»   » ಅಮೀರ್ ಖಾನ್ ಮಗನ ಹೆಸರು ಆಜಾದ್ ರಾವ್ ಖಾನ್

ಅಮೀರ್ ಖಾನ್ ಮಗನ ಹೆಸರು ಆಜಾದ್ ರಾವ್ ಖಾನ್

Posted By:
Subscribe to Filmibeat Kannada

ಐಶ್ವರ್ಯ ರೈ ದಂಪತಿಗಳು ತಮ್ಮ ಕಂದನಿಗೆ ಏನು ಹೆಸರಿಡಬೇಕು ಎಂದು ಗೊತ್ತಾಗದೆ ಇನ್ನೂ ಚಡಪಡಿಸುತ್ತಿದ್ದಾರೆ. ಆದರೆ ಅಮೀರ್ ಖಾನ್ ಹಾಗೂ ಕಿರಣ್ ರಾವ್ ದಂಪತಿಗಳು ತಮ್ಮ ಮಗನಿಗೆ ಹೆಸರೊಂದನ್ನು ಇಟ್ಟಿದ್ದಾರೆ. ಆಜಾದ್ ರಾವ್ ಖಾನ್ ಎಂಬುದೇ ಆ ಹೆಸರು.

"ಕಡೆಗೂ ತಮ್ಮ ಕಂದನಿಗೆ ಆಜಾದ್ ರಾವ್ ಖಾನ್ ಎಂದು ಮುದ್ದಾದ ಹೆಸರೊಂದನ್ನು ಆಯ್ಕೆ ಮಾಡಿದ್ದೇವೆ. ಹೆಸರಿನ ಆಯ್ಕೆಯನ್ನು ಕಿರಣ್‌ಗೆ ಬಿಟ್ಟಿದ್ದೆ. ನನ್ನ ಮುತ್ತಜ್ಜ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಆಜಾದ್ ಅವರ ಹೆಸರನ್ನು ಸೇರಿಸಿ ಮಗುವಿಗೆ ನಾಮಕರಣ ಮಾಡಿದ್ದೇವೆ" ಎಂದು ಅಮೀರ್ ಟ್ವೀಟಿಸಿದ್ದಾರೆ.

ಆಜಾದ್ ಎಂದರೆ ಸ್ವಾತಂತ್ರ್ಯ ಅಥವಾ ಬಿಡುಗಡೆ ಎಂದರ್ಥ. ಡಿಸೆಂಬರ್ 1ರಂದು ಅಮೀರ್ ದಂಪತಿಗಳು ಪ್ರಣಾಳ ಶಿಶು (ಐವಿಎಫ್)ವನ್ನು ಬರಮಾಡಿಕೊಂಡಿದ್ದರು. ಕಂದನನ್ನು ಬರಮಾಡಿಕೊಂಡು ಹತ್ತು ದಿನ ಕಳೆಯುವಷ್ಟರಲ್ಲಿ ನಾಮಕರಣವನ್ನೂ ಮುಗಿಸಿದ್ದಾರೆ. (ಏಜೆನ್ಸೀಸ್)

English summary
Aamir Khan-Kiran Rao have named their newborn baby as Azad Rao Khan in less than 10 days after its birth. Well, the Perfectionist has announced it on a social networking site that they have named the baby after the actor's freedom fighter uncle Maulana Azad.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada