For Quick Alerts
  ALLOW NOTIFICATIONS  
  For Daily Alerts

  ಅಭಿ-ಐಶ್ ಜೋಡಿಗೆ ನಾಲ್ಕರ ಸಂಭ್ರಮ; ರಜೆಯಿಲ್ಲ!

  By Srinath
  |

  ನವದೆಹಲಿ, ಏ. 12: ಬಾಲಿವುಡ್ ನ ಹೆಸರಾಂತ ಜೋಡಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ವಿವಾಹ ಬಂಧಕ್ಕೆ ಈಗ ನಾಲ್ಕರ ಸಂಭ್ರಮ. ಬೇಸರದ ಸಂಗತಿಯೆಂದರೆ ನಾಲ್ಕು ವರ್ಷಗಳ ಹಿಂದೆ ಏಪ್ರಿಲ್ 20ರಂದು ಮದುವೆಯಾಗಿದ್ದ ಈ ತಾರಾ ಜೋಡಿಗೆ ಸಂಭ್ರಮ ಆಚರಿಸಿಕೊಳ್ಳಲು ಬಾಲಿವುಡ್ ಮೊದಲ ಬಾರಿಗೆ ರಜೆನೇ ನೀಡಿಲ್ಲ!

  ಏಪ್ರಿಲ್ 22ರಂದು ಬಿಡುಗಡೆಯಾಗಲಿರುವ 'ದಮ್ ಮಾರೋ ದಮ್' ಚಿತ್ರಕ್ಕೆ ಜೀವ ತುಂಬುವ ಕಾರ್ಯದಲ್ಲಿ ತೊಡಗಿದ್ದೇನೆ. ಅದು ಮುಗಿಯುತ್ತಿದ್ದಂತಯೇ ಮತ್ತೊಂದು ಚಿತ್ರೀಕರಣದ ಬಿಸಿ ತಾಕಲಿದೆ. ಪ್ಲೇಯರ್ಸ್ ಚಿತ್ರಕ್ಕಾಗಿ ರಷ್ಯಾಕ್ಕೆ ತೆರಳಬೇಕಾಗಿದೆ. ಇನ್ನು ವಾರ್ಷಿಕೋತ್ಸವದ ಸಡಗರ ಎಲ್ಲಿಯದು ಎಂದು ಅಭಿ ತಣ್ಣಗೆ ಹೇಳಿದ್ದಾರೆ.

  35 ವರ್ಷದ ಅಭಿಷೇಕ್ ಕಳೆದ ವರ್ಷ ತಮ್ಮಾಕಿಯನ್ನು ಅಮೆರಿಕಕ್ಕೆ ಕರೆದೊಯ್ದಿದ್ದರು. 2009ರಲ್ಲಿಯೂ ಹೀಗೆ ರಜೆ ಪಡೆದಿದ್ದರು. ಮಣಿರತ್ನಂ ಅವರ ರಾವಣ ಶೂಟಿಂಗ್ ನಡುವೆಯೂ ದಂಪತಿ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಇನ್ನು, ಮೊದಲಾ ಸಲ ಮಿಯಾಮಿಯಲ್ಲಿ 'ದೋಸ್ತಾನಾ' ಎಂದು ಅಭಿಷೇಕ್ ಆಟವಾಡುತ್ತಿದ್ದರು. ನಮ್ಮ ಮಂಗಳೂರಿನ ಕುಡಿ ಐಶ್ವರ್ಯ ರೈ ಅಲ್ಲಿಗೇ ತೆರಳಿ, ಪತಿಯೊಂದಿಗೆ ಸೇರಿಕೊಂಡಿದ್ದರು. ಅಂದ ಹಾಗೆ 2007ರ ಮುಂಬೈನಲ್ಲಿ ತಾರಾ ದಂಪತಿ ವಿವಾಹವೇರ್ಪಟ್ಟಿತ್ತು.

  English summary
  Abhishek Bachchan and Aishwarya Rai tied the knot in 2007 in Mumbai. Since then the Bollywood's star couple were regularly taking break for the anniversary. But this not so thanks to busy shooting schedule says Abhi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X