For Quick Alerts
  ALLOW NOTIFICATIONS  
  For Daily Alerts

  'ಸೂಪರ್' ತಾರೆ ಟುಲಿಪ್ ಜೋಷಿ ವಿರುದ್ಧ ವಂಚನೆ ಕೇಸು

  By Rajendra
  |

  ರಿಯಲ್ ಸ್ಟಾರ್ ಉಪೇಂದ್ರ ಜೊತೆ 'ಸೂಪರ್' ಚಿತ್ರದಲ್ಲಿ ಮಿಂಚಿದ್ದಟುಲಿಫ್ ಜೋಷಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. 'ಡ್ಯಾಮ್ 999' ಚಿತ್ರಕ್ಕೆ ಟುಲಿಪ್ ಜೋಷಿ ರು.8.5 ಲಕ್ಷ ಮುಂಗಡ ಸಂಭಾವನೆ ತೆಗೆದುಕೊಂಡಿದ್ದು, ಚಿತ್ರೀಕರಣಕ್ಕೆ ಕೈಕೊಟ್ಟಿದ್ದಾಗಿ ಆರೋಪಿಸಿರುವ ನಿರ್ದೇಶಕರು(ಸೋಹನ್ ರಾಯ್), ಆಕೆಯ ವಿರುದ್ಧವಂಚನೆ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.

  ಚಿತ್ರ ಆರಂಭಕ್ಕೂ ಮುನ್ನ ಟುಲಿಪ್ ಜೋಷಿಅರ್ಧ ಸಂಭಾವನೆ (ರು.7 ಲಕ್ಷ) ಕೇಳಿದ್ದರು. ಮೊದಲ ಕಂತಿನ ರು.1.5 ಲಕ್ಷವನ್ನು ಟುಲಿಪ್‌ಗೆ ನಿರ್ಮಾಣ ಸಂಸ್ಥೆ ಬಿಜ್ ಟಿವಿ ನೆಟ್‌ವರ್ಕ್ ಪಾವತಿಸಿತ್ತು. ಎರಡು ದಿನ ಚಿತ್ರೀಕರಣಕ್ಕೆ ಬಂದು ಬಳಿಕ ಟುಲಿಪ್ ಕೈಕೊಟ್ಟಿದ್ದರು. ಹಣ ಹಿಂತಿರುಗಿಸಿ ಅಥವಾ ಚಿತ್ರೀಕರಣಕ್ಕೆ ಹಾಜರಾಗುವಂತೆ ತಿಳಿಸಲಾಯಿತು. ಆದರೆ ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಈ ಸಂಬಂಧ ತಾವು ನ್ಯಾಯಾಲಯದ ಮೆಟ್ಟೇಲೇರಿದ್ದಾಗಿ ಹೇಳಿದ್ದಾರೆ.

  ಕೊಚ್ಚಿಯ ಕಲಾಮಸ್ಸೆರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ. 1975ರಲ್ಲಿ ಚೀನಾದಲ್ಲಿ ಸಂಭವಿಸಿದ ಬಾನ್‌ಕಿಯಾವೋ ಅಣೆಕಟ್ಟು ದುರಂತದ ದಾರುಣ ಕತೆಯನ್ನು 'ಡ್ಯಾಮ್ 999' ಚಿತ್ರ ಒಳಗೊಂಡಿದೆ. ಸದ್ಯಕ್ಕೆ ಚಿತ್ರೀಕರಣ ಪೂರ್ಣಗೊಂಡಿದ್ದು 'ಡ್ಯಾಮ್ 999' ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ.

  ಇಂಗ್ಲಿಷ್ ಮತ್ತು ಮಲೆಯಾಳಂನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವ ಚಿತ್ರ ಇದು. ರಾಷ್ಟ್ರಪ್ರಶಸ್ತಿ ಪುರಸ್ಕೃತ ರಜಿತ್ ಕಪೂರ್, ಆಶಿಷ್ ವಿದ್ಯಾರ್ಥಿ, ಲಿಂಡಾ ಆರ್ಸೆನೋ, ಮೇಘಾ ಬರ್ಮನ್, ವಿನಯ್ ರೈ ಸೇರಿದಂತೆ ಹಲವಾರು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರವನ್ನು ಮಧ್ಯ ಪ್ರಾಚ್ಯ ಮೂಲದ ಬಿಜ್ ಟಿವಿ ನಿರ್ಮಿಸಿದೆ. [ [ಸೂಪರ್]

  English summary
  Film director Sohan Roy has filed a cheating case against Bollywood actress Tulip Joshi. He alleges that she is not completing the shooting for his film ''Dam 999'' despite taking part of her remuneration amounting to Rs.8.5 lakh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X