇ ಎನ್ನುತ್ತಾರೆ ಏಕ್ ಚೋಟಿಸಿ ಲವ್ ಸ್ಟೋರಿ ಬೆಡಗಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada